ಕನ್ನಡದ ಮೊದಲ ಬಯೋಪಿಕ್ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಪದ್ಮಶ್ರೀ ಪುರಸ್ಕೃತ ಡಾ. ವಿಜಯ ಸಂಕೇಶ್ವರ ಅವರ ಜೀವನವನ್ನು ಆಧರಿಸಿ ತಯಾರಾಗಿರುವ 'ವಿಜಯಾನಂದ' ಚಿತ್ರ ನಮ್ಮ ಜೀವನಕ್ಕೆ ಸ್ಫೂರ್ತಿ ತುಂಬೋ ಸಿನಿಮಾವಾಗಿದೆ.
ಭಾರತದ ಅತೀ ದೊಡ್ಡ ಲಾಜಿಸ್ಟಿಕ್ಸ್ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವಿಆರ್ಎಲ್ ಸಂಸ್ಥೆಯ ಮಾಲೀಕರಾಗಿರುವ ವಿಜಯ ಸಂಕೇಶ್ವರ ಅವರ ಸಾಹಸಮಯ ಮತ್ತು ರೋಮಾಂಚನಕಾರಿ ಕಥೆಯನ್ನು ಸಾರುವ ಈ ಚಿತ್ರದಲ್ಲಿ ಡಾ. ವಿಜಯ ಸಂಕೇಶ್ವರ ಮತ್ತು ಅವರ ಮಗ ಡಾ. ಆನಂದ ಸಂಕೇಶ್ವರ ಅವರು ನಡೆದು ಬಂದ ಹಾದಿಯ ಕಥೆ ರೋಚಕವೆನಿಸುತ್ತೆ.
ಪ್ರಿಂಟಿಂಗ್ ಪ್ರೆಸ್ ಅಷ್ಟೇ ಜೀವನಕ್ಕೆ ಸಾಲದು ಅಂತ VRL ಸಂಸ್ಥೆ ಕಟ್ಟಲು ಪರದಾಡಿದ ರೀತಿ ಕಣ್ಣೀರು ತರಿಸುತ್ತೆ.ತಂದೆಯಿಂದ ದೂರ ಬಂದ ಮಗ ದೊಡ್ಡ ಸಾಮ್ರಾಜ್ಯ ಸೃಷ್ಟಿಸಲು ಪಟ್ಟ ಕಷ್ಟ,ಅವಮಾನ,ನೋವು,ಕಣ್ಣೀರು ಇವೆಲ್ಲವೂ ಜೀವನಕ್ಕೆ ಒಳ್ಳೆ ಸಂದೇಶ ಸಾರುವಂತಿದೆ. ಇವತ್ತು ಆ ಸಾಮ್ರಾಜ್ಯದಲ್ಲಿ ಅದೆಷ್ಟೋ ಮಂದಿ ಬದುಕುಕಟ್ಟಿಕೊಳ್ಳುವಳ್ಳಿ ಇವರ ಪಾತ್ರ ಎಂತದ್ದು ಅನ್ನೋದನ್ನ ಎರಡು ಮುಕ್ಕಾಲು ಗಂಟೆ ತೆರೆಯ ಮೇಲೆ ತುಂಬಾ ಅಚ್ಚುಕಟ್ಟಾಗಿ ತೋರಿಸಲಾಗಿದೆ.
