Thukali Santhosh: ಬಿಗ್‌ಬಾಸ್‌ನಿಂದ ಬಂದ ಹಣದಲ್ಲಿ ದುಬಾರಿ ಕಾರು ಖರೀದಿಸಿದ ತುಕಾಲಿ ಸಂತೋಷ್!

Bigg Boss Kannada Season 10: ಬಿಗ್‌ಬಾಸ್ʼ ಕನ್ನಡ ಸೀಸನ್ 10ರ ಸ್ಪರ್ಧಿಯಾಗಿದ್ದ ತುಕಾಲಿ ಸಂತೋಷ್ ದುಬಾರಿ ಬೆಲೆಯ ಕಾರು ಖರೀದಿಸಿದ್ದಾರೆ. ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ʼಕಂಡ ಕನಸು ನನಸಾದ ದಿನʼವೆಂದು ಬರೆದುಕೊಂಡಿದ್ದಾರೆ.

Written by - Puttaraj K Alur | Last Updated : Mar 4, 2024, 02:05 PM IST
  • ದುಬಾರಿ ಬೆಲೆಯ ಕಾರು ಖರೀದಿಸಿದ ʼಬಿಗ್‌ಬಾಸ್ʼ ಕನ್ನಡ ಸೀಸನ್ 10ರ ಸ್ಪರ್ಧಿ ತುಕಾಲಿ ಸಂತೋಷ್
  • ತಮ್ಮ ಪತ್ನಿ ಮಾನಸ ಜೊತೆಗೆ ಶೋರೂಂಗೆ ಹೋಗಿ KIA ಕಾರನ್ನು ಖರೀದಿಸಿದ ಸಂತೋಷ್‌
  • ಬಿಗ್‌ಬಾಸ್ ಫೈನಲ್‌ವರೆಗೂ ಬಂದಿದ್ದ ಸಂತೋಷ್‌ ಕಪ್‌ ಗೆಲ್ಲದಿದ್ದರೂ ಕರುನಾಡ ಜನರ ಹೃದಯ ಗೆದ್ದಿದ್ದರು
Thukali Santhosh: ಬಿಗ್‌ಬಾಸ್‌ನಿಂದ ಬಂದ ಹಣದಲ್ಲಿ ದುಬಾರಿ ಕಾರು ಖರೀದಿಸಿದ ತುಕಾಲಿ ಸಂತೋಷ್! title=
ದುಬಾರಿ ಕಾರು ಖರೀದಿಸಿದ ತುಕಾಲಿ ಸಂತೋಷ್!

ಬೆಂಗಳೂರು: ʼಬಿಗ್‌ಬಾಸ್ʼ ಕನ್ನಡ ಸೀಸನ್ 10ರ ಸ್ಪರ್ಧಿಯಾಗಿದ್ದ ತುಕಾಲಿ ಸಂತೋಷ್ ದುಬಾರಿ ಬೆಲೆಯ ಕಾರು ಖರೀದಿಸಿದ್ದಾರೆ. ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ʼಕಂಡ ಕನಸು ನನಸಾದ ದಿನʼವೆಂದು ಬರೆದುಕೊಂಡಿದ್ದಾರೆ. ತಮ್ಮ ಪತ್ನಿ ಮಾನಸ ಅವರ ಜೊತೆಗೆ ಶೋರೂಂಗೆ ಹೋಗಿ KIA ಕಾರನ್ನು ಖರೀದಿ ಮಾಡಿದ್ದಾರೆ. ತುಕಾಲಿ ಸಂತೋಷ್ ʼಜೀ ಕನ್ನಡʼದ ಕಾಮಿಡಿ ಕಿಲಾಡಿಗಳು ಶೋ ಮೂಲಕ ಜನರಿಗೆ ಪರಿಚಿತರಾದವರು. 

