Kabzaa review : ಶಿವಣ್ಣನ ಎಂಟ್ರಿ, ಕಿಚ್ಚನ ಖದರ್‌, ಉಪ್ಪಿ ಆರ್ಭಟ..! ಹೇಗಿದೆ ಗೊತ್ತಾ ʼಕಬ್ಜʼ..?

Upendra Kabza movie : ಕನ್ನಡದ ಪ್ಯಾನ್‌ ಇಂಡಿಯಾ ಸಿನಿಮಾ ಕಬ್ಜ ರಿಲೀಸ್‌ ಆಗಿದೆ. ಆರ್‌. ಚಂದ್ರು ನಿರ್ದೇಶನದ ಮೋಡಿಗೆ ಪ್ರೇಕ್ಷಕ ಮಹಾಶಯ ಫಿದಾ ಆಗಿದ್ದಾನೆ. ಉಪ್ಪಿ ನಟನೆ, ಕಿಚ್ಚನ ಖಾಕಿ ಖದರ್‌, ಶಿವರಾಜ್‌ಕುಮಾರ್‌ ಎಂಟ್ರಿ ಹಾಗೂ ಶ್ರಿಯಾ ಅಂದ ಸಿನಿಮಾದ ಸೆಂಟರ್‌ ಅಕ್ರ್ಯಾಕ್ಷನ್‌ ಅಂತ ಹೇಳಬಹುದು. ಹಾಗಿದ್ರೆ ಫುಲ್‌ ಮೂವಿ ಹೇಗಿದೆ ಅಂತಿ ತಿಳಿಬೇಕು ಅಂದ್ರೆ ಕಂಪ್ಲೀಟ್‌ ಸ್ಟೋರಿ ಓದಿ.

Written by - YASHODHA POOJARI | Edited by - Krishna N K | Last Updated : Mar 17, 2023, 12:11 PM IST
  • ಕನ್ನಡದ ಪ್ಯಾನ್‌ ಇಂಡಿಯಾ ಸಿನಿಮಾ ಕಬ್ಜ ರಿಲೀಸ್‌ ಆಗಿದೆ.
  • ಉಪ್ಪಿ ನಟನೆ, ಕಿಚ್ಚನ ಖಾಕಿ ಖದರ್‌, ಶಿವರಾಜ್‌ಕುಮಾರ್‌ ಎಂಟ್ರಿ ಸೂಪರ್‌.
  • ಶ್ರಿಯಾ ಅಂದ ಸಿನಿಮಾದ ಸೆಂಟರ್‌ ಅಕ್ರ್ಯಾಕ್ಷನ್‌ ಅಂತ ಹೇಳಬಹುದು.
Kabzaa review : ಶಿವಣ್ಣನ ಎಂಟ್ರಿ, ಕಿಚ್ಚನ ಖದರ್‌, ಉಪ್ಪಿ ಆರ್ಭಟ..! ಹೇಗಿದೆ ಗೊತ್ತಾ ʼಕಬ್ಜʼ..? title=

Kabzaa latest review : ಕೊನೆಗೂ ಬಹುನಿರೀಕ್ಷೆಯ 'ಕಬ್ಜ' ಸಿನಿಮಾ ತೆರೆಯ ಮೇಲೆ ಅಪ್ಪಳಿಸಿ ಬೊಬ್ಬಿರಿದಿದೆ. ಸುಮಾರು 4ಸಾವಿರ ಥಿಯೇಟರ್‌ನಲ್ಲಿ ರಿಲೀಸ್ ಆದ 'ಕಬ್ಜ' ಸಿನಿಮಾವನ್ನ ಪ್ರೇಕ್ಷಕರು ಒಪ್ಪಿ ಅಪ್ಪಿದ್ದಾರೆ. ಅಪ್ಪು ಹುಟ್ಟುಹಬ್ಬದ ದಿನ ರಿಲೀಸ್ ಆದ ಕಬ್ಜ ಚಿತ್ರತಂಡ ಸಿನಿಮಾ ಆರಂಭಕ್ಕೂ ಮುನ್ನ ವಿಶೇಷ ನಮನ ಸಲ್ಲಿಸಿದೆ.
ಉಪೇಂದ್ರ, ಕಿಚ್ಚ ಸುದೀಪ್, ಶಿವರಾಜ್‌ಕುಮಾರ್ ನಟನೆಯ ಕಬ್ಜ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು. ವಿಶುಯಲ್ ಮಾತ್ರ ಆಹಾ ಓಹೋ ಅನ್ನುವಂತಿದೆ. ಅಭಿಮಾನಿಗಳಿಗೆ ಹಬ್ಬದ ವಾತಾವರಣ ನೀಡುವ ಚಿತ್ರವಿದು. ತಾಂತ್ರಿಕವಾಗಿ ಈ ಚಿತ್ರ ತುಂಬ ಬಲಿಷ್ಠವಾಗಿದೆ. ಕನ್ನಡ ಚಿತ್ರರಂಗ ಎಲ್ಲೋ ಹೋಗ್ತಾ ಇದೆ, ಸಿನಿಮಾ ರಂಗ ರೀಚ್ ಆಗ್ತಿರೋ ಲೆವೆಲ್ ನೋಡಿ ನಿಜಕ್ಕೂ ಖುಷಿಯಾಗುತ್ತಿದೆ. 

