Urfi Javed-Sunny Leone Video: ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸನ್ನಿ ಲಿಯೋನ್-ಉರ್ಫಿ ಭೇಟಿ, ನೆಟ್ಟಿಗರು ಅಂದಿದ್ದೇನು ಗೊತ್ತಾ?

Urfi Javed-Sunny Leone Video:  ಸನ್ನಿ ಲಿಯೋನ್ ಮತ್ತು ಉರ್ಫಿ ಜಾವೇದ್ ಇತ್ತೀಚೆಗೆ OTT ಪ್ಲೇ ಚೇಂಜ್ ಮೇಕರ್ಸ್ ಅವಾರ್ಡ್ಸ್ 2023 ಶೋನಲ್ಲಿ ಪರಸ್ಪರ ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರೂ ಒಬ್ಬರನ್ನೊಬ್ಬರು ತಬ್ಬಿಕೊಳ್ಳುತ್ತಿರುವುದು ಕಂಡುಬಂದಿತು.  

Written by - Nitin Tabib | Last Updated : Mar 27, 2023, 10:02 PM IST
  • ಸನ್ನಿ ಲಿಯೋನ್ ಮತ್ತು ಉರ್ಫಿ ಜಾವೇದ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿದೆ.
  • ಸನ್ನಿ ಲಿಯೋನ್ ಮತ್ತು ಉರ್ಫಿ ಜಾವೇದ್ ಅವರ ಈ ವೀಡಿಯೊ ಮೇಲೆ, ಜನರು ಸಾಕಷ್ಟು ಪ್ರೀತಿಯ ಮಳೆಯನ್ನು ಸುರಿಸುತ್ತಿದ್ದಾರೆ.
  • ಕೆಲವರು ಉರ್ಫಿ ಅವರ ಆತ್ಮವಿಶ್ವಾಸವನ್ನು ಶ್ಲಾಘಿಸುತ್ತಿರುವುದು ಕಂಡುಬಂದರೆ, ಕೆಲವರು ಸನ್ನಿ ಲಿಯೋನ್ ಅವರ ನೋಟವನ್ನು ತುಂಬಾ ಮುದ್ದಾಗಿದೆ ಎಂದು ಹೇಳುತ್ತಿದ್ದಾರೆ.
Urfi Javed-Sunny Leone Video: ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸನ್ನಿ ಲಿಯೋನ್-ಉರ್ಫಿ ಭೇಟಿ, ನೆಟ್ಟಿಗರು ಅಂದಿದ್ದೇನು ಗೊತ್ತಾ? title=
ಉರ್ಫಿ-ಸನ್ನಿ ವೈರಲ್ ವಿಡಿಯೋ

Urfi Javed-Sunny Leone Video:  ಬಾಲಿವುಡ್ ನಟಿ ಸನ್ನಿ ಲಿಯೋನ್ ಸಾಮಾಜಿಕ ಮಾಧ್ಯಮದಲ್ಲಿ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದ್ದಾಳೆ. ಸನ್ನಿ ಲಿಯೋನ್ ಅವರ ಚಿತ್ರಗಳು ಮತ್ತು ವೀಡಿಯೊಗಳು ಬಂದ ತಕ್ಷಣ ಅವು ಸಾಕಷ್ಟು ಹೆಡ್ಲೈನ್ ಮಾಡುತ್ತವೆ. ಇತ್ತೀಚೆಗೆ, ಸನ್ನಿ ಲಿಯೋನ್ OTT ಪ್ಲೇ ಚೇಂಜ್ ಮೇಕರ್ಸ್ ಅವಾರ್ಡ್ಸ್ 2023 ಕಾರ್ಯಕ್ರಮದಲ್ಲಿ ಭಾಗವಹಿಸಲು ತಲುಪಿದ್ದಾರೆ. ಈ ಸಮಯದಲ್ಲಿ, ಸನ್ನಿ ಲಿಯೋನ್ ಸಂಪೂರ್ಣವಾಗಿ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾಳೆ. ಈ ಸಂದರ್ಭದಲ್ಲಿ, ಸನ್ನಿ ಲಿಯೋನ್ ಜೊತೆಗೆ ಸಾಮಾಜಿಕ ಮಾಧ್ಯಮದಲ್ಲಿ ತನ್ನ ಚಿತ್ರ ವಿಚಿತ್ರ ಫ್ಯಾಶನ್ ಮೂಲಕ ಭಾರಿ ಹೆಡ್ಲೈನ್ ಗಿಟ್ಟಿಸುವ ಉರ್ಫಿ ಜಾವೇದ್ ಕೂಡ ಸನ್ನಿ ಜೊತೆಗೆ ಕಾಣಿಸಿಕೊಂಡಿದ್ದಾಳೆ. ಸನ್ನಿ ಲಿಯೋನ್ ಮತ್ತು ಉರ್ಫಿ ಜಾವೇದ್ ಅವರ ವೀಡಿಯೊ ಕೂಡ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇವರಿಬ್ಬರ ಈ ವಿಡಿಯೋ ಬಂದ ಕೂಡಲೇ ಇಂಟರ್‌ನೆಟ್‌ನಲ್ಲಿ ಭಾರಿ ಸಂಚಲನ ಮೂಡಿದೆ.