ʼಗಿಚ್ಚಿ ಗಿಲಿ ಗಿಲಿʼ ಕಾಮಿಡಿ ಶೋ ಮೂಲಕವೂ ಮನರಂಜಿಸಿರುವ ತುಕಾಲಿ ಸಂತೋಷ್‌, ಧಾರವಾಹಿ ಮತ್ತು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ, ʼಬಿಗ್‌ಬಾಸ್ʼ ಮನೆಗೆ ಹೋದ ಬಳಿಕ ಅವರ ಅದೃಷ್ಟ ಖುಲಾಯಿಸಿತು. ಜನಪ್ರಿಯತೆ ಜೊತೆಗೆ ಹಲವಾರು ಅವಕಾಶಗಳು ಅವರನ್ನು ಅರಸಿಕೊಂಡು ಬರುತ್ತಿವೆ. ʼಬಿಗ್‌ಬಾಸ್ʼ ಫೈನಲ್‌ವರೆಗೂ ಬಂದಿದ್ದ ತುಕಾಲಿ ಸಂತೋಷ್‌ ಕಪ್‌ ಗೆಲ್ಲದಿದ್ದರೂ ಕರುನಾಡ ಜನರ ಹೃದಯ ಗೆದ್ದಿದ್ದರು. 

ಇದನ್ನೂ ಓದಿ: Anant-Radhika Pre Wedding: ಅನಂತ್-ರಾಧಿಕಾ ಪ್ರೀ ವೆಡ್ಡಿಂಗ್‌ನಲ್ಲಿ ಮಿಂಚಿದ ಸೆಲೆಬ್ರೆಟಿಗಳು

ʼಬಿಗ್‌ಬಾಸ್ʼ ಶೋನಲ್ಲಿ ತುಕಾಲಿ ಸಂತೋಷ್‌ಗೆ ಉತ್ತಮ ಸಂಭಾವನೆ ನೀಡಲಾಗಿದೆ. ಫೈನಲ್‌ವರೆಗೂ ಬಂದಿದ್ದರಿಂದ ಅವರಿಗೆ ಹೆಚ್ಚುವರಿ ಬಹುಮಾನವೂ ಸಹ ದೊರಕಿತ್ತು. ʼಬಿಗ್‌ಬಾಸ್‌ʼನಿಂದ ಬಂದ ಹಣದಿಂದ ಅವರು ಬಿಳಿ ಬಣ್ಣದ ʼKIAʼ ಕಾರು ಖರೀದಿಸಿದ್ದಾರೆ. ಈ ಕಾರಿನ ಬೆಲೆ ಸುಮಾರು 20 ಲಕ್ಷ ರೂ. ಇದೆ ಎನ್ನಲಾಗಿದೆ. ತಮ್ಮ ಪತ್ನಿ ಮಾನಸ ಜೊತೆಗೆ ಶೋರೂಂಗೆ ತೆರಳಿ ಕಾರು ಪಡೆದುಕೊಳ್ಳುತ್ತಿರುವ ವಿಡಿಯೋವನ್ನು ಅವರು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಅವರ ನೂರಾರು ಅಭಿಮಾನಿಗಳು ಪ್ರತಿಕ್ರಿಯಿಸಿದ್ದು, ಅಭಿನಂದನೆ ಸಲ್ಲಿಸಿದ್ದಾರೆ.  

ʼಬಿಗ್‌ಬಾಸ್‌ʼ ಮನೆಯಿಂದ ಹೊರಬಂದ ನಂತರ ತುಕಾಲಿ ಸಂತೋಷ್‌ ಅವರು ಮತ್ತೆ ಕಾಮಿಡಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ಜೊತೆಗೆ ಪತ್ನಿ ಮಾನಸ ಸಹ ಭಾಗವಹಿಸುತ್ತಿದ್ದಾರೆ. ತಮ್ಮ ವಿಶಿಷ್ಟ ಶೈಲಿಯ ಹಾಸ್ಯದ ಮೂಲಕ ಕಚಗುಳಿ ಇಡುವ ತುಕಾಲಿ ಸಂತೋಷ್‌ ಅವರಿಗೆ ಕಾಮಿಡಿ ಶೋಗಳು ಮತ್ತು ʼಬಿಗ್‌ಬಾಸ್‌ʼನಿಂದ ಅದೃಷ್ಟದ ಬಾಗಿಲು ತೆರೆದಿದೆ ಅಂತಾನೇ ಹೇಳಬಹುದು.

ಇದನ್ನೂ ಓದಿ: Anant Ambani-Radhika Merchant Pre Wedding: ಡೋಲ್ ಬೀಟ್ ಗೆ ಅಭಿಷೇಕ್ ಬಚ್ಚನ್ - ಐಶ್ವರ್ಯ ರೈ ಸಖತ್ ಡಾನ್ಸ್ : ಇಲ್ಲಿದೆ ವಿಡಿಯೋ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News