Thalapathy 69 : 1000 ಕೋಟಿ ಟಾರ್ಗೆಟ್..!! ಎಲ್ಲಾ ಸೂಪರ್‌ ಹಿಟ್‌ ಸಿನಿಮಾಗಳ ದಾಖಲೆ ಮುರಿಯುತ್ತಾ ವಿಜಯ್ ದಳಪತಿ 69..?

Thalapathy 69 : ದಳಪತಿ ವಿಜಯ್ ತಮ್ಮ ಕೊನೆಯ ಚಿತ್ರದ ಮೂಲಕ ದಾಖಲೆಗಳನ್ನು ಮುರಿಯಲು ಸಜ್ಜಾಗಿದ್ದಾರೆ.. ರಾಜಕೀಯದಲ್ಲಿ ಸಕ್ರಿಯವಾಗಿರುವ ನಟ.. ಇತ್ತೀಚೆಗೆ ತಮ್ಮ ಕೊನೆಯ ಚಿತ್ರದ ಮುಹೂತ್ತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.. ವಿಜಯ್‌ ಲಾಸ್ಟ್‌ ಸಿನಿಮಾ ಭಾರತೀಯ ಸಿನಿರಂಗದಲ್ಲಿ ಹಿಸ್ಟರ್‌ ಕ್ರಿಯೇಟ್‌ ಮಾಡುತ್ತಾ..? ಎನ್ನುವ ಕುತೂಹಲ ಮೂಡಿಸಿದೆ..

Written by - Krishna N K | Last Updated : Oct 5, 2024, 06:40 PM IST
    • ದಳಪತಿ ವಿಜಯ್ ಕೊನೆಯ ಚಿತ್ರ
    • ದಾಖಲೆಗಳನ್ನು ಮುರಿಯಲು ಸಜ್ಜಾ ನಟ
    • ಹಿಸ್ಟರ್‌ ಕ್ರಿಯೇಟ್‌ ಮಾಡುತ್ತಾ..? ದಳಪತಿ 69
Thalapathy 69 : 1000 ಕೋಟಿ ಟಾರ್ಗೆಟ್..!! ಎಲ್ಲಾ ಸೂಪರ್‌ ಹಿಟ್‌ ಸಿನಿಮಾಗಳ ದಾಖಲೆ ಮುರಿಯುತ್ತಾ ವಿಜಯ್ ದಳಪತಿ 69..? title=

Thalapathy Vijay : ತಮಿಳಿನ ಸ್ಟಾರ್ ಹೀರೋ ವಿಜಯ್ ದಳಪತಿ ರಾಜಕೀಯದಲ್ಲಿ ಸಕ್ರಿಯರಾಗಲಿದ್ದಾರೆ. ಸಿನಿರಂಗಕ್ಕೆ ಶಾಶ್ವತವಾಗಿ ಬ್ರೇಕ್ ನೀಡುವುದಾಗಿ ಘೋಷಿಸಿದ್ದಾರೆ. ದಳಪತಿ 69 ಅವರ ವೃತ್ತಿಜೀವನದ ಕೊನೆಯ ಚಿತ್ರವಾಗಲಿದೆ. ಹೀಗಾಗಿ ಅವರ ಕೊನೆಯ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಹಾಗೂ ಚಿತ್ರರಂಗದಲ್ಲಿ ಕುತೂಹಲ ಮೂಡಿಸಿದೆ..

69 ತಮಿಳು ಸಿನಿಮಾಗಳ ಮೂಲಕ ದಾಖಲೆಗಳನ್ನು ಮುರಿದು ಸಿನಿರಂಗಕ್ಕೆ ಸ್ಮರಣೀಯ ಕೊಡುಗೆ ನೀಡಿರುವ ದಳಪತಿ ವಿಜಯ್‌ ಈ ರೀತಿ ಯೋಜಿಸುತ್ತಿದ್ದಾರೆಂದು ಯಾರಿಗೂ ಗೊತ್ತಿರಲಿಲ್ಲ.. ಅಷ್ಟೇ ಅಲ್ಲ ಇದುವರೆಗೆ ಅವರ ವೃತ್ತಿ ಜೀವನದಲ್ಲಿ ಅವರ ಯಾವ ಸಿನಿಮಾ ಸಹ 1000 ಕೋಟಿ ಗಳಿಸಿಲ್ಲ.. ಈಗ ಪ್ಯಾನ್ ಇಂಡಿಯಾ ಸಿನಿಮಾಗಳು ಅದರಲ್ಲೂ ತೆಲುಗಿನ ಸ್ಟಾರ್ ಹೀರೋ ಸಿನಿಮಾಗಳು 1000 ಕೋಟಿ ಗುರಿ ತಲುಪುತ್ತಿರುವಾಗ... ಆ ದಾಖಲೆಯನ್ನು ತಮ್ಮ ಮುಂದಿನ ಸಿನಿಮಾ ದಾಟುವ ನಿರೀಕ್ಷೆಯಲ್ಲಿದ್ದಾರೆ ದಳಪತಿ. 

