Siddaramiah Biopic: ತೆರೆ ಮೇಲೆ ಸಿದ್ದರಾಮಯ್ಯ ಬಯೋಪಿಕ್: ಸಿದ್ದು ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ತಮಿಳಿನ ಈ ನಟ!

Siddaramiah Biopic: ಗಂಗಾವತಿ ತಾಲೂಕಿನ ಹೆಬ್ಬಾಳ ಗ್ರಾಮದ ಹಯಾತ್ ಪೀರ್ ಸಾಬ್ ಅವರ MS ಕ್ರೀಯೆಷನ್ ಬ್ಯಾನರ್ ಅಡಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಈಗಾಗಲೇ  ಸಿದ್ದರಾಮಯ್ಯ ಅವರ ಜೊತೆ ನಿರ್ಮಾಪಕರು ಮಾತುಕತೆ ನಡೆಸಿದ್ದು, ಸಿದ್ದರಾಮಯ್ಯ ಅವರಿಂದ ಬಯೋಪಿಕ್ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಾಗಿದೆ.

Written by - Bhavishya Shetty | Last Updated : Nov 29, 2022, 12:36 PM IST
    • ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಯೋಪಿಕ್ ತೆರೆಗೆ ಬರಲು ಸಜ್ಜು
    • ಸಿದ್ದು ಪಾತ್ರಕ್ಕೆ ತಮಿಳು ನಟ ವಿಜಯ ಸೇತುಪತಿ ಬಣ್ಣ ಹಚ್ಚಲಿದ್ದಾರೆ!
    • ಸಿದ್ದರಾಮಯ್ಯ ಅವರಿಂದ ಬಯೋಪಿಕ್ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಾಗಿದೆ
Siddaramiah Biopic: ತೆರೆ ಮೇಲೆ ಸಿದ್ದರಾಮಯ್ಯ ಬಯೋಪಿಕ್: ಸಿದ್ದು ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ತಮಿಳಿನ ಈ ನಟ!  title=
Siddaramaiah Biopic

Siddaramiah Biopic: ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಯೋಪಿಕ್ ತೆರೆಗೆ ಬರಲು ಸಜ್ಜಾಗಿದೆ. ಈ ಚಿತ್ರದಲ್ಲಿ ಸಿದ್ದು ಪಾತ್ರಕ್ಕೆ ತಮಿಳು ನಟ ವಿಜಯ ಸೇತುಪತಿ ಬಣ್ಣ ಹಚ್ಚಲಿದ್ದಾರೆ ಎಂಬ ಮಾತು ಕೇಳಿಬಂದಿದೆ.

ಇದನ್ನೂ ಓದಿ: ʼಬಾಬಾʼ ಸಿನಿಮಾ ರೀ ರಿಲೀಸ್‌ : ತಮ್ಮದೆ ಸಿನಿಮಾಗೆ ಡಬ್ಬಿಂಗ್‌ ಮಾಡಿದ ತಲೈವಾ ರಜನಿ...!

ಗಂಗಾವತಿ ತಾಲೂಕಿನ ಹೆಬ್ಬಾಳ ಗ್ರಾಮದ ಹಯಾತ್ ಪೀರ್ ಸಾಬ್ ಅವರ MS ಕ್ರೀಯೆಷನ್ ಬ್ಯಾನರ್ ಅಡಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಈಗಾಗಲೇ  ಸಿದ್ದರಾಮಯ್ಯ ಅವರ ಜೊತೆ ನಿರ್ಮಾಪಕರು ಮಾತುಕತೆ ನಡೆಸಿದ್ದು, ಸಿದ್ದರಾಮಯ್ಯ ಅವರಿಂದ ಬಯೋಪಿಕ್ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಾಗಿದೆ.

ಮಾಜಿ ಸಚಿವ ಶಿವರಾಜ್ ತಂಗಡಗಿ, ಹಾಗೂ ಜಮೀರ್ ಆಹ್ಮಮದ್ ನೇತೃತ್ವದಲ್ಲಿ ನಡೆದ‌ ಮೊದಲ ಸುತ್ತಿನ ಮಾತುಕತೆ ಸಕ್ಸಸ್ ಆಗಿದೆ. ಈ ಚಿತ್ರ ಹೈ ಬಜೆಟ್ ನಲ್ಲಿ ಚಿತ್ರಿಕರಣವಾಗಲಿದೆ. ಸುಮಾರು 50 ಕೋಟಿಗೂ ಹೆಚ್ವು ಹಣ ಹೂಡಿಕೆ ಮಾಡಲು ಚಿತ್ರ ನಿರ್ಮಾಪಕರು ತೀರ್ಮಾನಿಸಿದ್ದಾರೆ.

ಇದನ್ನೂ ಓದಿ: ಶ್ರೀ ಬಂಡಿ ಮಂಕಾಳಮ್ಮ ದೇವಸ್ಥಾನದಲ್ಲಿ ನಡೀತು 'ಕಾಳಿ' ಚಿತ್ರದ ಮುಹೂರ್ತ

ಇನ್ನು ಸಿದ್ದರಾಮಯ್ಯ ಪಾತ್ರಕ್ಕೆ ತಮಿಳು ನಟ ವಿಜಯ್ ಸೇತುಪತಿ ನಟಿಸಬೇಕೆಂದು ಕಾಲ್ ಶೀಟ್ ಚಿತ್ರತಂಡ ಕೇಳಿದೆ. ಸಿನಿಮಾವನ್ನು ಸತ್ಯರತ್ನಂ ನಿರ್ದೇಶನ ಮಾಡಲಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News