ಇದನ್ನೂ ಓದಿ: Kabzaa : ʼಕಬ್ಜʼ ನೋಡುವ ಮೊದಲು ನೀವು ನೋಡಲೇಬೇಕಾದ ಟ್ಟೀಟ್‌ಗಳಿವು..!

ಕನ್ನಡ ಚಿತ್ರರಂಗದ ಮೂರು ದಿಗ್ಗಜರು ನಟಿಸಿರುವ ಸಿನಿಮಾ ಕಬ್ಜ. ಸಾಕಷ್ಟು ಟ್ವಿಸ್ಟ್ ಮತ್ತು ಟರ್ನ್ ಗಳು ಸಿನಿಮಾದಲ್ಲಿದೆ. ಇಲ್ಲಿರೌಡಿಸಂ ಇದೆ, ಪ್ರೀತಿ ಇದೆ, ಕೌಟುಂಬಿಕ ಕಥೆ ಇದೆ. ಸ್ವಾತಂತ್ರ್ಯ ಹೋರಾಟದ ಅಂಶಗಳಿವೆ. ಅಣ್ಣತಮ್ಮ ನ ಪ್ರೀತಿಯ ಸಂಬಂಧವಿದೆ. ಸೂಪರ್ ಹಿಟ್ ಆದ ನಮಾಮಿ ಹಾಡನ್ನ ಬಿಗ್ ಸ್ಕ್ರೀನ್ ಮೇಲೆ ನೋಡೋ ಆನಂದವೇ ಬೇರೇ ಬಿಡಿ. 1960-70 ರ ಕಾಲಘಟ್ಟದ ಸಿನಿಮಾ ಇದಾಗಿದೆ. ಇದರಲ್ಲಿ ಉಪ್ಪಿ ತುಂಬಾ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.

ಕಿಚ್ಚ ಸುದೀಪ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನೂ ಶಿವಣ್ಣನ ಪಾತ್ರ ಏನು ಅನ್ನೋದನ್ನ ನೀವು ಥೀಯೇಟರ್‌ಗೆ ಬಂದು ನೋಡಿದ್ರೆ ಥ್ರಿಲ್ ಬಿಡಿ. ಬಹುಭಾಷಾ ನಟಿ ಶ್ರಿಯಾ ಸರಣ್‌ ಅವರು ಇಲ್ಲಿ ಮಧುಮತಿ ಎಂಬ ರಾಣಿಯ ಪಾತ್ರ ಮಾಡಿದ್ದಾರೆ. ಹಾಗೆಯೇ ತೆಲುಗಿನ ಮುರಳಿ ಶರ್ಮಾ, ಕೋಟಾ ಶ್ರೀನಿವಾಸ್‌ ರಾವ್‌, ಪೊಸಾನಿ ಮುರಳಿ ಕೃಷ್ಣ, ದೇವ್‌ ಗಿಲ್‌, ನವಾಬ್‌ ಶಾ, ಜಾನ್‌ ಕೊಕೇನ್‌, ಕಬೀರ್‌ ದುಹಾನ್‌ ಸಿಂಗ್‌, ಕಾಮರಾಜನ್‌, ದಾನಿಶ್‌ ಅಖ್ತರ್‌, ಲಕ್ಕಿ ಲಕ್ಷ್ಮಣ್‌, ಅವಿನಾಶ್‌, ಸುನೀಲ್‌ ಪುರಾಣಿಕ್‌, ನೀನಾಸಂ ಅಶ್ವತ್ಥ, ಪ್ರಮೋದ್‌ ಶೆಟ್ಟಿ ಮುಂತಾದವರು ಕಾಣಿಸಿಕೊಂಡಿದ್ದಾರೆ. ‘ಚುಮ್‌ ಚುಮ್‌ ಚಳಿ ಚಳಿ’ ಎಂಬ ಹಾಡಿನಲ್ಲಿ ಉಪ್ಪಿ ಜೊತೆಗೆ ತಾನ್ಯಾ ಹೋಪ್‌ ಹೆಜ್ಜೆ ಹಾಕಿದ್ದಾರೆ. ಸೋ ಮಿಸ್ ಮಾಡ್ದೆ ಸಿನಿಮಾ ನೋಡಿ ಎಂಜಾಯ್ ಮಾಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News