ನವದೆಹಲಿ: ರಾಖಿ ಸಾವಂತ್ ಬಾಲಿವುಡ್ ನಲ್ಲಿ ಆಗಾಗ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಲ್ಲಿರುತ್ತಾರೆ.ಆದ್ರೆ ಈ ಬಾರಿ ಅವರು ಸುದ್ದಿಯಲ್ಲಿರುವುದು ಭಾರತದಲ್ಲಿ ಮೀಟೂ ಮೂಲಕ ಬಿರುಗಾಳಿ ಎಬ್ಬಿಸಿರುವ ನಟಿ ತನುಶ್ರೀ ದತ್ತಾ ಅವರ ವಿಚಾರವಾಗಿ ಹೇಳಿರುವ ಹೇಳಿಕೆಯಿಂದಾಗಿ ಮತ್ತೆ ವಿವಾದದಲ್ಲಿದ್ದಾರೆ.
ಅಷ್ಟಕ್ಕೂ ರಾಖಿ ಸಾವಂತ್ ನೀಡಿರುವ ವಿವಾದಾತ್ಮಕ ಹೇಳಿಕೆ ಏನಂತಿರಾ? ತನುಶ್ರೀ ದತ್ತಾ ಲೆಸ್ಬಿಯನ್ ಅವರು ತಮ್ಮ ಮೇಲೆ ಅತ್ಯಾಚಾರ ನಡೆಸಿದ್ದರು ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.12 ವರ್ಷಗಳ ಹಿಂದೆ ತನುಶ್ರೀ ಮನೆಗೆ ಹೋದಾಗ ತಮ್ಮ ಮೇಲೆ ಅತ್ಯಾಚಾರ ಮಾಡಿದ್ದರು ಇದಕ್ಕೆ ತಮ್ಮ ಬಳಿ ಸಾಕಷ್ಟು ಸಾಕ್ಷಿಗಳಿವೆ ಎಂದು ರಾಖಿ ತಿಳಿಸಿದ್ದಾರೆ.
ನಟಿ ತನುಶ್ರೀ ದತ್ತಾ ನಾನಾ ಪಟೇಕರ್ ಅವರ ಮೇಲೆ ಮೀಟೂ ಅಭಿಯಾನದ ಭಾಗವಾಗಿ ಲೈಂಗಿಕ ಕಿರುಕುಳದ ಆರೋಪ ಮಾಡುವುದರ ಮೂಲಕ ದೇಶದ ಎಲ್ಲ ವಲಯದಲ್ಲಿ ಮೀಟೂ ಬಿರುಗಾಳಿ ಏಳುವುದಕ್ಕೆ ಕಾರಣಕರ್ತರಾಗಿದ್ದರು. ನಟಿ ನಾನಾ ಪಟೇಕರ್ ಆರೋಪ ಮಾಡಿದ ನಂತರ ಪತ್ರಿಕೋದ್ಯಮ, ಸಿನಿಮಾ, ರಾಜಕೀಯ ಹೀಗೆ ಎಲ್ಲ ವಲಯಗಳಲ್ಲಿ ಮಹಿಳೆಯರು ತಮ್ಮ ಮೀಟೂ ಕಹಿ ನೆನಪುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು.