ಕೊನೆಗೂ ಈಡೇರಲೆ ಇಲ್ಲ ಅಪರ್ಣಾ ಕಂಡ ಆ ಒಂದು ಕನಸು!

Aparna: 1984ರಲ್ಲಿ ತೆರೆಕಂಡ ಪುಟ್ಟಣಕಣಗಾಲ್ ಅವರ "ಮಸಣದ ಹೂ" ಅಪರ್ಣ ಅವರ ಮೊದಲ ಚಿತ್ರ. ಇದಾದ ಬಳಿಕ ನಮ್ಮೂರ ರಾಜಾ, ಇನ್ಸ್ಪೆಕ್ಟರ್ ವಿಕ್ರಮ್, ಸಂಗ್ರಾಮ, ಒಂಟಿ ಸಲಗ, ಒಂದಾಗಿ ಬಾಳು ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದ ಅಪರ್ಣಾ ಟಿವಿ ಪರದೆಗಳಿಂದಾಗಿ ಹೆಚ್ಚು ಮನೆ ಮಾತಾಗಿದ್ದರು. ಕಿರುತೆರೆಯಲ್ಲಿ ಅಪರ್ಣಾ ಮೂಡಲಮನೆ, ಮುಕ್ತ ಸೇರಿದಂತೆ ಮುಂತಾದ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. 

Written by - Yashaswini V | Last Updated : Jul 12, 2024, 09:29 AM IST
  • ನಿರೂಪಣೆ ಹಾಗೂ ರೇಡಿಯೋ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದ ಅಪರ್ಣ
  • ಮುಂದಿನ ಪೀಳಿಗೆಗೂ ಇದನ್ನು ಧಾರೆಯೆರೆಯುವ ಗುರಿ ಹೊಂದಿದ್ದ ಅಚ್ಚ ಕನ್ನಡದ ಧ್ವನಿ
  • ಈ ಬಗ್ಗೆ ತಮ್ಮ ಗೆಳೆಯರ ಬಳಿಯೂ ಆಸೆ ಹಂಚಿಕೊಂಡಿದ್ದ ಅಪರ್ಣ
ಕೊನೆಗೂ ಈಡೇರಲೆ ಇಲ್ಲ ಅಪರ್ಣಾ ಕಂಡ ಆ ಒಂದು ಕನಸು!  title=

Aparna Vastarey: ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಿದ್ದ ಅಚ್ಚ ಕನ್ನಡದ ಸ್ವಚ್ಛ ದನಿಯಾಗಿದ್ದ ಖ್ಯಾತ ನಿರೂಪಕಿ, ನಟಿ, ಮಜಾ ಟಾಕೀಸ್‌ನ ವರಲಕ್ಷ್ಮೀ ಖ್ಯಾತಿ ಅಪರ್ಣಾ ವಸ್ತಾರೆ (Aparna Vastarey) (58)   ಶ್ವಾಸಕೋಶ  ಕ್ಯಾನ್ಸರ್‌ನಿಂದ ನಿನ್ನೆ (ಜುಲೈ 11) ಕೊನೆಯುಸಿರೆಳೆದಿದ್ದಾರೆ.   

1984ರಲ್ಲಿ ತೆರೆಕಂಡ ಪುಟ್ಟಣಕಣಗಾಲ್ ಅವರ "ಮಸಣದ ಹೂ" ಅಪರ್ಣ ಅವರ ಮೊದಲ ಚಿತ್ರ. ಇದಾದ ಬಳಿಕ ನಮ್ಮೂರ ರಾಜಾ, ಇನ್ಸ್ಪೆಕ್ಟರ್ ವಿಕ್ರಮ್, ಸಂಗ್ರಾಮ, ಒಂಟಿ ಸಲಗ, ಒಂದಾಗಿ ಬಾಳು ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದ ಅಪರ್ಣಾ ಟಿವಿ ಪರದೆಗಳಿಂದಾಗಿ ಹೆಚ್ಚು ಮನೆ ಮಾತಾಗಿದ್ದರು. ಕಿರುತೆರೆಯಲ್ಲಿ ಅಪರ್ಣಾ ಮೂಡಲಮನೆ, ಮುಕ್ತ ಸೇರಿದಂತೆ ಮುಂತಾದ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. 

