'ಟಿಕ್ ಟಿಕ್ ಟಿಕ್' ಎಂದು ಅಭಿಮಾನಿಗಳ ಹೃದಯ ಪಿಕ್ ಮಾಡುವ 'ದಿ ವಿಲನ್' ಸಾಂಗ್

   

Last Updated : Jul 21, 2018, 02:55 PM IST
'ಟಿಕ್ ಟಿಕ್ ಟಿಕ್' ಎಂದು ಅಭಿಮಾನಿಗಳ ಹೃದಯ ಪಿಕ್ ಮಾಡುವ 'ದಿ ವಿಲನ್' ಸಾಂಗ್  title=
Photo courtesy:Facebook

ಬೆಂಗಳೂರು: ನೀವು ಅಣ್ಣಾವ್ರ ಇಂಗ್ಲಿಷ್ ಹಾಡು ಟಿಕ್ ಟಿಕ್ ಟಿಕ್ ಕೇಳಿದ್ದಿರಲ್ಲವೇ? ಈಗ ನಿರ್ದೇಶಕ ಪ್ರೇಮ ಇದನ್ನು ವಿಭಿನ್ನ ರೀತಿಯಲ್ಲಿ ಸಾಹಿತ್ಯವನ್ನು ರಚಿಸಿದ್ದಾರೆ.ಇಂಗ್ಲಿಷ್ ಜೊತೆಗೆ ಕನ್ನಡವನ್ನು ಬೆರೆಸಿ ಹದಗೊಳಿಸಿರುವ ಟಿಕ್ ಟಿಕ್ ಟಿಕ್ ಸಾಂಗ್ ಈಗ ಅದ್ಧೂರಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ದಿ ವಿಲನ್ ಚಿತ್ರದ ಎರಡನೇ ಚಿತ್ರದ ಹಾಡಾಗಿದೆ.ಡಾ. ಶಿವಣ್ಣ & ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ನಟಿಸಿರುವ ಈ ಚಿತ್ರ ಈಗಾಗಲೇ ತನ್ನ ಟಿಸರ್ ಮೂಲಕ ಅಭಿಮಾನಿಗಳಲ್ಲಿ ಕ್ರೇಜ್ ಹುಟ್ಟಿಸಿದೆ.

ಅರ್ಜುನ್ ಜನ್ಯ ಅವರ ಸಂಗಿತದಲ್ಲಿ ಮೂಡಿ ಬಂದಿರುವ ಈ ಟಿಕ್ ಟಿಕ್ ಟಿಕ್ ಹಾಡನ್ನು ಕೈಲಾಶ್ ಖೇರ್ ,ವಿಜಯ್ ಪ್ರಕಾಶ್ ,ಮತ್ತು ಪ್ರೇಮ,ಸಿದ್ದಾರ್ಥ್ ಬಸರೂರ್  ಹಾಡ್ಡಿದ್ದು ಎಲ್ಲರ ಮನದಲ್ಲಿ ಗುನುಗುವಂತಿದೆ. ಈ ಹಾಡು ಶುಕ್ರವಾರದಂದು ಬಿಡುಗಡೆಯಾಗಿದ್ದು, ಬಿಡುಗಡೆಯಾದ ಒಂದೇ ದಿನದಲ್ಲಿ 83 ಸಾವಿರ ಜನರು ಯೂಟೂಬ್ ನಲ್ಲಿ ಈ ಹಾಡನ್ನು ವಿಕ್ಷಿಸಿದ್ದಾರೆ.

ಇದೇ ಮೊದಲ ಬಾರಿಗೆ ಶಿವರಾಜ್ ಕುಮಾರ್ ಮತ್ತು ಸುದೀಪ್ ಕೂಡಿ ನಟಿಸುತ್ತಿರುವ ಈ ಚಿತ್ರ ಈಗ ಇಡೀ ದಕ್ಷಿಣ ಭಾರತದ ಗಮನ ಸೆಳೆದಿದೆ. ಒಟ್ಟಿನಲ್ಲಿ ಚಿತ್ರ ಬಿಡುಗಡೆಗೂ ಮುನ್ನವೇ ದಿ ವಿಲನ್ ಸಾಕಷ್ಟು ಕೂತೂಹಲವನ್ನು ಹುಟ್ಟಿಸಿದೆ ಎನ್ನುವುದರಲ್ಲಿ ಅನುಮಾನವಿಲ್ಲ ಎನ್ನಬಹುದು.

Trending News