ಗರ್ಲ್ ಫ್ರೆಂಡ್ ಜೊತೆಗಿನ ನಿಶ್ಚಿತಾರ್ಥ ಕೈ ಬಿಟ್ಟ ಬಾಲಿವುಡ್ ನಟ ವರುಣ್ ಧವನ್...!

ವರುಣ್ ಧವನ್ ತನ್ನ ಹುಟ್ಟುಹಬ್ಬದಂದು ಗೆಳತಿ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳುವ ಯೋಜನೆಯನ್ನು ಹೊಂದಿದ್ದರು.ಆದರೆ ಈಗ ಬಂದಿರುವ ಮಾಹಿತಿ ಪ್ರಕಾರ ಈಗ ಅವರು ನಿಶ್ಚಿತಾರ್ಥದ ಪ್ಲಾನ್ ನ್ನು ಕೈ ಬಿಟ್ಟಿದ್ದಾರೆ ಎಂದು ಹತ್ತಿರದ ಮೂಲಗಳು ತಿಳಿಸಿವೆ. 

Last Updated : Apr 26, 2019, 01:44 PM IST
ಗರ್ಲ್ ಫ್ರೆಂಡ್ ಜೊತೆಗಿನ ನಿಶ್ಚಿತಾರ್ಥ ಕೈ ಬಿಟ್ಟ ಬಾಲಿವುಡ್ ನಟ ವರುಣ್ ಧವನ್...! title=
file photo

ನವದೆಹಲಿ: ವರುಣ್ ಧವನ್ ತನ್ನ ಹುಟ್ಟುಹಬ್ಬದಂದು ಗೆಳತಿ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳುವ ಯೋಜನೆಯನ್ನು ಹೊಂದಿದ್ದರು.ಆದರೆ ಈಗ ಬಂದಿರುವ ಮಾಹಿತಿ ಪ್ರಕಾರ ಈಗ ಅವರು ನಿಶ್ಚಿತಾರ್ಥದ ಪ್ಲಾನ್ ನ್ನು ಕೈ ಬಿಟ್ಟಿದ್ದಾರೆ ಎಂದು ಹತ್ತಿರದ ಮೂಲಗಳು ತಿಳಿಸಿವೆ. 

"ಕೂಲಿ ನಂಬರ್ 1 ನ್ನು ಘೋಷಿಸುವ ಯೋಜನೆ ಬಗ್ಗೆ ಕೇಳಿದ್ದೆವು.ಇದೇ ವೇಳೆ ವರುಣ್ ಧವನ್ ಗೆಳತಿ ನಟಾಷಾಳ ನಿಶ್ಚಿತಾರ್ಥದ ಕಾರ್ಯಕ್ರಮವು ಇತ್ತು ಆದರೆ ಕೊನೆಯ ಕ್ಷಣದಲ್ಲಿ ಈಗ ಈ ಯೋಜನೆಯನ್ನು ಬದಲಿಸಿರುವ ವರುಣ್ ಹುಟ್ಟುಹಬ್ಬದ ಪ್ರಯುಕ್ತ ತನ್ನ ಗೆಳತಿಯೊಂದಿಗೆ ವಿದೇಶಕ್ಕೆ ಹಾರಲಿದ್ದಾರೆ" ಎನ್ನುವ ಮಾಹಿತಿಯನ್ನು ಮೂಲಗಳು ತಿಳಿಸಿವೆ.

ಈ ಹಿನ್ನಲೆಯಲ್ಲಿ ವರುಣ್ ಧವನ್ ಮತ್ತು ನಟಾಷಾ ಅವರ ನಿಶ್ಚಿತಾರ್ಥ ಮತ್ತು ಮದುವೆಗೆ ತಾತ್ಕಾಲಿಕ ತಡೆ ನೀಡಲಾಗಿದೆ. ವರುಣ್ ಸದ್ಯ ಬ್ಯುಸಿಯಾಗಿದ್ದಾರೆ.ಆದ್ದರಿಂದ ಅವರು ತಮ್ಮ ವೇಳಾಪಟ್ಟಿಗೆ ಅನುಗುಣವಾಗಿ ನಿಶ್ಚಿತಾರ್ಥ ಮತ್ತು ಮದುವೆ ಸಮಯವನ್ನು ಮೀಸಲಿಡಬೇಕು.ಆದ್ದರಿಂದ ಅದು ಎದ್ದಿನಂತೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

 

Trending News