NCB at Shahrukh Khan’s Residence: ಶಾರುಖ್ ಖಾನ್ ನಿವಾಸ ಮನ್ನತ್ ಮೇಲೂ NCB ದಾಳಿ

ಆರ್ಯನ್ ಖಾನ್ ಡ್ರಗ್  ಪ್ರಕರಣ ದಿನೇ ದಿನೇ ಹೊಸ ಹೊಸ ರೂಪ ಪಡೆದುಕೊಳ್ಳುತ್ತಿದೆ. ತನಿಖೆ ಚುರುಕುಗೊಳ್ಳುತ್ತಿದ್ದಂತೆ, ಪ್ರಕರಣದಲ್ಲಿ ಹೊಸ ಹೆಸರುಗಳು ಕೇಳಿಬರುತ್ತಿವೆ.

Written by - Ranjitha R K | Last Updated : Oct 21, 2021, 02:36 PM IST
  • ದಿನೇ ದಿನೇ ಹೊಸ ಹೊಸ ರೂಪ ಪಡೆದುಕೊಳ್ಳುತ್ತಿದೆ ಆರ್ಯನ್ ಖಾನ್ ಡ್ರಗ್ ಪ್ರಕರಣ
  • ಪ್ರಕರಣದಲ್ಲಿ ಕೇಳಿಬರುತ್ತಿವೆ ಹೊಸ ಹೆಸರುಗಳು
  • ಶಾರುಖ್ ನಿವಾಸ ಮನ್ನತ್ ತಲುಪಿದ ಎನ್ ಸಿಬಿ
NCB at Shahrukh Khan’s Residence: ಶಾರುಖ್ ಖಾನ್ ನಿವಾಸ ಮನ್ನತ್  ಮೇಲೂ NCB ದಾಳಿ title=
NCB at Shahrukh Khan’s Residence (photi twitter)

ನವದೆಹಲಿ : ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದ (Aryan khan drugs case) ಹಿನ್ನೆಲೆಯಲ್ಲಿ, ಎನ್ ಸಿಬಿ ತಂಡವು, ಗುರುವಾರ ಮಧ್ಯಾಹ್ನ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ (Shah rukh khan) ನಿವಾಸ  ಮನ್ನತ್ ತಲುಪಿದೆ. ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್, ಪ್ರಸ್ತುತ ಡ್ರಗ್ಸ್ ಪ್ರಕರಣದಲ್ಲಿ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ ಇದ್ದಾನೆ. 

ಆರ್ಯನ್ ಖಾನ್ ಡ್ರಗ್ (Aryan khan drugs case) ಪ್ರಕರಣ ದಿನೇ ದಿನೇ ಹೊಸ ಹೊಸ ರೂಪ ಪಡೆದುಕೊಳ್ಳುತ್ತಿದೆ. ತನಿಖೆ ಚುರುಕುಗೊಳ್ಳುತ್ತಿದ್ದಂತೆ, ಪ್ರಕರಣದಲ್ಲಿ ಹೊಸ ಹೆಸರುಗಳು ಕೇಳಿಬರುತ್ತಿವೆ. ಆರ್ಯನ್ ಖಾನ್ (aryan khan) ಜಾಮೀನು ಅರ್ಜಿ ಕೂಡಾ ನ್ಯಾಯಾಲಯದಲ್ಲಿ ತಿರಸ್ಕೃತವಾಗಿದೆ. ಈ ಮಧ್ಯೆ, ಗುರುವಾರ ಮಧ್ಯಾಹ್ನದ ಹೊತ್ತಿಗೆ ಎನ್‌ಸಿಬಿ (NCB) ತಂಡವು ಶಾರುಖ್ ನಿವಾಸದ ಮೇಲೆ ದಾಳಿ ಮಾಡಿದೆ. 

 

ಇದನ್ನೂ ಓದಿ : Aryan Khan Drug Case: ಬಾಲಿವುಡ್ ನಟಿ ಅನನ್ಯ ಪಾಂಡೆ ಮನೆ ಮೇಲೆ NCB ದಾಳಿ

ಇನ್ನು, ಆರ್ಯನ್ ಖಾನ್ ವಾಟ್ಸ್ ಆಪ್ ಚಾಟ್ (Whatsapp chat) ನಲ್ಲಿ ಕೆಲವು ನಟಿಯ ಹೆಸರು ಪ್ರಸ್ತಾಪವಾಗಿತ್ತು ಎನ್ನಲಾಗಿದೆ. ಇಬ್ಬರು ನಟಿಯರೊಂದಿಗೆ ಆರ್ಯನ್ ಡ್ರಗ್ಸ್ ಬಗ್ಗೆ ಮಾತುಕತೆ ನಡೆಸಿದ್ದಾಗಿಯೂ ಹೇಳಲಾಗಿದೆ. ಈ ಮಧ್ಯೆ, ಚಂಕಿ ಪಾಂಡೆ ಅವರ ಪುತ್ರಿ ಅನನ್ಯಾ ಪಾಂಡೆ (Ananya panday) ಮನೆ ಮೇಲೆ ಕೂಡಾ ಎನ್ ಸಿಬಿ ದಾಳಿ ನಡೆಸಿದ್ದು ಕಾರ್ಯಾಚರಣೆ ನಡೆಸುತ್ತಿದೆ. 

 

ಇದನ್ನೂ ಓದಿ : money laundering case : 200 ಕೋಟಿ ಅಕ್ರಮ ವರ್ಗಾವಣೆ ಪ್ರಕರಣದ ಆರೋಪಿ ಈ ನಟಿಯರಿಗೆ ಉಡುಗೊರೆ ನೀಡಿದ್ದಾನಂತೆ ಐಶಾರಾಮಿ ಕಾರು

ಈ ಮಧ್ಯೆ, ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಥರ್ ರಸ್ತೆ ಜೈಲಿನಲ್ಲಿರುವ ಪುತ್ರ ಆರ್ಯನ್ ಖಾನ್ ಅವರನ್ನು ಬಾಲಿವುಡ್ ನಟ ಶಾರುಖ್ ಖಾನ್ (Shahrukh Khan) ಗುರುವಾರ ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News