ಹಿರಿಯ ನಟ ಅನಂತ್ ನಾಗ್ ಮತ್ತು ದೂದ್ ಪೇಡ ದಿಗಂತ್ ತಾತ-ಮೊಮ್ಮಗ..!

ತಾತ ಮೊಮ್ಮಗನ ಪಾತ್ರದಲ್ಲಿ ಇಬ್ಬರೂ ಮನರಂಜನೆಯ ಕಚಗುಳಿ ಕೊಡಲು ರೆಡಿಯಾಗಿದ್ದಾರೆ. ತಿಮ್ಮಯ್ಯ ಆಂಡ್ ತಿಮ್ಮಯ್ಯ ಅನ್ನೋ ಸಿನಿಮಾದಲ್ಲಿ ಪಂಚರಂಗಿ ಜೋಡಿಗಳು ಮತ್ತೇ ಒಂದಾಗಿದ್ದಾರೆ. ಈ ಇಬ್ಬರೂ ಸ್ಟಾರ್ ಗಳು ಒಂದೇ ಸಿನಿಮಾದಲ್ಲಿ ಇದ್ದಾರೆ ಅನ್ನೋ ವಿಚಾರ ಕೇಳಿ ಅಭಿಮಾನಿಗಳು ಕೂಡ ಫುಲ್ ಥ್ರಿಲ್ ಆಗಿದ್ದರು. ಇದೀಗ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ.

Written by - YASHODHA POOJARI | Edited by - Bhavishya Shetty | Last Updated : Oct 17, 2022, 08:38 PM IST
    • ತಿಮ್ಮಯ್ಯ ಆಂಡ್ ತಿಮ್ಮಯ್ಯ ಅನ್ನೋ ಸಿನಿಮಾದಲ್ಲಿ ಪಂಚರಂಗಿ ಜೋಡಿಗಳು ಮತ್ತೇ ಒಂದಾಗಿದ್ದಾರೆ
    • ತಿಮ್ಮಯ್ಯ ಆಂಡ್ ತಿಮ್ಮಯ್ಯ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ
    • ಲಕ್ಷ ಲಕ್ಷ ಅಭಿಮಾನಿಗಳು ಟೀಸರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ಹಿರಿಯ ನಟ ಅನಂತ್ ನಾಗ್ ಮತ್ತು ದೂದ್ ಪೇಡ ದಿಗಂತ್ ತಾತ-ಮೊಮ್ಮಗ..! title=
Thimmaiah and Thimmaiah

ಯಾವ ಸೀಸನ್ ನಲ್ಲಿ ಏನು ಕುಡಿಬೇಕು ಅಂತ ಗೊತ್ತಿಲ್ಲ ಅಂತ ವಟವಟ ಮಾತು ಶುರು ಮಾಡೋ ತಿಮ್ಮಯ್ಯ ಅಲಿಯಾಸ್ ಅನಂತ್ ನಾಗ್ ಮತ್ತೇ ನಮ್ಮನ್ನ ನಗಿಸಲು ಪ್ಲಸ್ ಅಳಿಸೋದಕ್ಕೆ ರೆಡಿಯಾಗಿದ್ದಾರೆ. ಅರೇ ಏನಿದು ಅಂತ ಆಶ್ಚರ್ಯ ಆಗಿರ್ಬೇಕು ಅಲ್ವಾ? ಯೆಸ್  ಹಿರಿಯ ನಟ ಅನಂತ್ ನಾಗ್ ಮತ್ತು ದೂದ್ ಪೇಡ ದಿಗಂತ್ ಮತ್ತೇ ಒಂದಾಗಿದ್ದಾರೆ.

