ಮಹಿಳೆಯರ ಒಳಉಡುಪುಗಳ ಬಗ್ಗೆ ಟ್ವೀಟ್ ಮಾಡಿ ಪೇಚಿಗೆ ಸಿಲುಕಿದ ಅಮಿತಾಭ್ ಬಚ್ಚನ್!

Trending News In Kannada: ಬಾಲೀವುಡ್ ಮಹಾನಾಯಕ ಅಮಿತಾಭ್ ಬಚ್ಚನ್ ಅವರ ಟ್ವೀಟ್ ವೊಂದು ಇದೀಗ ಭಾರಿ ವೈರಲ್ ಆಗುತ್ತಿದ್ದು, ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.  

Written by - Nitin Tabib | Last Updated : Jul 27, 2023, 03:50 PM IST
  • ಅಮಿತಾಭ್ ಬಚ್ಚನ್ ಅವರ ವರ್ಕ್ ಫ್ರಂಟ್ ಕುರಿತು ಹೇಳುವುದಾದರೆ,
  • ಅಮಿತಾಬ್ ಬಚ್ಚನ್ ಅವರು 'ಕೌನ್ ಬನೇಗಾ ಕರೋಡ್ಪತಿ' 15ನೇ ಸೀಸನ್‌ಗಳೊಂದಿಗೆ ಶೀಘ್ರದಲ್ಲೇ ಕಿರುತೆರೆಗೆ ಬರಲಿದ್ದಾರೆ.
  • ಬಿಗ್ ಬಿ ಇತ್ತೀಚೆಗೆ ಕೆಬಿಸಿ ಸೆಟ್ ನಿಂದ ತಾವು ಸಿದ್ಧರಾಗುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ಕಾರ್ಯಕ್ರಮದ ಟೀಸರ್ ಕೂಡ ಬಿಡುಗಡೆಯಾಗಿದೆ.
ಮಹಿಳೆಯರ ಒಳಉಡುಪುಗಳ ಬಗ್ಗೆ ಟ್ವೀಟ್ ಮಾಡಿ ಪೇಚಿಗೆ ಸಿಲುಕಿದ ಅಮಿತಾಭ್ ಬಚ್ಚನ್! title=

Bollywood News In Kannada: ಅಮಿತಾಬ್ ಬಚ್ಚನ್ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ ಮತ್ತು ಅವರು ಪ್ರತಿದಿನ ತನ್ನ ಅಭಿಮಾನಿಗಳ ಜೊತೆಗೆ ಒಂದಿಲ್ಲ ಒಂದು ಸಂಗತಿಯನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಕೆಲವೊಮ್ಮೆ ಅಮಿತಾಬ್ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡು ಟ್ವೀಟ್ ಮಾಡಿದರೆ,  ಮತ್ತೆ ಕೆಲವೊಮ್ಮೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡುತ್ತಾರೆ. ಏತನ್ಮಧ್ಯೆ, ಮೆಗಾಸ್ಟಾರ್ ಅವರ ಟ್ವೀಟ್ ವೊಂದು ಇದೀಗ ಭಾರಿ ವೈರಲ್ ಆಗಿದ್ದು, ಅದರಲ್ಲಿ ಅವರು ಬರೆದುಕೊಂಡ ಸಂಗತಿಯಿಂದ, ಇದೀಗ ಭಾರಿ ಟ್ರೋಲ್ ಗೆ ಒಳಗಾಗುತ್ತಿದ್ದಾರೆ. ವಾಸ್ತವದಲ್ಲಿ, ಈ ಟ್ವೀಟ್‌ನಲ್ಲಿ, ಅಮಿತಾಬ್ ಮಹಿಳೆಯರ ಒಳ ಉಡುಪುಗಳ ಬಗ್ಗೆ ಪ್ರಶ್ನೆಯನ್ನು ಕೇಳಿದ್ದಾರೆ. ಈ ಟ್ವೀಟ್‌ಗೆ ಜನರು ಸಾಕಷ್ಟು ಕಮೆಂಟ್ ಮಾಡುತ್ತಿದ್ದು, ಬಿಗ್ ಬಿ ತಾವು ಇದನ್ನು ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ.

ಅಮಿತಾಬ್ ಟ್ವೀಟ್ ಗೆ ಭಾರಿ ರಿಯಾಕ್ಷನ್
ಅಮಿತಾಬ್ ಬಚ್ಚನ್ ಅವರ ವೈರಲ್ ಟ್ವೀಟ್ 2010 ರದ್ದಾಗಿದೆ ಮತ್ತು ಅವರು ಈ ಟ್ವೀಟ್‌ನಲ್ಲಿ ಪ್ರಶ್ನೆಯನ್ನು ಕೇಳಿದ್ದಾರೆ. ಅಮಿತಾಬ್ ಬಚ್ಚನ್ ಅವರು 'ಇಂಗ್ಲಿಷ್ ಭಾಷೆಯಲ್ಲಿ ಬ್ರಾ ಏಕವಚನ ಮತ್ತು ಪ್ಯಾಂಟೀಸ್ ಬಹುವಚನ ಏಕೆ?' ಎಂದು ಟ್ವೀಟ್ ಮಾಡುವ ಮೂಲಕ ಪ್ರಶ್ನಿಸಿದ್ದಾರೆ. ಅವರ ಈ ಟ್ವೀಟ್ ವೈರಲ್ ಆಗಿದ್ದು, ಜನರು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.

