Veera Simha Reddy : ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ವೀರಸಿಂಹ ರೆಡ್ಡಿ HD ಪ್ರಿಂಟ್ ಲೀಕ್..!

ನಟಸಿಂಹ, ನಂದಮೂರಿ ಬಾಲಕೃಷ್ಣ ಅವರು ನಾಯಕನಾಗಿ ನಟಿಸಿರುವ ʼವೀರಸಿಂಹ ರೆಡ್ಡಿʼ ಥಿಯೇಟರ್‌ಗಳಲ್ಲಿ ಅಬ್ಬರಿಸುತ್ತಿದೆ. ಈ ಬ್ಲಾಕ್ಬಸ್ಟರ್‌ ಚಿತ್ರವನ್ನು  ಗೋಪಿಚಂದ್ ಮಲಿನೇನಿ ನಿರ್ದೇಶಿಸಿದ್ದಾರೆ. ಜನವರಿ 12 ರಂದು ದೊಡ್ಡ ಪರದೆ ಮೇಲೆ ಅಪ್ಪಳಿಸಿತು. ಶೃತಿ ಹಾಸನ್ ಮತ್ತು ಹನಿ ರೋಸ್ ಎನ್‌ಬಿಕೆ ಜೊತೆ ನಟಿಸಿದ್ದಾರೆ. ಇದೀಗ ಬಾಲಯ್ಯ ಚಿತ್ರಕ್ಕೆ ಸಂಕಷ್ಟವೊಂದು ಎದುರಾಗಿದ್ದು, ಚಿತ್ರದ ಹೆಚ್‌ಡಿ ಪ್ರೀಂಟ್‌ ವಿಡಿಯೋ ಲೀಕ್‌ ಆಗಿದೆ ಎನ್ನಲಾಗಿದೆ.

Written by - Krishna N K | Last Updated : Jan 12, 2023, 08:23 PM IST
  • ನಂದಮೂರಿ ಬಾಲಕೃಷ್ಣ ಅವರು ನಾಯಕನಾಗಿ ನಟಿಸಿರುವ ʼವೀರಸಿಂಹ ರೆಡ್ಡಿʼ ಥಿಯೇಟರ್‌ಗಳಲ್ಲಿ ಅಬ್ಬರಿಸುತ್ತಿದೆ.
  • ಇದೀಗ ಬಾಲಯ್ಯ ಚಿತ್ರಕ್ಕೆ ಸಂಕಷ್ಟವೊಂದು ಎದುರಾಗಿದ್ದು, ಚಿತ್ರದ ಹೆಚ್‌ಡಿ ಪ್ರೀಂಟ್‌ ವಿಡಿಯೋ ಲೀಕ್‌ ಆಗಿದೆ ಎನ್ನಲಾಗಿದೆ.
  • ಸಿನಿಮಾ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಹೆಚ್‌ಡಿ ಪ್ರಿಂಟ್ ಆನ್‌ಲೈನ್ ಲೀಕ್‌ ಮಾಡಲಾಗಿದೆ.
Veera Simha Reddy : ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ವೀರಸಿಂಹ ರೆಡ್ಡಿ HD ಪ್ರಿಂಟ್ ಲೀಕ್..! title=

Veera Simha Reddy film HD Print Leaked : ನಟಸಿಂಹ, ನಂದಮೂರಿ ಬಾಲಕೃಷ್ಣ ಅವರು ನಾಯಕನಾಗಿ ನಟಿಸಿರುವ ʼವೀರಸಿಂಹ ರೆಡ್ಡಿʼ ಥಿಯೇಟರ್‌ಗಳಲ್ಲಿ ಅಬ್ಬರಿಸುತ್ತಿದೆ. ಈ ಬ್ಲಾಕ್ಬಸ್ಟರ್‌ ಚಿತ್ರವನ್ನು  ಗೋಪಿಚಂದ್ ಮಲಿನೇನಿ ನಿರ್ದೇಶಿಸಿದ್ದಾರೆ. ಜನವರಿ 12 ರಂದು ದೊಡ್ಡ ಪರದೆ ಮೇಲೆ ಅಪ್ಪಳಿಸಿತು. ಶೃತಿ ಹಾಸನ್ ಮತ್ತು ಹನಿ ರೋಸ್ ಎನ್‌ಬಿಕೆ ಜೊತೆ ನಟಿಸಿದ್ದಾರೆ. ಇದೀಗ ಬಾಲಯ್ಯ ಚಿತ್ರಕ್ಕೆ ಸಂಕಷ್ಟವೊಂದು ಎದುರಾಗಿದ್ದು, ಚಿತ್ರದ ಹೆಚ್‌ಡಿ ಪ್ರೀಂಟ್‌ ವಿಡಿಯೋ ಲೀಕ್‌ ಆಗಿದೆ ಎನ್ನಲಾಗಿದೆ.

