Upadhyaksha Movie : ಚಿಕ್ಕಣ್ಣ 'ಉಪಾಧ್ಯಕ್ಷ' ಸಿನಿಮಾದಲ್ಲಿ ಸೂಪರ್ ಸ್ಟಾರ್ ಒಬ್ರ ಎಂಟ್ರಿ ಪಕ್ಕಾ..! 

Upadhyaksha Movie : ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ತುಂಬಾ ಬ್ಯುಸಿ ನಟ ಅಂದ್ರೆ ಅದು ಹಾಸ್ಯನಟ ಚಿಕ್ಕಣ್ಣ.ಚಿಕ್ಕಣ್ಣ ಯಾವುದೇ ಸಿನಿಮಾದಲ್ಲಿ ಇದ್ರೂ ನಗುವಿನ ಹೊಳೆಯನ್ನೇ ಹರಿಸಿಬಿಡ್ತಾರೆ.ಪ್ರತಿಯೊಬ್ಬ ಅಭಿಮಾನಿಯೂ ಚಿಕ್ಕಣ್ಣ ನಮ್ಮ ಮನೆ ಮಗ ಅಂತಲೇ ಭಾವಿಸಿದ್ದಾರೆ.ಇದೀಗ ಚಿಕ್ಕಣ್ಣ ಹೀರೋ ಆಗಿರೋ ಮ್ಯಾಟರ್ ನಿಮ್ಗೆ ಗೊತ್ತೇ ಇದೆ.

Written by - YASHODHA POOJARI | Last Updated : Jan 2, 2023, 04:59 PM IST
  • ಇಂಡಸ್ಟ್ರಿಯಲ್ಲಿ ತುಂಬಾ ಬ್ಯುಸಿ ನಟ ಅಂದ್ರೆ ಅದು ಹಾಸ್ಯನಟ ಚಿಕ್ಕಣ್ಣ
  • ಇದೀಗ ಚಿಕ್ಕಣ್ಣ ಹೀರೋ ಆಗಿರೋ ಮ್ಯಾಟರ್ ನಿಮ್ಗೆ ಗೊತ್ತೇ ಇದೆ
  • ಚಿಕ್ಕಣ್ಣ ನಟಿಸಿರೋ ಉಪಾಧ್ಯಕ್ಷ ಸಿನಿಮಾ ತೆರೆ ಕಾಣಲು ಸಿದ್ಧವಾಗಿದೆ
Upadhyaksha Movie : ಚಿಕ್ಕಣ್ಣ 'ಉಪಾಧ್ಯಕ್ಷ' ಸಿನಿಮಾದಲ್ಲಿ ಸೂಪರ್ ಸ್ಟಾರ್ ಒಬ್ರ ಎಂಟ್ರಿ ಪಕ್ಕಾ..!  title=

Upadhyaksha Movie : ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ತುಂಬಾ ಬ್ಯುಸಿ ನಟ ಅಂದ್ರೆ ಅದು ಹಾಸ್ಯನಟ ಚಿಕ್ಕಣ್ಣ. ಚಿಕ್ಕಣ್ಣ ಯಾವುದೇ ಸಿನಿಮಾದಲ್ಲಿ ಇದ್ರೂ ನಗುವಿನ ಹೊಳೆಯನ್ನೇ ಹರಿಸಿಬಿಡ್ತಾರೆ. ಪ್ರತಿಯೊಬ್ಬ ಅಭಿಮಾನಿಯೂ ಚಿಕ್ಕಣ್ಣ ನಮ್ಮ ಮನೆ ಮಗ ಅಂತಲೇ ಭಾವಿಸಿದ್ದಾರೆ. ಇದೀಗ ಚಿಕ್ಕಣ್ಣ ಹೀರೋ ಆಗಿರೋ ಮ್ಯಾಟರ್ ನಿಮ್ಗೆ ಗೊತ್ತೇ ಇದೆ. ಫೆಬ್ರವರಿ ತಿಂಗಳಲ್ಲಿ ಚಿಕ್ಕಣ್ಣ ಹೀರೋ ಆಗಿ ನಟಿಸಿರೋ ಉಪಾಧ್ಯಕ್ಷ ಸಿನಿಮಾ ತೆರೆ ಕಾಣಲು ಸಿದ್ಧವಾಗಿದೆ. ಅಧ್ಯಕ್ಷ’ ಸಿನಿಮಾದಲ್ಲಿ ‘ಉಪಾಧ್ಯಕ್ಷ’ನಾಗಿ ಮಿಂಚಿದ್ದ. ಚಿಕ್ಕಣ್ಣ ಅದೇ ಟೈಟಲ್ ‌ನ ಹೆಸರಿನ ಸಿನಿಮಾದಲ್ಲಿ ಶೈನ್ ಆಗೋದು ಕನ್ಫರ್ಮ್ ಆಗಿದೆ. 

