Tiger 3: ಬಾಕ್ಸ್ ಆಫೀಸ್ ನಲ್ಲಿ ಸಲ್ಲು ಭಾಯ್ ಅಬ್ಬರ: ಆರು ದಿನದ ಕಲೆಕ್ಷನ್ ಮಾಹಿತಿ!

Tiger 3 Box Office Collection: ರಿಲೀಸ್‌ ಆಗಿ ಭರ್ಜರಿ ಸೌಂಡ್‌ ಮಾಡುತ್ತಿರುವ ಸಲ್ಲು ಅಭಿನಯದ ಟೈಗರ್ 3 ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಅಬ್ಬರದ ಗಳಿಕೆ ಮಾಡುತ್ತಿದೆ.. ಹಾಗಾದ್ರೆ ಈ ಆರು ದಿನದ ಕಲೆಕ್ಷನ್‌ ಎಷ್ಟಾಗಿರಬಹುದು ಅಂತೀರಾ ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌..

Written by - Savita M B | Last Updated : Nov 18, 2023, 01:22 PM IST
  • ಟೈಗರ್ 3 ಸಲ್ಮಾನ್ ಖಾನ್ ಅಭಿನಯದ ಮತ್ತು ಮನೀಶ್ ಶರ್ಮಾ ನಿರ್ದೇಶನದ ಚಿತ್ರ
  • ಇದರಲ್ಲಿ ಕತ್ರಿನಾ ಕೈಫ್ ನಾಯಕಿ
  • ಈ ಸಿನಿಮಾ ಕಲೆಕ್ಷನ್‌ ವಿಚಾರದಲ್ಲಿಯೂ ದಾಖಲೆಗಳನ್ನು ಮಾಡುತ್ತಿದೆ ಎಂದು ವರದಿಯಾಗಿದೆ..
Tiger 3: ಬಾಕ್ಸ್ ಆಫೀಸ್ ನಲ್ಲಿ ಸಲ್ಲು ಭಾಯ್ ಅಬ್ಬರ: ಆರು ದಿನದ ಕಲೆಕ್ಷನ್ ಮಾಹಿತಿ! title=

Tiger 3: ಟೈಗರ್ 3 ಸಲ್ಮಾನ್ ಖಾನ್ ಅಭಿನಯದ ಮತ್ತು ಮನೀಶ್ ಶರ್ಮಾ ನಿರ್ದೇಶನದ ಚಿತ್ರ. ಇದರಲ್ಲಿ ಕತ್ರಿನಾ ಕೈಫ್ ನಾಯಕಿ. ಭಾರೀ ನಿರೀಕ್ಷೆಗಳಿಂದ ಬಿಡುಗಡೆಯಾದ ಈ ಸಿನಿಮಾ ಕಲೆಕ್ಷನ್‌ ವಿಚಾರದಲ್ಲಿಯೂ ದಾಖಲೆಗಳನ್ನು ಮಾಡುತ್ತಿದೆ ಎಂದು ವರದಿಯಾಗಿದೆ.. 

ಚಿತ್ರದ ನಿರ್ಮಾಪಕರು ಬಿಡುಗಡೆ ಮಾಡಿರುವ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಚಿತ್ರವು ಜಾಗತಿಕ ಕಲೆಕ್ಷನ್‌ಗಳಲ್ಲಿ 300 ಕೋಟಿ ಕ್ಲಬ್ ಅನ್ನು ದಾಟಿದೆ. ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಶುಕ್ರವಾರದವರೆಗೆ ಚಿತ್ರದ ಒಟ್ಟು ಗಳಿಸಿದ್ದು 229 ಕೋಟಿಗಳು. ಅದೇ ಸಮಯದಲ್ಲಿ, ಚಿತ್ರವು ಜಾಗತಿಕವಾಗಿ 71 ಕೋಟಿ ಕಲೆಕ್ಷನ್ ಗಳಿಸಿದೆ. 

ಇದನ್ನೂ ಓದಿ-ಕಾಂತಾರ-2 ಚಿತ್ರೀಕರಣಕ್ಕೆ ಮುಹೂರ್ತ ಫಿಕ್ಸ್! ಇದು ಸಿಕ್ವೆಲ್ ಅಲ್ಲ ಪ್ರೀಕ್ವೆಲ್...

ಮೊದಲ ದಿನವೇ ಚಿತ್ರ 44.75 ಕೋಟಿ ಗಳಿಸಿದ ಈ ಚಿತ್ರ ಎರಡನೇ ದಿನ 59.25 ಕೋಟಿ ರೂ. ಮೂರನೇ ದಿನ 44.75 ಕೋಟಿ ರೂ. ನಾಲ್ಕನೇ ದಿನಕ್ಕೆ 21.25 ಕೋಟಿ ಕಲೆಕ್ಷನ್ ಮಾಡಿದೆ. ಚಿತ್ರ ಐದನೇ ದಿನಕ್ಕೆ 18.50 ಕೋಟಿ ಕಲೆಕ್ಷನ್ ಮಾಡಿದೆ. 

ಇನ್ನು ಶಾರುಖ್ ಖಾನ್ ಅವರ ಅತಿಥಿ ಪಾತ್ರದ ಸೋರಿಕೆಯಾದ ದೃಶ್ಯಗಳು ಚಿತ್ರವನ್ನು ಬಿಕ್ಕಟ್ಟಿಗೆ ತಳ್ಳಿವೆ. ಸಲ್ಮಾನ್ ಖಾನ್ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳಿಗೆ ಮನವಿ ಮಾಡಿದ್ದು, ಚಿತ್ರವನ್ನು ಪೈರಸಿ ಮಾಡಬೇಡಿ ಎಂದು ಎಂದಿದ್ದರು. ಅಲ್ಲದೇ ಈ ಚಿತ್ರದಲ್ಲಿ ಹೃತಿಕ್ ರೋಷನ್ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ಇದನ್ನೂ ಓದಿ-ರಣಬೀರ್ ಕಪೂರ್ ಆಲಿಯಾ ಭಟ್‌ಗೆ ಕಿರುಕುಳ ನೀಡುತ್ತಿದ್ದಾರಾ...? ಕ್ಲಾರಿಟಿ ಕೊಟ್ಟ ಬಾಲಿವುಡ್ ಬೆಡಗಿ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News