"ತ್ರಿಬಲ್ ರೈಡಿಂಗ್" ನಲ್ಲಿ ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್" ಹಾಡಿಗೆ ಗೋಲ್ಡನ್ ಸ್ಟಾರ್ ಸಖತ್ ಸ್ಟೆಪ್ಸ್

ನವೆಂಬರ್ ಹದಿನೈದರಂದು "ತ್ರಿಬಲ್ ರೈಡಿಂಗ್" ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದ್ದು, ಇಪ್ಪತ್ತೈದರಂದು ಚಿತ್ರ ತೆರೆಗೆ ಬರಲಿದೆ. 

Written by - Ranjitha R K | Last Updated : Nov 9, 2022, 03:42 PM IST
  • ಟ್ವಿಂಕಲ್ ಟ್ವಿಂಕಲ್ ಲಿಟಲ್‌ ಸ್ಟಾರ್ ಹಾಡಿಗೆ ಗಣೇಶ್ ಸೂಪರ್ ಡಾನ್ಸ್
  • "ತ್ರಿಬಲ್ ರೈಡಿಂಗ್ ಚಿತ್ರದ ಮೂರನೇ ಹಾಡು ರಿಲೀಸ್
  • ನವೆಂಬರ್ ಹದಿನೈದರಂದು ಚಿತ್ರದ ಟ್ರೇಲರ್ ಬಿಡುಗಡೆ
"ತ್ರಿಬಲ್ ರೈಡಿಂಗ್" ನಲ್ಲಿ  ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್" ಹಾಡಿಗೆ ಗೋಲ್ಡನ್ ಸ್ಟಾರ್ ಸಖತ್ ಸ್ಟೆಪ್ಸ್  title=
tribble riding film song out

ಬೆಂಗಳೂರು : ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ  "ತ್ರಿಬಲ್ ರೈಡಿಂಗ್" ಚಿತ್ರದ "ಟ್ವಿಂಕಲ್ ಟ್ವಿಂಕಲ್ ಲಿಟಲ್‌ ಸ್ಟಾರ್" ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಸಾಯಿಕಾರ್ತಿಕ್ ಸಂಗೀತ ನೀಡಿರುವ ಈ ಹಾಡನ್ನು ವಿಜಯ ಪ್ರಕಾಶ್ ಹಾಡಿದ್ದಾರೆ.‌ ಭೂಷಣ್ ನೃತ್ಯ ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಬಿಡುಗಡೆಯಾದ ಕ್ಷಣದಿಂದಲೇ ಈ ಹಾಡು ಬಾರಿ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.

ಚಿತ್ರದ ಎರಡು ಹಾಡುಗಳು ಈಗಾಗಲೇ ಬಿಡುಗಡೆಯಾಗಿದ್ದು, ಇದೀಗ  ಮೂರನೇ ಹಾಡು ಬಿಡುಗಡೆಯಾಗಿದೆ. ಹಿಂದಿನ ಎರಡು ಹಾಡುಗಳು ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗಿ, ಜನಪ್ರಿಯವಾಗಿದೆ ಎಂದು ನಾಯಕ ಗೋಲ್ಡನ್ ಸ್ಟಾರ್ ಗಣೇಶ್ ಹೇಳಿದ್ದಾರೆ. ನವೆಂಬರ್ ಹದಿನೈದರಂದು ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದ್ದು, ಇಪ್ಪತ್ತೈದರಂದು ಚಿತ್ರ ತೆರೆಗೆ ಬರಲಿದೆ. 

ಇದನ್ನೂ ಓದಿ : Rishab Shetty : ಬಾಲಿವುಡ್‌ಗೆ ಹೋಗಲು ಸಜ್ಜಾದ್ರಾ ನಟ ರಿಷಬ್ ಶೆಟ್ಟಿ!? ಇಲ್ಲಿದೆ ಅಸಲಿ ಸತ್ಯ

ಈ ಹಿಂದೆ ಬಿಡುಗಡೆಯಾಗಿರುವ ಎರಡು ಹಾಡುಗಳು ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಇದೀಗ ಬಿಡುಗಡೆಯಾಗಿರುವ ಹಾಡು ಕೂಡ ಸುಮಧುರವಾಗಿದೆ ಎಂದು, ನಿರ್ದೇಶಕ ಮಹೇಶ್ ಗೌಡ, ಮಾಹಿತಿ ನೀಡಿದ್ದಾರೆ. 

ಎರಡು ಜಡೆ ಒಟ್ಟಿಗೆ ಸೇರುವುದಿಲ್ಲ ಎನ್ನುತ್ತಾರೆ. ಆದರೆ, ಈ ಚಿತ್ರದಲ್ಲಿ ನಾವು ಮೂವರು ನಾಯಕಿಯರು. ಇಡೀ ಚಿತ್ರ ಪೂರ್ತಿ ಖುಷಿಯಿಂದ ಕಾಲ ಕಳೆದೆವು. ನಮ್ಮ ಚಿತ್ರಕ್ಕೆ ಬೆಂಬಲ ನೀಡಿ ಎಂದಿದ್ದಾರೆ ನಾಯಕಿ ಅದಿತಿ ಪ್ರಭುದೇವ.

ಇದನ್ನೂ ಓದಿ : "ಸ್ಪೂಕಿ ಕಾಲೇಜ್" ಚಿತ್ರದ "ಮೆಲ್ಲುಸಿರೆ ಸವಿಗಾನ" ಹಾಡು ನವೆಂಬರ್ 14 ರಂದು ಬಿಡುಗಡೆ

ಮತ್ತಿಬ್ಬರು ನಾಯಕಿಯರಾದ ರಚನಾ ಇಂದರ್ ಹಾಗೂ ಮೇಘ ಶೆಟ್ಟಿ ಸಹ "ತ್ರಿಬಲ್ ರೈಡಿಂಗ್" ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News