ಬೇರೆ ನಿರ್ಮಾಪಕರ ಸಿನಿಮಾ ಒಪ್ಪಿದ್ದಕ್ಕೆ ಖ್ಯಾತ ನಟಿಯ ಖಾಸಗಿ ವಿಡಿಯೋ ವೈರಲ್‌ ಮಾಡಿದ ನಿರ್ಮಾಪಕ..!

Actress Video : ಲೀವ್‌ ಇನ್‌ ರಿಲೇಶನ್‌ಶಿಪ್‌ನಲ್ಲಿದ್ದ ಖ್ಯಾತ ನಟಿ, ನಿರ್ಮಾಪಕರ ವಿಚಾರ ಇದೀಗ ಬೆಳಕಿಗೆ ಬಂದಿದೆ. ಸದ್ಯ ನಟಿಯ ಖಾಸಗಿ ವಿಡಿಯೋಗಳು ಮತ್ತು ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಸೋರಿಕೆಯಾಗಿವೆ. ಈ ವಿಚಾರವಾಗಿ ನಿರ್ಮಾಪಕನ ವಿರುದ್ಧ ನಟಿ ದೂರು ದಾಖಲಿಸಿದ್ದಾರೆ.  

Written by - Savita M B | Last Updated : Jul 31, 2023, 11:46 AM IST
  • ಲೀವ್‌ ಇನ್‌ ರಿಲೇಶನ್‌ಶಿಪ್‌ನಲ್ಲಿದ್ದ ಖ್ಯಾತ ನಟಿ, ನಿರ್ಮಾಪಕರ ವಿಚಾರ ಇದೀಗ ಬೆಳಕಿಗೆ ಬಂದಿದೆ.
  • ನಟಿಯ ಖಾಸಗಿ ವಿಡಿಯೋಗಳು ಮತ್ತು ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಸೋರಿಕೆಯಾಗಿವೆ
  • ಈ ಸಂಬಂಧ ನಟಿಯಿಂದ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಬೇರೆ ನಿರ್ಮಾಪಕರ ಸಿನಿಮಾ ಒಪ್ಪಿದ್ದಕ್ಕೆ ಖ್ಯಾತ ನಟಿಯ ಖಾಸಗಿ ವಿಡಿಯೋ ವೈರಲ್‌ ಮಾಡಿದ ನಿರ್ಮಾಪಕ..!  title=

Actress Video Leaked : ತನ್ನ ಸಿನಿಮಾ ಒಪ್ಪಿಕೊಂಡಿಲ್ಲ, ಬೇರೆ ನಿರ್ಮಾಪಕರ ಜತೆ ಸಿನಿಮಾ ಮಾಡಲು ಒಪ್ಪಿದ್ದಕ್ಕೆ ನಿರ್ಮಾಪಕ ದಯಾನಿಧಿ ದಹಿಮಾ ನಟಿಯ ಖಾಸಗಿ ವಿಡಿಯೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾನೆ. ಈ ಸಂಬಂಧ ನಟಿಯಿಂದ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಈ ಕುರಿತು ಒಡಿಶಾದ ಭುವನೇಶ್ವರದ ಲಕ್ಷ್ಮೀ ಸಾಗರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾನು ಕಳೆದ ಕೆಲ ವರ್ಷಗಳಿಂದ ನಿರ್ಮಾಪಕರ ಜತೆಗೆ ಉತ್ತಮ ಬಾಂಧವ್ಯದಿಂದ ಇದ್ದೆ. ಅದನ್ನೇ ಅವರು ಈ ರೀತಿ ಮೋಸಕ್ಕೆ ಬಳಸಿಕೊಂಡಿದ್ದಾರೆ ಎಂದು ನಟಿ ದೂರಿನಲ್ಲಿ ತಿಳಿಸಿದ್ದಾರೆ. 