ವೀರಸಿಂಹ ರೆಡ್ಡಿ ಸಿನಿಮಾದ ಪ್ರಥಮ ಪ್ರದರ್ಶನ ಅಮೆರಿಕದಲ್ಲಿ ನಡೆಯಿತು. ಸೂಪರ್‌ ಟಾಕ್ ಬಂದ ಹಿನ್ನೆಲೆ ದೊಡ್ಡ ಮಟ್ಟದಲ್ಲಿ ಥಿಯೇಟರ್‌ಗಳ ಮುಂದೆ ಜನರು ಕ್ಯೂ ನಿಂತಿದ್ದಾರೆ. ಒಂದೆಡೆ ಸಂಕ್ರಾಂತಿ ರಜೆಯೂ ಒಟ್ಟೊಟ್ಟಿಗೆ ಬರುತ್ತಿರುವುದರಿಂದ ಸಿನಿಮಾ ನೋಡಲು ಜನರು ಆಸಕ್ತಿ ತೋರಿಸುತ್ತಿದ್ದಾರೆ. ಮೊದಲ ರಿಲೀಸ್ ನಿಂದಲೇ ಒಳ್ಳೆ ಪಾಸಿಟಿವ್ ಟಾಕ್ ಪಡೆಯುತ್ತಿರುವ ಈ ಸಿನಿಮಾಗೆ ಪೈರಸಿ ಬಿಸಿ ತಟ್ಟಿದೆ. ಸಿನಿಮಾ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಹೆಚ್‌ಡಿ ಪ್ರಿಂಟ್ ಆನ್‌ಲೈನ್ ಲೀಕ್‌ ಮಾಡಲಾಗಿದೆ.

ಇದನ್ನೂ ಓದಿ: ʼನಾಟು ನಾಟುʼ ಹಾಡಿಗೆ ಸ್ಟೇಪ್‌ ಹಾಕಿ RRR ತಂಡಕ್ಕೆ ಶುಭ ಕೋರಿದ ಟೈಗರ್‌..! ವಿಡಿಯೋ ನೋಡಿ

ರಿಲೀಸ್ ಆದ ಯಾವುದೇ ಹೊಸ ಸಿನಿಮಾ ಪೈರಸಿ ವಿಡಿಯೋ ರಿಲೀಸ್ ಆಗುವ ವಿಚಾರ ಎಲ್ಲರಿಗೂ ತಿಳಿದಿದೆ. ಆದ್ರೆ, ಈ ಸಿನಿಮಾ ಹೆಚ್‌ಡಿ ಪ್ರಿಂಟ್‌ನಲ್ಲಿ ಬಿಡುಗಡೆಯಾಗಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಆದರೆ, ಈ ವಿಷಯವನ್ನು ಈಗಾಗಲೇ ಗಮನಿಸಿದ ಅಭಿಮಾನಿಗಳು ಆಯಾ ವೆಬ್‌ಸೈಟ್‌ಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಚಿತ್ರದ ನಿರ್ಮಾಪಕರಿಗೆ ಮನವಿ ಮಾಡಿದ್ದಾರೆ. ಇದನ್ನು ತಡೆಯಲು ತಯಾರಕರು ಆಂಟಿಪೈರಸಿ ತಂಡಗಳನ್ನು ರಚಿಸಿದ್ದಾರೆಂದು ಹೇಳಲಾಗುತ್ತಿದೆ.

ಆ್ಯಂಟಿ ಪೈರಸಿ ಸೆಲ್ ಟೀಮ್‌ ಆನ್‌ಲೈನ್‌ ಲಿಂಕ್‌ಗಳ ಮೇಲೆ ಗಮನಹರಿಸಿದೆ ಎನ್ನಲಾಗಿದೆ. ಆ್ಯಂಟಿ ಪೈರಸಿ ಸೆಲ್ ಲಿಂಕ್‌ಗಳನ್ನು ನಿಷ್ಕ್ರಿಯಗೊಳಿಸಲು ಮತ್ತು ಅವುಗಳನ್ನು ಕಾರ್ಯನಿರ್ವಹಿಸದಂತೆ ಮಾಡಲು ಮುಂದಾಗಿದೆ ಎಂದು ತಿಳಿದು ಬಂದಿದೆ. ಹೆಚ್‌ಡಿ ಪ್ರಿಂಟ್ ಕೆಲವೇ ಗಂಟೆಗಳಲ್ಲಿ ಸೋರಿಕೆಯಾಗುವುದರಿಂದ ವೀರಸಿಂಹ ರೆಡ್ಡಿ ಕೆಲೆಕ್ಷನ್‌ ಮೇಲೆ ಪರಿಣಾಮ ಬೀರುವ ದೊಡ್ಡ ಅವಕಾಶವಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News