ಇದನ್ನೂ ಓದಿ-Viral Video: ಪತಿಯ ಕೊಬ್ಬು ಕರಗಿಸಲು ಪತ್ನಿ ಕಂಡುಕೊಂಡ ವಿನೂತನ ವಿಧಾನ, ವಿಡಿಯೋ ನೋಡಿ!

ಪ್ರಶಸ್ತಿ ಕಾರ್ಯಕ್ರಮದಲ್ಲಿ ಉರ್ಫಿ ಜಾವೇದ್-ಸನ್ನಿ ಲಿಯೋನ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ
OTT ಪ್ಲೇ ಚೇಂಜ್ ಮೇಕರ್ಸ್ ಅವಾರ್ಡ್ಸ್ 2023 ನಿನ್ನೆ ಅಂದರೆ ಮಾರ್ಚ್ 26 ರಂದು ನಡೆದಿದೆ. ಈ ಸಮಾರಂಭದಲ್ಲಿ ಬಾಲಿವುಡ್‌ನಿಂದ OTT ವರೆಗಿನ ಅನೇಕ ದೊಡ್ಡ ತಾರೆಯರು ಕಾಣಿಸಿಕೊಂಡಿದ್ದಾರೆ. ಆದರೆ ಎಲ್ಲರ ಗಮನ ಸೆಳೆದಿದ್ದು ಮಾತ್ರ ಉರ್ಫಿ ಜಾವೇದ್ ಮತ್ತು ಸನ್ನಿ ಲಿಯೋನ್. ಈ ಕಾರ್ಯಕ್ರಮದಿಂದ  ಸನ್ನಿ ಲಿಯೋನ್ ಮತ್ತು ಉರ್ಫಿ ಜಾವೇದ್ ಅವರ ವೀಡಿಯೊ ಹೊರಹೊಮ್ಮಿದ್ದು. ಈ ವಿಡಿಯೋದಲ್ಲಿ ಸನ್ನಿ ಲಿಯೋನ್ ಮತ್ತು ಉರ್ಫಿ ಜಾವೇದ್ ಒಬ್ಬರನ್ನೊಬ್ಬರು ತಬ್ಬಿಕೊಳ್ಳುತ್ತಿದ್ದಾರೆ. ಸನ್ನಿ ಲಿಯೋನ್ ಡೀಪ್ ನೆಕ್ ಡ್ರೆಸ್ ಧರಿಸಿ ಕಾಣಿಸಿಕೊಂಡಿದ್ದರೆ, ಉರ್ಫಿ ಜಾವೇದ್ ತನ್ನ ಹೊಸ ಡ್ರೆಸ್ ಮೂಲಕ ಜನರನ್ನು ಮತ್ತೊಮ್ಮೆ ಅಚ್ಚರಿಗೊಳಿಸಿದ್ದಾರೆ. ಉರ್ಫಿ ಜಾವೇದ್ ಮತ್ತು ಸನ್ನಿ ಲಿಯೋನ್ ಒಟ್ಟಿಗೆ ಕಾಣಿಸಿಕೊಂಡ ನಂತರ ಅಭಿಮಾನಿಗಳು ತರಹೇವಾರಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

ಇದನ್ನೂ ಓದಿ-Viral Video: ಎಪ್ಪೋ... ! 3 ಕೆಜಿ ತೂಕದ ಒಂದು ಬಾಳೆಹಣ್ಣು, ನೀವೆಂದಾದರೂ ನೋಡಿದ್ದೀರಾ ಅಥವಾ ಕೇಳಿದ್ದೀರಾ? ವಿಡಿಯೋ ನೋಡಿ..

ಉರ್ಫಿ-ಸನ್ನಿ ಅವರ ವೀಡಿಯೊಗೆ ನೆಟ್ಟಿಗರ ಪ್ರತಿಕ್ರಿಯೆ ಹೇಗಿದೆ? 
ಸನ್ನಿ ಲಿಯೋನ್ ಮತ್ತು ಉರ್ಫಿ ಜಾವೇದ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿದೆ. ಸನ್ನಿ ಲಿಯೋನ್ ಮತ್ತು ಉರ್ಫಿ ಜಾವೇದ್ ಅವರ ಈ ವೀಡಿಯೊ ಮೇಲೆ, ಜನರು ಸಾಕಷ್ಟು ಪ್ರೀತಿಯ ಮಳೆಯನ್ನು ಸುರಿಸುತ್ತಿದ್ದಾರೆ. ಕೆಲವರು ಉರ್ಫಿ ಅವರ ಆತ್ಮವಿಶ್ವಾಸವನ್ನು ಶ್ಲಾಘಿಸುತ್ತಿರುವುದು ಕಂಡುಬಂದರೆ, ಕೆಲವರು ಸನ್ನಿ ಲಿಯೋನ್ ಅವರ ನೋಟವನ್ನು ತುಂಬಾ ಮುದ್ದಾಗಿದೆ ಎಂದು ಹೇಳುತ್ತಿದ್ದಾರೆ. ಸನ್ನಿ ಲಿಯೋನ್ ಮತ್ತು ಉರ್ಫಿ ಜಾವೇದ್ ಅವರ ಈ ವೀಡಿಯೊದ ಬಗ್ಗೆ ನಿಮ್ಮ ಅಭಿಪ್ರಾಯವೇನು, ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News