ಇದನ್ನೂ ಓದಿ: Kantara box office: 16ನೇ ದಿನಕ್ಕೆ ಐತಿಹಾಸಿಕ ದಾಖಲೆ! ₹100 ಕೋಟಿ ಕ್ಲಬ್‌ನತ್ತ ಕಾಂತಾರ

ತಾತ ಮೊಮ್ಮಗನ ಪಾತ್ರದಲ್ಲಿ ಇಬ್ಬರೂ ಮನರಂಜನೆಯ ಕಚಗುಳಿ ಕೊಡಲು ರೆಡಿಯಾಗಿದ್ದಾರೆ. ತಿಮ್ಮಯ್ಯ ಆಂಡ್ ತಿಮ್ಮಯ್ಯ ಅನ್ನೋ ಸಿನಿಮಾದಲ್ಲಿ ಪಂಚರಂಗಿ ಜೋಡಿಗಳು ಮತ್ತೇ ಒಂದಾಗಿದ್ದಾರೆ. ಈ ಇಬ್ಬರೂ ಸ್ಟಾರ್ ಗಳು ಒಂದೇ ಸಿನಿಮಾದಲ್ಲಿ ಇದ್ದಾರೆ ಅನ್ನೋ ವಿಚಾರ ಕೇಳಿ ಅಭಿಮಾನಿಗಳು ಕೂಡ ಫುಲ್ ಥ್ರಿಲ್ ಆಗಿದ್ದರು. ಇದೀಗ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ. ಸಿನಿಮಾದ ಟೀಸರ್ ನೋಡಿದ ಫ್ಯಾನ್ಸ್ ಸಿನಿಮಾ ನೋಡಲು ಅಷ್ಟೇ ಕುತೂಹಲದಿಂದ ಕಾದಿದ್ದಾರೆ. ಲಕ್ಷ ಲಕ್ಷ ಅಭಿಮಾನಿಗಳು ಟೀಸರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದಿಗಂತ್ ಅವರಿಗೆ ಜೋಡಿಯಾಗಿ ಐಂದ್ರಿತಾ ರೇ ಅವರು ಸಿನಿಮಾದಲ್ಲಿ ನಟಿಸುತ್ತಿರುವುದು ವಿಶೇಷ. ನಿಜ ಬದುಕಿನಲ್ಲೂ ಜೋಡಿಯಾಗಿರುವ ದಿಗಂತ್ ಮತ್ತು ಐಂದ್ರಿತಾ ರೇ, ಇದಕ್ಕೂ ಮುಂಚೆ ಮನಸಾರೆ, ಪಾರಿಜಾತ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದರು. ಸಿನಿಮಾದಲ್ಲಿ ಶುಭ್ರಾ ಐಯ್ಯಪ್ಪ ಎರಡನೇ ನಾಯಕಿಯಾಗಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ: ಹನ್ಸಿಕಾ ಮೊಟ್ವಾನಿ ಮದುವೆ ಫಿಕ್ಸ್‌ : ರಾಜಸ್ಥಾನದ ಕೋಟೆಯಲ್ಲಿ ʼಬಿಂದಾಸ್‌ʼ ಬೆಡಗಿ ವಿವಾಹ..!

ಕಮರ್ಷಿಯಲ್ ಜಾಹಿರಾತು ನಿರ್ದೇಶಕರಾಗಿ ಕೆಲಸ ಮಾಡಿರುವ ಸಂಜಯ್ ಶರ್ಮಾ ಅವರು ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಅವರ ಮೊದಲನೇ ಸಿನಿಮಾ. ತಿಮ್ಮಯ್ಯ ಆ್ಯಂಡ್‌ ತಿಮ್ಮಯ್ಯ ಸಿನಿಮಾದಲ್ಲಿ ಅನಂತ್ ನಾಗ್ ಅವರು ದಿಗಂತ್ ಅವರ ತಾತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಡಿಕೇರಿಯಲ್ಲಿ ಬೀರು ಬಿಟ್ಟ ಕುಟುಂಬದ ಕಥೆಯನ್ನು ಚಿತ್ರ ಹೊಂದಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News