ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಗಾಯಕ ವಾಸುಕಿ ವೈಭವ್! ಮದುವೆ ಆಗ್ತಿರೋ ಹುಡುಗಿ ಯಾರು ಗೊತ್ತಾ?

Vasuki Vaibhav Marriage, entertainment news in kannada: ಟಗರು ಪಲ್ಯ ಚಿತ್ರದ ಪ್ರಚಾರದ ವೇಳೆ ಈ ವಿಷಯ ಬಹಿರಂಗವಾಗಿದೆ. ಈ ಸಿನಿಮಾದಲ್ಲಿ ಮದುವೆ ಹುಡುಗನಾಗಿ ವಾಸುಕಿ ವೈಭವ್ ಅಭಿನಯಿಸಿದ್ದರು. ಇದೇ ಕಾರಣಕ್ಕೆ ಆ್ಯಂಕರ್ ಅನುಶ್ರೀ “ನೀವು ಮದುವೆ ಆಗುವ ಹುಡುಗಿ ಹೇಗಿರಬೇಕು” ಎಂಬ ಪ್ರಶ್ನೆ ಕೇಳಿದ್ದರು.

Written by - Bhavishya Shetty | Last Updated : Nov 8, 2023, 10:51 PM IST
    • ಕನ್ನಡದ ಖ್ಯಾತ ಯುವ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಮದುವೆ
    • ಈ ಬಗ್ಗೆ ಮಾಹಿತಿ ಬಹಿರಂಗಪಡಿಸಿದ್ದು ನಟಿ ತಾರಾ
    • ಟಗರು ಪಲ್ಯ ಚಿತ್ರದ ಪ್ರಚಾರದ ವೇಳೆ ಈ ವಿಷಯ ಬಹಿರಂಗವಾಗಿದೆ
ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಗಾಯಕ ವಾಸುಕಿ ವೈಭವ್! ಮದುವೆ ಆಗ್ತಿರೋ ಹುಡುಗಿ ಯಾರು ಗೊತ್ತಾ?  title=
vasuki vaibhav marriage

Vasuki Vaibhav Marriage: ಕನ್ನಡದ ಖ್ಯಾತ ಯುವ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಮದುವೆ ಸುದ್ದಿ ಮುನ್ನೆಲೆಗೆ ಬಂದಿದೆ. ಇದೇ ತಿಂಗಳು ಅಂದರೆ ನವೆಂಬರ್ ತಿಂಗಳಲ್ಲೇ ಬಹುಕಾಲದ ಗೆಳತಿಯೊಡನೆ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮಾಹಿತಿ ಬಹಿರಂಗಪಡಿಸಿದ್ದು ನಟಿ ತಾರಾ.

ಇದನ್ನೂ ಓದಿ: “ಈ ಆಟಗಾರ ಶ್ರೀಲಂಕಾಗೆ ಬಂದ್ರೆ ಕಲ್ಲಲ್ಲಿ ಹೊಡಿತೀವೆ”- ಸ್ಟಾರ್ ಕ್ರಿಕೆಟಿಗನ ಸಹೋದರ ವಾರ್ನ್

ಟಗರು ಪಲ್ಯ ಚಿತ್ರದ ಪ್ರಚಾರದ ವೇಳೆ ಈ ವಿಷಯ ಬಹಿರಂಗವಾಗಿದೆ. ಈ ಸಿನಿಮಾದಲ್ಲಿ ಮದುವೆ ಹುಡುಗನಾಗಿ ವಾಸುಕಿ ವೈಭವ್ ಅಭಿನಯಿಸಿದ್ದರು. ಇದೇ ಕಾರಣಕ್ಕೆ ಆ್ಯಂಕರ್ ಅನುಶ್ರೀ “ನೀವು ಮದುವೆ ಆಗುವ ಹುಡುಗಿ ಹೇಗಿರಬೇಕು” ಎಂಬ ಪ್ರಶ್ನೆ ಕೇಳಿದ್ದರು. ಅದಕ್ಕೆ ಜಸ್ಟ್ ಸ್ಮೈಲ್ ಮಾಡಿ ಸುಮ್ಮನಾದರು. ಆದರೆ ಪಕ್ಕದಲ್ಲಿಯೇ ಕುಳಿತಿದ್ದ ನಟಿ ತಾರಾ, “ಮುಂದಿನ ತಿಂಗಳು ವಾಸುಕಿ ಮದುವೆ” ಎಂದು ಬಾಯಿ ತಪ್ಪಿ ಹೇಳಿದ್ದಾರೆ.

ವಾಸುಕಿ ವೈಭವ್ ಮದುವೆ ನವೆಂಬರ್ 16 ರಂದು ನಡೆಯಲಿದೆ ಎಂದು ಸುದ್ದಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಅಷ್ಟಕ್ಕೂ ವಾಸುಕಿ ಕೈಹಿಡಿಯುವ ಮುದ್ದು ಚೆಲುವೆ ಯಾರು ಎಂಬ ಪ್ರಶ್ನೆ ಸದ್ಯ ಎಲ್ಲರಲ್ಲೂ ಕಾಡುತ್ತಿದೆ.

ಇದನ್ನೂ ಓದಿ: ಜಸ್ಪ್ರೀತ್ ಬುಮ್ರಾ ಎಸೆದ ಬಾಲ್ ಹೊಟ್ಟೆಗೆ ಬಡಿದು ಕುಸಿದುಬಿದ್ದ ಟೀಂ ಇಂಡಿಯಾದ ಸ್ಟಾರ್ ಆಟಗಾರ!

ಇನ್ನು ನಟಿ ತಾರಾ ಅವರು ಮದುವೆ ಸುದ್ದಿ ಬಹಿರಂಗಪಡಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News