ನವದೆಹಲಿ: ಧನುಷ್ ಮತ್ತು ಐಶ್ವರ್ಯ ಚಿರಂಜೀವಿ (Dhanush and Aishwarya) ವಿಚ್ಛೇದನ ಪಡೆದಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಇದೆ ರೀತಿ ಅನಿರೀಕ್ಷಿತವಾಗಿ ವಿಚ್ಛೇದನ ಪಡೆದ ದಕ್ಷಿಣ ಚಲನಚಿತ್ರೋದ್ಯಮದ ಖ್ಯಾತನಾಮರ ಪಟ್ಟಿ ಇಲ್ಲಿದೆ.
ಧನುಷ್ ಮತ್ತು ಐಶ್ವರ್ಯ:
ಸೌತ್ ಸೂಪರ್ ಸ್ಟಾರ್ ಧನುಷ್ ಮತ್ತು ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್ ಸೌತ್ ಇಂಡಸ್ಟ್ರಿಯ ಅತ್ಯಂತ ಸುಂದರ ಜೋಡಿಗಳಲ್ಲಿ ಒಬ್ಬರು. 'ಅತ್ರಂಗಿ ರೇ' ನಟ ಧನುಷ್ ಮತ್ತು ರಜನಿಕಾಂತ್ ಪುತ್ರಿ ಐಶ್ವರ್ಯಾ ವಿಚ್ಛೇದನ ಘೋಷಿಸಿದ್ದಾರೆ. ತಮ್ಮ 18 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡುತ್ತಿದ್ದೇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಜಂಟಿ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ.
ಸಮಂತಾ-ನಾಗಚೈತನ್ಯ:
ಧನುಷ್ ಮತ್ತು ಐಶ್ವರ್ಯಾ ಮೊದಲು, ಸಮಂತಾ ರುತ್ ಪ್ರಭು (Samantha) ಮತ್ತು ನಾಗಚೈತನ್ಯ ಅವರ ಸಂಬಂಧ ಮುರಿದು ಬಿದ್ದಿತ್ತು. ಅವರು ದೂರವಾಗುವ ನಿರ್ಧಾರವು ಎಲ್ಲರಿಗೂ ಆಘಾತವನ್ನುಂಟು ಮಾಡಿತು. ಅವರು ಸೌತ್ ಫಿಲ್ಮ್ ಇಂಡಸ್ಟ್ರಿಯ ಮುದ್ದಾದ ಜೋಡಿಗಳಲ್ಲಿದ್ದರು ಮತ್ತು ಅವರ ಬೇರ್ಪಡಿಕೆ ಅನೇಕರಿಗೆ ಬೇಸರ ತಂದಿತು.
ಅಮಲಾ ಪೌಲ್ ಮತ್ತು ಎಎಲ್ ವಿಜಯ್:
ಸೌತ್ ಚಿತ್ರರಂಗದ ನಟಿ ಅಮಲಾ ಪೌಲ್ ಮತ್ತು ನಿರ್ದೇಶಕ ಎಎಲ್ ವಿಜಯ್ ಅವರಿಂದ ವಿಚ್ಛೇದನ ಪಡೆದುಕೊಂಡಿದ್ದಾರೆ. ಅಮಲಾ ಪೌಲ್ ಮತ್ತು ವಿಜಯ್ 2014 ರಲ್ಲಿ ವಿವಾಹವಾದರು ಮತ್ತು ಮಿಸ್ಟರ್ ಅಂಡ್ ಮಿಸಸ್ ಆದ ಎರಡು ವರ್ಷಗಳಲ್ಲಿ ಅವರು ಬೇರ್ಪಡಲು ನಿರ್ಧರಿಸಿದರು. 2017 ರಲ್ಲಿ, ಅವರು ಅಧಿಕೃತ ವಿಚ್ಛೇದನ ಪಡೆದರು.
ಪವನ್ ಕಲ್ಯಾಣ್ ಮತ್ತು ರೇಣು ದೇಸಾಯಿ:
ರೇಣು ದೇಸಾಯಿ ಜೊತೆಗಿನ ಪವನ್ ಕಲ್ಯಾಣ್ (Pawan Kalyan) ಅವರ ಮದುವೆ ಮೂರು ವರ್ಷಗಳಲ್ಲಿ ಕೊನೆಗೊಂಡಿತು. ಅವರು 2009 ರಲ್ಲಿ ವಿವಾಹವಾದರು. 2012 ರ ಹೊತ್ತಿಗೆ ಅವರು ವಿಚ್ಛೇದನ ಪಡೆದರು.
ತ್ರಿಶಾ ಕೃಷ್ಣನ್ ಮತ್ತು ವರುಣ್ ಮಣಿಯನ್:
2015 ರಲ್ಲಿ ಚೆನ್ನೈ ಮೂಲದ ಉದ್ಯಮಿ ವರುಣ್ ಮಣಿಯನ್ ಅವರೊಂದಿಗೆ ನಟಿ ತ್ರಿಶಾ (Trisha) ನಿಶ್ಚಿತಾರ್ಥ ಮಾಡಿಕೊಂಡರು. ಆದರೆ ನಂತರ ಅವರು ತಮ್ಮ ನಿಶ್ಚಿತಾರ್ಥವನ್ನು ರದ್ದುಗೊಳಿಸಿದರು.
ನಾಗಾರ್ಜುನ ಮತ್ತು ಲಕ್ಷ್ಮಿ ದಗ್ಗುಬಾಟಿ:
ನಾಗಾರ್ಜುನ (Nagarjun) ಮತ್ತು ಲಕ್ಷ್ಮಿ ದಗ್ಗುಬಾಟಿ ಒಂದು ಕಾಲದಲ್ಲಿ ದಕ್ಷಿಣ ಚಿತ್ರರಂಗದ ಪವರ್ ಕಪಲ್ ಆಗಿದ್ದರು. ಆದರೆ 6 ವರ್ಷಗಳ ಕಾಲ ಒಟ್ಟಿಗೆ ಇದ್ದ ನಂತರ ಅವರು ವಿಚ್ಛೇದನ ಪಡೆದರು.
ಇದನ್ನೂ ಓದಿ: ಶ್ರುತಿ ಹಾಸನ್ ಫೋಟೋಶೂಟ್.. ಖಾಸಗಿ ಮ್ಯಾಗಜಿನ್ ಮುಖಪುಟಕ್ಕಾಗಿ ಪೋಸ್ ನೀಡಿದ ಬೆಡಗಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.