Raghava Lawrence tractor gifts : ಭಾರತೀಯ ಸಿನಿರಂಗದಲ್ಲಿ ಕೆಲವೇ ಕೆಲವು ನಟರು ತಮ್ಮ ಜೀವನನ್ನು ಜನ ಸೇವೆಗೆ ಮೀಸಲಿಟ್ಟಿದ್ದಾರೆ. ಈ ಪೈಕಿ ತಮಿಳು ನಟ ರಾಘವ ಲಾರೆನ್ಸ್ ಕೂಡ ಒಬ್ಬರು. ಲಾರೆನ್ಸ್ ಸಿನಿಮಾ ಅಷ್ಟೆ ಅಲ್ಲ, ತಮ್ಮ ಸಮಾಜ ಮುಖಿ ಕೆಲಸಗಳಿಂದ ಜನರ ಹೃದಯ ಗೆದ್ದ ನಟ.
ಹೌದು.. ನೃತ್ಯ ಸಂಯೋಜಕ, ನಟ, ನಿರ್ದೇಶಕ ರಾಘವ್ ಲಾರೆನ್ಸ್, ಎಲ್ಲದರಲ್ಲೂ ತಮ್ಮದೇ ಪ್ರಖ್ಯಾತಿ ಪಡೆದಿರುವ ಪರಿಪೂರ್ಣ ವ್ಯಕ್ತಿ. ಇತರರಿಗೆ ಸಹಾಯ ಮಾಡುವಲ್ಲಿ ಸದಾ ಮುಂದು. ಇದೀಗ ರಾಘವ್ ತಮ್ಮ ಚಾರಿಟಿ ಮೂಲಕ ಮಾಡಿರುವ ಕಾರ್ಯ, ಜನ ಮನ ಗೆದ್ದಿದೆ.
ಇದನ್ನೂ ಓದಿ:ಮೋಡಿಮಾಡುವ ಫೋಟೋಸ್ ನಲ್ಲಿ ಅದಿತಿ, ವಿಭಿನ್ನ ರೀತಿಯಲ್ಲಿ ಸೌಂದರ್ಯದ ಸೆರೆ
ಕಾರ್ಮಿಕರ ದಿನಾಚರಣೆಯ ಪ್ರಯುಕ್ತ, ಲಾರೆನ್ಸ್ ರೈತರಿಗೆ ಉಚಿತವಾಗಿ 10 ಟ್ರ್ಯಾಕ್ಟರ್ಗಳನ್ನು ನೀಡಿದ್ದಾರೆ. ನಟನ ಈ ನಿಸ್ವಾರ್ಥ ಸೇವೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ಸೇವೆಯೇ ದೇವರು' ಎಂಬ ಘೋಷವಾಕ್ಯವನ್ನು ಇಟ್ಟುಕೊಂಡು ತಮ್ಮ ಟ್ರಸ್ಟ್ ಮೂಲಕ ರೈತರಿಗೆ ಉಚಿತ ಟ್ರ್ಯಾಕ್ಟರ್ ನೀಡಿದ್ದಾರೆ.
Hi Friends and fans, On this Special “Labour’s Day”, I’m very Happy to begin #Maatram journey under the initiative “Service is god” through Our charitable trust. As a first start 10 Tractors will be provided with my own money for Farmers - The backbone of our country. Everyone do… pic.twitter.com/AjuuNOhLSA
— Raghava Lawrence (@offl_Lawrence) May 1, 2024
ಈ ಕುರಿತು ತಮ್ಮ ಟ್ಟಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ಈ ವಿಶೇಷ ಕಾರ್ಮಿಕ ದಿನದಂದು, ನಮ್ಮ ಚಾರಿಟಬಲ್ ಟ್ರಸ್ಟ್ ಮೂಲಕ ಸೇವೆಯೇ ದೇವರು ಎಂಬ ಘೋಷ ವಾಕ್ಯದೊಂದಿಗೆ ಈ ವಿಶೇಷ ಹೊಸ ಪ್ರಯಾಣವನ್ನು ಪ್ರಾರಂಭಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ. ಆರಂಭದಲ್ಲಿ ನಮ್ಮ ದೇಶದ ಬೆನ್ನೆಲುಬಾಗಿರುವ ರೈತರಿಗೆ ನನ್ನ ಸ್ವಂತ ಹಣದಲ್ಲಿ 10 ಟ್ರ್ಯಾಕ್ಟರ್ ನೀಡುತ್ತಿದ್ದೇನೆ. ಅಗತ್ಯವಿರುವ ಜನರಿಗೆ ಸೇವೆ ಸಲ್ಲಿಸಲು ಪ್ರತಿಯೊಬ್ಬರೂ ಈ ನಿಸ್ವಾರ್ಥ ಪ್ರಯಾಣವನ್ನು ಬೆಂಬಲಿಸಬೇಕು. ಮಾತಿಗಿಂತ ಕೆಲಸ ಜೋರಾಗಿ ಮಾತನಾಡುತ್ತವೆ. ನನ್ನ ಪ್ರಯಾಣದಲ್ಲಿ ನನಗೆ ನಿಮ್ಮೆಲ್ಲರ ಬೆಂಬಲ ಮತ್ತು ಆಶೀರ್ವಾದ ಬಹಳ ಮುಖ್ಯ. ಇಂದಿನಿಂದ ಸೇವೆ ಆರಂಭವಾಗಿದೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ರತ್ನಂ ವಿಮರ್ಶೆ : ಸಿನಿಮಾ ಹೇಳಲು ಹೊರಟಿರುವ ಕಥೆ ಪುರಾತನವಾದದ್ದು
ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ನಟ್ಟಿಗರು ರಾಘವ ಲಾರೆನ್ಸ್ಗೆ ಮೆಚ್ಚುಗೆಯ ಸುರಿಮಳೆ ಹರಿಸುತ್ತಿದ್ದಾರೆ. ಇದೇ ವೇಳೆ ಕಳೆದ ಕೆಲ ತಿಂಗಳ ಹಿಂದೆ ಲಾರೆನ್ಸ್ ದ್ವಿಚಕ್ರ ವಾಹನಗಳನ್ನು ಖರೀದಿಸಿ ತ್ರಿಚಕ್ರ ವಾಹನಗಳನ್ನಾಗಿ ಪರಿವರ್ತಿಸಿ ಕೆಲ ಅಂಗವಿಕಲರಿಗೆ ನೀಡಿದ್ದು, ಜನ ಮೆಚ್ಚುಗೆಗೆ ಪಾತ್ರವಾಗಿತ್ತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.