ಇದನ್ನೂ ಓದಿ-ಇಲ್ಲಿ ಹೆಣ ಬಲವಂತವಾಗಿ ಹಣ ಕೇಳುತ್ತೇ, ಕೊಡದೆ ಹೋದ್ರೆ...!

ಬಳಕೆದಾರರು ಟ್ರೋಲ್ ಮಾಡುತ್ತಿದ್ದಾರೆ
13 ವರ್ಷದ ಹಳೆಯ ಈ ಟ್ವೀಟ್ ವೈರಲ್ ಆಗುತ್ತಿದ್ದಂತೆಯೇ ಎಲ್ಲರೂ ಆಶ್ಚರ್ಯಗೊಂಡಿದ್ದಾರೆ ಮತ್ತು ಇದೀಗ ಬಳಕೆದಾರರು ಟ್ವೀಟ್ ಅನ್ನು ಮರುಟ್ವೀಟ್ ಮಾಡುತ್ತಿದ್ದಾರೆ ಮತ್ತು 'ಅಮಿತ್ಜಿ, ಈ  ನಿಮ್ಮ ನಡವಳಿಕೆ ಎಂತಹದ್ದು?' ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು ಇನ್ನೊಬ್ಬರು, 'ಕೊನೆಗೆ ಇದೆ ನಿಮಗೆ ಎಲ್ಲಕ್ಕಿಂತ ಮಹತ್ವಪೂರ್ಣ ಪ್ರಶ್ನೆ ಎನಿಸಿದೆಯೇ?’ ಎಂದರೆ,  ಮೂರನೇ ಬಳಕೆದಾರರು ಬರೆದಿದ್ದಾರೆ, ‘ನಿಮ್ಮಂತಹ ಘನತೆಯ ವ್ಯಕ್ತಿಗೆ ಇಂತಹ ಪ್ರಶ್ನೆಗಳನ್ನು ಕೇಳುವುದು ಸರಿಯಲ್ಲ, ಇದಕ್ಕಾಗಿ ನೀವು ಕ್ಷಮೆಯಾಚಿಸಬೇಕು’ ಎಂದಿದ್ದಾರೆ. ಅಮಿತಾಬ್ ಬಚ್ಚನ್ ಅವರ ಈ ಟ್ವೀಟ್ ಅನ್ನು ಮರುಟ್ವೀಟ್ ಮಾಡುತ್ತಾ ಬರೆದುಕೊಂಡ ಮತ್ತೊರ್ವ ಸಾಮಾಜಿಕ ಮಾಧ್ಯಮ ಬಳಕೆದಾರ 'ಕೊನೆಗೆ ಯಾರೋ ಒಬ್ಬರು ಅವಶ್ಯಕ ಪ್ರಶ್ನೆ ಕೆಉಟ್ಟಿದ್ದಾರೆ' ಎಂದರೆ, ಇನ್ನೊಬ್ಬರು - 'ಒಳ್ಳೆಯ ಪ್ರಶ್ನೆ ಬಚ್ಚನ್ ಸರ್, ನೀವು ಅದನ್ನು ಕೆಬಿಸಿಯ ಮುಂದಿನ ಸೀಸನ್‌ನಲ್ಲಿ ಖಂಡಿತ ಕೇಳಿ' ಎಂದಿದ್ದಾರೆ. 

ಇದನ್ನೂ ಓದಿ-ವಿಜ್ಞಾನಿಗಳಿಗೂ ಭೇಧಿಸಲು ಸಾಧ್ಯವಾಗಿಲ್ಲ ಈ ಶಿವಾಲಯದ ರಹಸ್ಯ!

ಅಮಿತಾಭ್ ಮುಂಬರುವ ಚಿತ್ರಗಳು
ಅಮಿತಾಭ್ ಬಚ್ಚನ್ ಅವರ ವರ್ಕ್ ಫ್ರಂಟ್ ಕುರಿತು ಹೇಳುವುದಾದರೆ, ಅಮಿತಾಬ್ ಬಚ್ಚನ್ ಅವರು 'ಕೌನ್ ಬನೇಗಾ ಕರೋಡ್ಪತಿ' 15 ಸೀಸನ್‌ಗಳೊಂದಿಗೆ ಶೀಘ್ರದಲ್ಲೇ ಕಿರುತೆರೆಗೆ ಬರಲಿದ್ದಾರೆ. ಬಿಗ್ ಬಿ ಇತ್ತೀಚೆಗೆ ಕೆಬಿಸಿ ಸೆಟ್ ನಿಂದ ತಾವು ಸಿದ್ಧರಾಗುತ್ತಿರುವ  ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ಕಾರ್ಯಕ್ರಮದ ಟೀಸರ್ ಕೂಡ ಬಿಡುಗಡೆಯಾಗಿದೆ. ಚಲನಚಿತ್ರಗಳ ಬಗ್ಗೆ ಹೇಳುವುದಾದರೆ, ಅಮಿತಾಬ್ ಬಚ್ಚನ್ ಶೀಘ್ರದಲ್ಲೇ ನಾಗ್ ಅಶ್ವಿನ್ ಅವರ ಕಲ್ಕಿ 2898 AD ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಪ್ರಭಾಸ್, ದೀಪಿಕಾ ಪಡುಕೋಣೆ ಮತ್ತು ಕಮಲ್ ಹಾಸನ್ ಅವರೊಂದಿಗೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News