ಈಗ ಸಿನಿಮಾದ ಚಿತ್ರೀಕರಣ ಮುಕ್ತಾಯ ಕಂಡಿದ್ದು ರಿಲೀಸ್ ಮಾಡುವ ತಯಾರಿಯಲ್ಲಿದೆ ಚಿತ್ರ ತಂಡ. ಜೀ ಕನ್ನಡ ನ್ಯೂಸ್ ಸಂದರ್ಶನದಲ್ಲಿ ಚಿಕ್ಕಣ್ಣ ಉಪಾಧ್ಯಕ್ಷ ಸಿನಿಮಾದಲ್ಲಿ ಸೂಪರ್ ಸ್ಟಾರ್ ಒಬ್ಬರು ಎಂಟ್ರಿ ಕೊಡ್ತಾರೆ ಅನ್ನೋ Exclusive ಮಾಹಿತಿ ಬಿಚ್ಚಿಟ್ಟಿದ್ದಾರೆ. ಯಾರು ಅವರು ಅನ್ನೋ ಚರ್ಚೆ ಈಗ ಜೋರಾಗಿದೆ. ರಾಕಿಂಗ್ ಸ್ಟಾರ್ ಯಶ್  ಅಥವಾ ಶಿವಣ್ಣ ಅಥವಾ ಉಪ್ಪಿನಾ ಅನ್ನೋ ಟಾಕ್ ನಡೆಯುತ್ತಿದೆ.ಯಾರು ಅನ್ನೋದನ್ನ ಚಿತ್ರತಂದವೇ ರಿವಿಲ್ ಮಾಡಬೇಕಿದೆ. ಅನಿಲ್ ಕುಮಾರ್ ನಿರ್ದೇಶಿಸುತ್ತಿರುವ ‘ಉಪಾಧ್ಯಕ್ಷ’ ಸಿನಿಮಾದ ಹಾಡುಗಳ ಚಿತ್ರೀಕರಣ ‌ಮುಗಿಸಿ ಕುಂಬಳಕಾಯಿ ಒಡೆದು ಪ್ಯಾಕಪ್ ಮಾಡಿದೆ.

ಇದನ್ನೂ ಓದಿ : 'ಉಪಾಧ್ಯಕ್ಷ' ಚಿಕ್ಕಣ್ಣನ ಬಗ್ಗೆ ಡಿಬಾಸ್ ಹೇಳಿದ್ದೇನು?

ಮೈಸೂರು, ಚಿಕ್ಕಮಗಳೂರು, ಮೂಡಿಗೆರೆ ಮುಂತಾದ ಕಡೆ ಐವತ್ತಕ್ಕೂ ಅಧಿಕ ದಿನಗಳ ಚಿತ್ರೀಕರಣ ನಡೆದಿದೆ. ಉಪಾಧ್ಯಕ್ಷ’ ಸಿನಿಮಾದಲ್ಲಿ ‘ಉಪಾಧ್ಯಕ್ಷ’ನ ಮದುವೆಯಾಗುತ್ತದೆ. ಆ ಬಳಿಕ ಆತನ ಜೀವನದಲ್ಲಿ ಏನಾಗುತ್ತದೆ ಎನ್ನುವುದನ್ನು ‌ಈ‌ ಸಿನಿಮಾದಲ್ಲಿ ತೋರಿಸಲಾಗಿದೆ.

ನಾಯಕಿಯಾಗಿ ‘ಹಿಟ್ಲರ್ ಕಲ್ಯಾಣ’ ಖ್ಯಾತಿಯ ಮಲೈಕಾ ವಸುಪಾಲ್‌, ಸಾಧುಕೋಕಿಲ, ರವಿಶಂಕರ್, ವೀಣಾಸುಂದರ್ , ಧರ್ಮಣ್ಣ ಮುಂತಾದ ತಾರಾಬಳಗವಿದೆ.ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿರುವ ಚಿತ್ರಕ್ಕೆ ಶೇಖರ್ ಚಂದ್ರ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನವಿದೆ. ಉಮಾಪತಿ ಫಿಲಂಸ್ ಅರ್ಪಿಸುವ, ಡಿ.ಎನ್ ಸಿನಿಮಾಸ್ ಲಾಂಛನದಲ್ಲಿ ಸ್ಮಿತಾ ಉಮಾಪತಿ ಹಾಗೂ ನಿರ್ಮಲ ಶ್ರೀನಿವಾಸ್ ನಿರ್ಮಾಣ ಮಾಡುತ್ತಿದ್ದಾರೆ.

ಇದನ್ನೂ ಓದಿ : ಮತ್ತೆ ಮತ್ತೆ ವಿವಾದ ಮೈಮೇಲೆ ಹಾಕಿಕೊಳ್ಳೋದು ಯಾಕೆ ರಶ್ಮಿಕಾ ಮಂದಣ್ಣ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News