ಇದನ್ನೂ ಓದಿ:ಪವನ್ ಕಲ್ಯಾಣ್ ಚಿಕನ್ ತಿನ್ನುತ್ತಾರಾ? ವೈರಲ್‌ ಆಗುತ್ತಿದೆ ಈ ಫೋಟೋ.. ನಟನ ಅವತಾರ ಕಂಡು ಶಾಕ್‌ ಆದ ಫ್ಯಾನ್ಸ್‌ !!

ರಾಜಮೌಳಿ ನಿರ್ದೇಶನದ ಬಾಹುಬಲಿ 2 ಚಿತ್ರ ಭಾರತೀಯ ಚಿತ್ರರಂಗದ ಎಲ್ಲಾ ದಾಖಲೆಗಳನ್ನು ಮುರಿದಿದೆ. ಬಾಹುಬಲಿ ತಮಿಳಿನಲ್ಲೂ ಬಿಡುಗಡೆಯಾಗಿ 1000 ಕೋಟಿ ಗಡಿ ದಾಟಿದೆ. ಆದರೆ ಇದುವರೆಗೆ ಯಾವುದೇ ಸಂಪೂರ್ಣ ತಮಿಳು ಚಿತ್ರ ಇಂತಹ ದಾಖಲೆಯನ್ನು ಸಾಧಿಸಿಲ್ಲ. 

ಈ ಮೈಲಿಗಲ್ಲು ದಾಟುವ ಮೂಲಕ ತಮ್ಮ ಸಿನಿಮಾ ಅಭಿಮಾನಿಗಳನ್ನು ಸಂತೋಷಪಡಿಸಲು ವಿಜಯ್‌ ಸಿದ್ಧರಾಗಿದ್ದಾರೆ. ವಿಜಯ್ ಅಭಿನಯದ ಅತಿ ದೊಡ್ಡ ಹಿಟ್ ಚಿತ್ರ ಲಿಯೋ ವಿಶ್ವಾದ್ಯಂತ 620 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು.. ಸಾವಿರ ಕೋಟಿಯ ಹತ್ತಿರ ಬಂದಿತ್ತು. ಹೀಗಾಗಿ ಅವರ ಕೊನೆಯ ಸಿನಿಮಾವನ್ನು ಇನ್ನಷ್ಟು ಜಾಗರೂಕತೆಯಿಂದ ಪ್ಲಾನ್ ಮಾಡಿದರೆ ಈ ದಾಖಲೆ ದೊಡ್ಡ ಸವಾಲಾಗಲಾರದು.. 

ಈ ಚಿತ್ರವನ್ನು ಹೆಚ್ ವಿನೋದ್ ನಿರ್ದೇಶಿಸಿದ್ದಾರೆ. ದಳಪತಿ 69ನೇ ಚಿತ್ರದ ಮೂಲಕ 1000 ಕೋಟಿ ದಾಟಿ ವಿಜಯ್‌ಗೆ ಮತ್ತೊಂದು ದೊಡ್ಡ ಯಶಸ್ಸನ್ನು ನೀಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ದಳಪತಿ 69 ಸಿನಿಮಾದ ಶೂಟಿಂಗ್ ಶುರುವಾಗಿದ್ದು, ಸದ್ಯ ಅದ್ಧೂರಿ ಸೆಟ್‌ನಲ್ಲಿ ಹಾಡಿನ ಚಿತ್ರೀಕರಣ ನಡೆಯುತ್ತಿದೆ ಎನ್ನಲಾಗಿದೆ..

ಇದನ್ನೂ ಓದಿ:ವಿಚ್ಛೇದನ ವದಂತಿ ಬೆನ್ನಲೇ ಪಬ್ಲಿಕ್‌ನಲ್ಲೇ ಜಗಳವಾಡಿದ ಅಭಿಷೇಕ್ ಬಚ್ಚನ್-ಐಶ್ವರ್ಯಾ ರೈ! ವಿಡಿಯೋ ವೈರಲ್

ಈ ಹಾಡಿಗೆ ಶೇಖರ್ ಮಾಸ್ಟರ್ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ.. ದಳಪತಿ 69 ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ. ಮಮಿತಾ, ನರೇಶ್, ಪೂಜಾ ಹೆಗ್ಡೆ, ಪ್ರಕಾಶ್ ರಾಜ್, ಗೌತಮ್ ವಾಸುದೇವ್ ಮೆನನ್, ಪ್ರಿಯಾಮಣಿ, ಮೋನಿಶಾ ಬ್ಲಾಸಿ ಮತ್ತು ಪ್ರಕಾಶ್ ರಾಜ್ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಸತ್ಯನ್ ಸೂರ್ಯನ್ ಛಾಯಾಗ್ರಹಣ ಇದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News