Tamannaah Bhatia : ತಮನ್ನಾಗೆ ಕೂಡಿ ಬಂತು ಕಂಕಣ ಭಾಗ್ಯ? ಇವರೇ ಆ ಲಕ್ಕಿ ಮ್ಯಾನ್‌.!

Tamannaah Bhatia : ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಸಹ ಹಸೆಮಣೆ ಏರಲು ಸಜ್ಜಾಗುತ್ತಿರುವ ವಿಚಾರ ಹರಿದಾಡುತ್ತಿದೆ. ಮುಂಬೈ ಮೂಲದ ಉದ್ಯಮಿಯನ್ನು ತಮನ್ನಾ ಭಾಟಿಯಾ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ವರದಿಗಳ ಪ್ರಕಾರ ತಮನ್ನಾ ಭಾಟಿಯಾ ಈ ಉದ್ಯಮಿಯನ್ನು ಮದುವೆಯಾಗಲು ಸಿದ್ಧರಾಗಿದ್ದಾರಂತೆ. 

Written by - Chetana Devarmani | Last Updated : Nov 16, 2022, 04:02 PM IST
  • ತೆಲುಗು ನಟಿ ತಮನ್ನಾ ಭಾಟಿಯಾ
  • ತಮನ್ನಾಗೆ ಕೂಡಿ ಬಂತು ಕಂಕಣ ಭಾಗ್ಯ!
  • ಮಿಲ್ಕಿ ಬ್ಯೂಟಿ ವರಿಸಲಿದ್ದಾರೆ ಈ ಉದ್ಯಮಿ?
Tamannaah Bhatia : ತಮನ್ನಾಗೆ ಕೂಡಿ ಬಂತು ಕಂಕಣ ಭಾಗ್ಯ? ಇವರೇ ಆ ಲಕ್ಕಿ ಮ್ಯಾನ್‌.! title=
ತಮನ್ನಾ ಭಾಟಿಯಾ

Tamannaah Bhatia : ವರದಿಗಳ ಪ್ರಕಾರ ತಮನ್ನಾ ಭಾಟಿಯಾ ಶೀಘ್ರದಲ್ಲೇ ಮುಂಬೈನ ಯುವ ಉದ್ಯಮಿಯನ್ನು ಮದುವೆಯಾಗಲು ಸಿದ್ಧರಾಗಿದ್ದಾರಂತೆ. ಸದ್ಯ ತಮನ್ನಾ ಯಾವುದೇ ಹೊಸ ಪ್ರಾಜೆಕ್ಟ್‌ಗಳಿಗೆ ಸಹಿ ಹಾಕಿಲ್ಲ. ಏಕೆಂದರೆ ಅವರು ಶೀಘ್ರದಲ್ಲೇ ಸಪ್ತಪದಿ ತುಳಿಯಲಿದ್ದು, ತಮ್ಮ ಮದುವೆಯ ಸಿದ್ಧತೆಗಳಲ್ಲಿ ನಿರತರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಮದುವೆ ಹಿನ್ನೆಲೆ ಸ್ವಲ್ಪ ಸಮಯದವರೆಗೆ ವಿರಾಮ ತೆಗೆದುಕೊಳ್ಳುತ್ತಿದ್ದಾರಂತೆ. ಯುವ ಉದ್ಯಮಿಯ ಮ್ಯಾರೇಜ್‌ ಪ್ರಪೋಸಲ್‌ನ್ನು ತಮನ್ನಾ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ನಟಿ ಈ ಸುದ್ದಿಯನ್ನು ಖಚಿತಪಡಿಸಿಲ್ಲ. ಆದರೆ ಅವರು ಈ ವದಂತಿಗಳನ್ನು ನಿರಾಕರಿಸಿಯೂ ಇಲ್ಲ. ಸದ್ಯದಲ್ಲೇ ಅಧಿಕೃತ ಘೋಷಣೆಯಾಗುವ ನಿರೀಕ್ಷೆ ಇದೆಯಂತೆ. ಯುವ ಉದ್ಯಮಿ ಸ್ವಲ್ಪ ಸಮಯದಿಂದ ತಮನ್ನಾ ಅವರನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆಂದು ತೋರುತ್ತದೆ ಮತ್ತು ತಮನ್ನಾ ಭಾಟಿಯಾ ಅಂತಿಮವಾಗಿ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ :  ರಶ್ಮಿಕಾಗೆ ಐ ಆಮ್ ಸಾರಿ.. ಎಂದ ಕ್ರಿಕೆಟರ್ ಡೇವಿಡ್ ವಾರ್ನರ್!

ತಮನ್ನಾ ತಾನು ಯಾವಾಗ ಮತ್ತು ಯಾರನ್ನು ಮದುವೆಯಾಗಬೇಕೆಂದು ತನ್ನ ಹೆತ್ತವರು ನಿರ್ಧರಿಸುತ್ತಾರೆ ಎಂದು ಯಾವಾಗಲೂ ಹೇಳುತ್ತಿದ್ದರು. ತಮನ್ನಾ ಭಾಟಿಯಾ ಮುಂಬೈ ಮೂಲದವರು ಆದರೆ ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಹಲವಾರು ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ. 

ಇದೀಗ ತಮನ್ನಾ ಅವರ ಮದುವೆ ಬಗೆಗಿನ ವದಂತಿಗಳು ವೈರಲ್ ಆಗುತ್ತಿವೆ. ಈ ರೀತಿ ತಮನ್ನಾ ಮದುವೆ ಬಗ್ಗೆ ವದಂತಿಗಳು ಹಬ್ಬುತ್ತಿರುವುದು ಇದೇ ಮೊದಲಲ್ಲ. ತಮನ್ನಾ ಭಾಟಿಯಾ ಅವರು 2020 ರಲ್ಲಿ ಪಾಕಿಸ್ತಾನಿ ಕ್ರಿಕೆಟಿಗ ಅಬ್ದುಲ್ ರಜಾಕ್ ಅವರೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ವದಂತಿಗಳು ಹಬ್ಬಿದ್ದವು. ಹೀಗೆ ಅನೇಕ ಬಾರಿ ತಮನ್ನಾ ವಿವಾಹ ವಿಚಾರ ಸುದ್ದಿಯಾಗಿದ್ದಿದೆ. ಆದರೆ ಈ ಬಾರಿ ತಮನ್ನಾ ಭಾಟಿಯಾ ಮದುವೆ ವದಂತಿಗಳು ಅಂತಿಮವಾಗಿ ನಿಜವಾಗುತ್ತವೆಯೇ ಎಂದು ಕಾದು ನೋಡಬೇಕಾಗಿದೆ.

ಇದನ್ನೂ ಓದಿ : ನೀನು ನನ್ನ ಸ್ವೀಟೆಸ್ಟ್‌ ಜೀವದ ಗೆಳೆಯ : ರಮ್ಯಾ-ಸುದೀಪ್‌ ವಿಡಿಯೋ ವೈರಲ್‌..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News