"ಆರಂಭದಲ್ಲಿ ಅವನು ನನ್ನ ಜೊತೆ ಇದ್ದಾಗ ಕ್ಲೋಸ್‌ ಫೋಟೋ ತೆಗೆದುಕೊಂಡು ವಿಡಿಯೋಗಳನ್ನು ರೆಕಾರ್ಡ್‌ ಮಾಡುತ್ತಿದ್ದ. ನಾನು ಆಗ ಏನೂ ಹೇಳುತ್ತಿರಲಿಲ್ಲ..ಆತ ಉದ್ದೇಶಪೂರ್ವಕವಾಗಿ ಈ ರೀತಿ ನಡೆದುಕೊಳ್ಳುತ್ತಿದ್ದಾನೆ ಎಂದು ನನಗೆ ತಿಳಿದಿರಲಿಲ್ಲ. ಅವನನ್ನು ನಾನು ತುಂಬಾ ನಂಬಿದ್ದೆ. ಸಿನಿಮಾದಲೂ ಅವರ ಜೊತೆ ಕೆಲಸ ಮಾಡಿದ್ದೆ...ಹೀಗೆ ಈ ನಡುವೆ ಚಿತ್ರದ ಸಂಭಾವನೆ ಕೇಳಿದರೆ ಕೊಟ್ಟಿರಲಿಲ್ಲ. ಆಗಿನಿಂದ ನಮ್ಮಿಬ್ಬರ ಸಂಭಂದದಲ್ಲಿ ಬಿರುಕು ಉಂಟಾಗಿತ್ತು" ಎಂದಿದ್ದಾರೆ.

ಇದನ್ನೂ ಓದಿ-ಬಿಡುಗಡೆಯಾಯಿತು ನವೀನ್ ಶಂಕರ್ ಅಭಿನಯದ "ಕ್ಷೇತ್ರಪತಿ" ಚಿತ್ರದ ಹೊಸ ಪೋಸ್ಟರ್ 

"ಬಳಿಕ ಆತ ನನ್ನನ್ನು ನಿಂದಿಸಲು ಆರಂಭಿಸಿದ..ಅದರೆ ಈಗ ನನ್ನ ಖಾಸಗಿ ವಿಡಿಯೋ ಮತ್ತು ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಲೀಕ್‌ ಮಾಡಿದ್ದಾನೆ" ಎಂದು ನಟಿ ದೂರಿನಲ್ಲಿ ತಿಳಿಸಿದ್ದಾರೆ. ಈ ಪ್ರಕರಣ ದಾಖಲೆಯ ಆಧಾರದ ಮೇಲೆ ನಿರ್ಮಾಪಕ ದಯಾನಿಧಿ ದಹಿಮಾ ವಿರುದ್ಧ ಕೇಸ್‌ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಈ ಪ್ರಕರಣದ ಇನ್ನೊಂದು ಮಗ್ಗಲು ನೋಡುವುದಾದರೆ, ನಿರ್ಮಾಪಕ ಹಾಗೂ ನಟಿ ಕೆಲವು ವರ್ಷಗಳಿಂದ ಒಂದೇ ಮನೆಯಲ್ಲಿಯೇ ವಾಸವಾಗಿದ್ದರು. ಹೀಗಿರುವಾಗಲೇ ನಟಿ ಬೇರೆ ನಿರ್ಮಾಪಕರ ಜತೆಗೆ ಸಿನಿಮಾ ಮಾಡಲು ಮುಂದಾಗಿದ್ದೇ ಈ ಪ್ರಕರಣಕ್ಕೆ ಮೂಲ ಕಾರಣ ಎನ್ನಲಾಗುತ್ತಿದೆ.

ಇದನ್ನೂ ಓದಿ-ಇನ್ಮುಂದೆ ಥಿಯೇಟರ್‌ನಲ್ಲಿ ಸಿನಿಮಾ ಪೈರಸಿ ಮಾಡಿದ್ರೆ ಜೈಲು...ಕೋಟ್ಯಾಂತರ ರೂಪಾಯಿ ದಂಡ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News