90ರ ದಶಕದಲ್ಲಿ ಚಂದನ ವಾಹಿನಿಯಲ್ಲಿ ಮೂಡಿಬಂದ ಹಲವು ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದ ಅಪರ್ಣಾ ಭಾರತ ಸರ್ಕಾರದ ವಿವಿಧ ಭಾರತಿಯಲ್ಲೂ ಸಹ ರೇಡಿಯೋ ಜಾಕಿಯಾಗಿ ಕಾರ್ಯನಿರ್ವಹಿಸಿದ್ದರು. 

ಸತತ 8ಗಂಟೆಗಳ ಕಾಲ ನಿರೂಪಣೆ ಮಾಡಿದ ಖ್ಯಾತಿ: 
ಅಪರ್ಣ (Aparna) ಅವರು 1998 ರಲ್ಲಿ  ನಡೆದ ದೀಪಾವಳಿ ಕಾರ್ಯಕ್ರಮವೊಂದರಲ್ಲಿ ಸತತ ಎಂಟು ಗಂಟೆಗಳ ಕಾಲ ನಿರೂಪಣೆ ಮಾಡಿ ದಾಖಲೆ ಬರೆದಿದ್ದಾರೆ. 

2013ರಲ್ಲಿ ಬಿಗ್ ಬಾಸ್ ಕನ್ನಡದ ಮೊದಲ ಸೀಸನ್ ನಲ್ಲಿ ಭಾಗವಹಿಸಿದ್ದ ಅಪರ್ಣಾ, 2014 ರಲ್ಲಿ ಬೆಂಗಳೂರಿನ "ನಮ್ಮ ಮೆಟ್ರೋ"ದಲ್ಲಿ ಘೋಷಣೆಯಾಗುವ  'ಪ್ರಯಾಣಿಕರು ಹತ್ತುವ ಮತ್ತು ಇಳಿಯುವ ಸೂಚನೆ'ಗೆ ಧ್ವನಿ ನೀಡಿದ್ದರು. 2015 ರಲ್ಲಿ ಸೃಜನ್ ಲೋಕೇಶ್ ನೇತೃತ್ವದಲ್ಲಿ ಆರಂಭವಾದ 'ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ ವರಲಕ್ಷ್ಮಿ ಪಾತ್ರದ ಮೂಲಕ ನಿರರ್ಗಳವಾಗಿ ಕನ್ನಡ ಮಾತನಾಡುವುದಷ್ಟೇ ಅಲ್ಲ, ತಮ್ಮ ಸ್ವಚ್ಛಂದ ಮಾತಿನ ಮೂಲಕ ಕಾಮಿಡಿ ಅಭಿನಯದ ಮೂಲಕ ಎಲ್ಲರ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸಬಲ್ಲರು ಎಂಬುದನ್ನು ಸಹ ಸಾಬೀತುಪಡಿಸಿದರು. ಆದಾಗ್ಯೂ, ಅಪರ್ಣಾ ಅವರು ಕಂಡಿದ್ದ ಕನಸೊಂದು ಕನಸಾಗಿಯೇ ಉಳಿದಿರುವುದು ನೋವಿನ ಸಂಗತಿ. 

ಈಡೇರಲೇ ಇಲ್ಲ ಅಪರ್ಣ ಕೊನೆ ಕನಸು!
ನಿರೂಪಣೆ, ನಟನೆಯಲ್ಲಿ ಖ್ಯಾತಿ ಗಳಿಸಿದ್ದ ಅಪರ್ಣ ಮನಸ್ಸಿನಲ್ಲಿ ಅದೊಂದು ಆಸೆಯಿತ್ತು. ನಿರೂಪಣೆ ಹಾಗೂ ರೇಡಿಯೋ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದ ಅಪರ್ಣಗೆ "ನಿರೂಪಣಾ ಶಾಲೆ"ಯೊಂದನ್ನ ತೆರೆಯುವ ಆಸೆಯಿತ್ತು. ಆ ಶಾಲೆಯ ಮೂಲಕ ಮುಂದಿನ ಪೀಳಿಗೆಗೆ  ತಮ್ಮ ಜ್ಞಾನವನ್ನ ಹಂಚಿಕೊಳ್ಳಬೇಕಾಗಿದ್ದ ಅಪರ್ಣ  ಕನಸು ಕೊನೆಗೂ ಕನಸಾಗಿಯೇ ಉಳಿದುಬಿಟ್ಟಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News