Mahesh Babu : ನಟ ಮಹೇಶ್ ಬಾಬು ತಾಯಿ ಇಂದಿರಾ ದೇವಿ ಇನ್ನಿಲ್ಲ

Mahesh Babu : ಮಹೇಶ್ ಬಾಬು ತಾಯಿ ಇಂದಿರಾ ದೇವಿ ಅನಾರೋಗ್ಯದ ಕಾರಣ ನಿಧನರಾಗಿದ್ದಾರೆ. ಇಂದಿರಾ ದೇವಿ ನಿಧನಕ್ಕೆ ಅಭಿಮಾನಿಗಳು  ಹಾಗೂ ತೆಲುಗು ಚಿತ್ರರಂಗ ಸಂತಾಪ ಸೂಚಿಸಿದೆ. 

Written by - Chetana Devarmani | Last Updated : Sep 28, 2022, 10:36 AM IST
  • ಮಹೇಶ್ ಬಾಬು ತಾಯಿ ಇಂದಿರಾ ದೇವಿ ನಿಧನ
  • ಹಿರಿಯ ನಟ ಕೃಷ್ಣ ಅವರ ಪತ್ನಿ ಘಟ್ಟಮನೇನಿ ಇಂದಿರಾ ದೇವಿ
  • ಅಭಿಮಾನಿಗಳು ಹಾಗೂ ತೆಲುಗು ಚಿತ್ರರಂಗದಿಂದ ಸಂತಾಪ
Mahesh Babu : ನಟ ಮಹೇಶ್ ಬಾಬು ತಾಯಿ ಇಂದಿರಾ ದೇವಿ ಇನ್ನಿಲ್ಲ title=
ಮಹೇಶ್ ಬಾಬು

Mahesh Babu Mother Indira Devi Death: ತೆಲುಗು ನಟ 'ಪ್ರಿನ್ಸ್‌' ಮಹೇಶ್ ಬಾಬು ಅವರ ತಾಯಿ ಇಂದಿರಾ ದೇವಿ ಅವರು ಅನಾರೋಗ್ಯದ ಕಾರಣ ಹೈದರಾಬಾದ್‌ನಲ್ಲಿ ಇಂದು ಮುಂಜಾನೆ ವಿಧಿವಶರಾಗಿದ್ದಾರೆ. ಬುಧವಾರ ಮುಂಜಾನೆ 4 ಗಂಟೆಗೆ ಕೊನೆಯುಸಿರೆಳೆದಿದ್ದಾರೆ. ಇಂದಿರಾ ದೇವಿಯವರು ಕಳೆದ ಕೆಲವು ದಿನಗಳಿಂದ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಮತ್ತು ಅವರನ್ನು ಹೈದರಾಬಾದ್‌ನ ಎಐಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದಿರಾದೇವಿ ಅವರ ಪಾರ್ಥಿವ ಶರೀರವನ್ನು ಪದ್ಮಾಲಯ ಸ್ಟುಡಿಯೋದಲ್ಲಿ ಬೆಳಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಇರಿಸಲಾಗುವುದು. 

ಇದನ್ನೂ ಓದಿ : DKD6 ವಿಜೇತರಾಗಿ 'ಪವರ್ ಸ್ಟಾರ್ ಟ್ರೋಫಿ' ಪಡೆದ ಸಧ್ವಿನ್-ಶಾರಿಕಾ

ಸೂಪರ್ ಸ್ಟಾರ್ ಕೃಷ್ಣ ಅವರ ಪತ್ನಿ ಮತ್ತು ತೆಲುಗು ನಟ ಮಹೇಶ್ ಬಾಬು ಅವರ ತಾಯಿ ಘಟ್ಟಮನೇನಿ ಇಂದಿರಾ ದೇವಿ. ಅವರು ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಅಭಿಮಾನಿಗಳ ದರ್ಶನಕ್ಕಾಗಿ ಪದ್ಮಾಲಯ ಸ್ಟುಡಿಯೋದಲ್ಲಿ ಇಂದಿರಾ ಅವರ ಪಾರ್ಥೀವ ಶರೀರವನ್ನು ಇರಿಸಲಾಗುವುದು ಮತ್ತು ನಂತರ ಮಹಾ ಪ್ರಸ್ಥಾನದಲ್ಲಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಗುವುದು ಎಂದು ಮಹೇಶ್ ಬಾಬು ಅವರ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಇಂದಿರಾ ದೇವಿ ನಿಧನಕ್ಕೆ ತೆಲುಗು ಚಿತ್ರರಂಗ ಸಂತಾಪ ಸೂಚಿಸಿದೆ.

ನಟ ಮಹೇಶ್ ಬಾಬು ಅವರ ತಾಯಿಯ ನಿಧನಕ್ಕೆ ಅವರ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಹಿರಿಯ ನಟ ಕೃಷ್ಣ ಅವರ ಮೊದಲ ಪುತ್ರ ರಮೇಶ್ ಬಾಬು ಇಹಲೋಕ ತ್ಯಜಿಸಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ರಮೇಶ್‌ (56) ನಿಧನರಾಗಿದ್ದರು. ಇದೀಗ ಸೂಪರ್‌ ಸ್ಟಾರ್‌ ಕುಟುಂಬಕ್ಕೆ ಮತ್ತೊಂದು ಆಘಾತವಾಗಿದೆ.  

ಇದನ್ನೂ ಓದಿ : ಆಸ್ಕರ್ ಜ್ಯೂರಿಯಾಗಿ ಪಾಲ್ಗೊಂಡ ಪವನ್ ಒಡೆಯರ್, ಮರೆಯಲಾರದ ಅನುಭವ ಎಂದ ಡೈರೆಕ್ಟರ್‌

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News