#VijayAnandMovie- A biopic on Legendary #VijaySankeshwar. Not just an empire, He leads a legacy. Watch this inspiring film in theatres from tomorrow#VijayanandOn9Dec22 pic.twitter.com/EbPWisvMkT
— Prashanth Rangaswamy (@itisprashanth) December 8, 2022
ಇದನ್ನೂ ಓದಿ : Virender Sehwag : ಟೀಂ ಇಂಡಿಯಾ ಹೀನಾಯ ಸೋಲನ್ನು ಲೇವಡಿ ಮಾಡಿದ ವೀರೇಂದ್ರ ಸೆಹ್ವಾಗ್
ಡೈರೆಕ್ಟರ್ ಇವೆಲ್ಲವನ್ನೂ ಮನಮುಟ್ಟುವ ರೀತಿ ನಮಗೆ ತಲುಪಿಸಿದ್ದಾರೆ.ನಾಯಕ ನಿಹಾಲ್ ಅವರು ವಿಜಯ ಸಂಕೇಶ್ವರ್ ಪಾತ್ರಕ್ಕೆ ಜೀವ ಕೊಟ್ಟಿದ್ದಾರೆ.. ಎಲ್ಲೂ ಕೂಡ ಬೋರ್ ಅನಿಸಲ್ಲ.. ವಾಟ್ ನೆಕ್ಸ್ಟ್ ಅನ್ನೋ ಕುತೂಹಲದಿಂದಲೇ ಸೀಟ್ ಅಂಚಿನಲ್ಲಿ ನಮ್ಮಲ್ಲಿ ಕೂರಿಸುತ್ತೆ.ಸೋ ಇನ್ಯಾಕೆ ತಡ ಓಡೋಡಿ ಬಂದು ಸಿನಿಮಾ ನೋಡಿ ಥ್ರಿಲ್ ಆಗಿ.
ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಸೇರಿದಂತೆ ಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆ ಕಂಡಿದ್ದು ಎಲ್ಲಾರೂ ಇಷ್ಟಪಡೋ ಲೆವೆಲ್ಲಿಗೆ ರಿಯಲ್ ಕಹಾನಿ ಹೊಂದಿದೆ.ರಿಷಿಕಾ ಶರ್ಮ, 'ವಿಜಯಾನಂದ' ಚಿತ್ರಕ್ಕೆ ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನವನ್ನೂ ಮಾಡಿದ್ದಾರೆ.
ಇದನ್ನೂ ಓದಿ: Minister Halappa Achar : 'ದೇವದಾಸಿ ಪದ್ದತಿಯ ನಿರ್ಮೂಲನಗೆ ಕಟ್ಟುನಿಟ್ಟಿನ ಕಾನೂನು'
ಚಿತ್ರದಲ್ಲಿ ನಾಯಕನಾಗಿ ನಿಹಾಲ್ ರಜಪೂತ್ ಅವರು ಡಾ. ವಿಜಯ ಸಂಕೇಶ್ವರ ಅವರ ಪಾತ್ರದಲ್ಲಿ ಅಭಿನಯಿಸಿದ್ದು, ಮೂರು ವಯೋಮಾನ ಮತ್ತು ಶೇಡ್ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅನಂತ್ ನಾಗ್, ರವಿಚಂದ್ರನ್, ವಿನಯಾ ಪ್ರಸಾದ್, ಸಿರಿ ಪ್ರಹ್ಲಾದ್, ಅರ್ಚನಾ ಕೊಟ್ಟಿಗೆ, ಪ್ರಕಾಶ್ ಬೆಳವಾಡಿ, ಭರತ್ ಬೋಪಣ್ಣ, ಶೈನ್ ಶೆಟ್ಟಿ, ದಯಾಳ್ ಪದ್ಮನಾಭನ್, ರಮೇಶ್ ಭಟ್ ಸೇರಿ ಮೊದಲಾದ ಪ್ರತಿಭಾವಂತ ಕಲಾವಿದರು ವಿಜಯಾನಂದ ಚಿತ್ರದಲ್ಲಿ ನಿಮ್ಮನ್ನ ಭರ್ಜರಿಯಾಗಿ ರಂಜಿಸಲಿದ್ದಾರೆ.
VRL ಪ್ರೊಡಕ್ಷನ್ಸ್ನಡಿ ಡಾ. ಆನಂದ ಸಂಕೇಶ್ವರ ನಿರ್ಮಿಸಿರುವ 'ವಿಜಯಾನಂದ' ಚಿತ್ರಕ್ಕೆ ದಕ್ಷಿಣ ಭಾರತದ ಜನಪ್ರಿಯ ಸಂಗೀತ ನಿರ್ದೇಶಕರಾದ ಗೋಪಿ ಸುಂದರ್ ಸಂಗೀತ ಸಂಯೋಜಿಸಿದ್ದು, ಕೀರ್ತನ್ ಪೂಜಾರಿ ಅವರ ಛಾಯಾಗ್ರಹಣವಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.