ಶಿವಣ್ಣ, ರಜನಿಕಾಂತ್‌ ʼಜೈಲರ್‌ʼ ಸಿನಿಮಾದಲ್ಲಿ ಮಿಲ್ಕಿ ಬ್ಯೂಟಿ ತಮ್ಮನ್ನಾ..!

ಬಹುನಿರೀಕ್ಷಿತ ಜೈಲರ್ ಸಿನಿಮಾ ತಂಡದಿಂದ ಹೊಸ ಅಪಡೇಟ್‌ ಹೊರ ಬಿದ್ದಿದೆ. ಸೂಪರ್‌ ಸ್ಟಾರ್‌ ರಜನಿಕಾಂತ್‌ ಅಭಿನಯದ ಈ ಚಿತ್ರದಲ್ಲಿ ಕರ್ನಾಟಕ ಚಕ್ರವರ್ತಿ ಡಾ. ಶಿವರಾಜಕುಮಾರ್‌ ನಟಿಸುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಮೊನ್ನೆ ಕಾಲಿವುಡ್‌ ನಟ ಮೋಹನ್‌ ಲಾಲ್‌ ಈ ಚಿತ್ರತಂಡವನ್ನು ಸೇರಿಕೊಂಡಿದ್ದರು. ಇದೀಗ ಮಿಲ್ಕಿ ಬ್ಯೂಟಿ ತಮನ್ನಾ ಜೈಲರ್‌ನಲ್ಲಿ ನಟಿಸುತ್ತಿರುವುದಾಗಿ ತಿಳಿಸಿದ್ದಾರೆ.

Written by - Krishna N K | Last Updated : Jan 19, 2023, 07:56 PM IST
  • ಬಹುನಿರೀಕ್ಷಿತ ಜೈಲರ್ ಸಿನಿಮಾ ತಂಡದಿಂದ ಹೊಸ ಅಪಡೇಟ್‌ ಹೊರ ಬಿದ್ದಿದೆ.
  • ಜೈಲರ್‌ನಲ್ಲಿ ಡಾ. ಶಿವರಾಜಕುಮಾರ್‌ ನಟಿಸುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ.
  • ಇದೀಗ ಮಿಲ್ಕಿ ಬ್ಯೂಟಿ ತಮನ್ನಾ ಜೈಲರ್‌ನಲ್ಲಿ ನಟಿಸುತ್ತಿರುವುದಾಗಿ ತಿಳಿಸಿದ್ದಾರೆ.
ಶಿವಣ್ಣ, ರಜನಿಕಾಂತ್‌ ʼಜೈಲರ್‌ʼ ಸಿನಿಮಾದಲ್ಲಿ ಮಿಲ್ಕಿ ಬ್ಯೂಟಿ ತಮ್ಮನ್ನಾ..! title=

Tamanna bhatia in jailer movie : ಬಹುನಿರೀಕ್ಷಿತ ಜೈಲರ್ ಸಿನಿಮಾ ತಂಡದಿಂದ ಹೊಸ ಅಪಡೇಟ್‌ ಹೊರ ಬಿದ್ದಿದೆ. ಸೂಪರ್‌ ಸ್ಟಾರ್‌ ರಜನಿಕಾಂತ್‌ ಅಭಿನಯದ ಈ ಚಿತ್ರದಲ್ಲಿ ಕರ್ನಾಟಕ ಚಕ್ರವರ್ತಿ ಡಾ. ಶಿವರಾಜಕುಮಾರ್‌ ನಟಿಸುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಮೊನ್ನೆ ಕಾಲಿವುಡ್‌ ನಟ ಮೋಹನ್‌ ಲಾಲ್‌ ಈ ಚಿತ್ರತಂಡವನ್ನು ಸೇರಿಕೊಂಡಿದ್ದರು. ಇದೀಗ ಮಿಲ್ಕಿ ಬ್ಯೂಟಿ ತಮನ್ನಾ ಜೈಲರ್‌ನಲ್ಲಿ ನಟಿಸುತ್ತಿರುವುದಾಗಿ ತಿಳಿಸಿದ್ದಾರೆ.

ಹೌದು.. ಜೈಲರ್‌ ಸಿನಿಮಾದ ಪಾತ್ರವರ್ಗ ದಿನದಿಂದ ದಿನಕ್ಕೆ ದೊಡ್ಡದಾಗುತ್ತಲೇ ಸಾಗುತ್ತಿದೆ. ನೆಲ್ಸನ್ ಈ ಸಿನಿಮಾ ಸಖತ್‌ ಹೈಪ್‌ ಕ್ರಿಯೇಟ್‌ ಮಾಡುತ್ತಿದೆ. ರಜಿನಿಕಾಂತ್ ಅಭಿನಯದ ಜೈಲರ್ ಸಿನಿಮಾದಲ್ಲಿ ಈಗಾಗಲೇ ಡಾ. ಶಿವರಾಜ್‌ಕುಮಾರ್, ರಮ್ಯಾ ಕೃಷ್ಣನ್, ಮೋಹನ್‌ ಲಾಲ್‌ ನಡಿಸುತ್ತಿರುವ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿತ್ತು. ಇದೀಗ ಬಹುಭಾಷಾ ನಟಿ ತಮನ್ನಾ ಕೂಡಾ ಈ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ.

ಇದನ್ನೂ ಓದಿ: ʼದೀಪಿಕಾ ಕೇಸರಿ ಬಿಕಿನಿʼ ವಿವಾದ : ʼತ್ರಿವರ್ಣ ಧ್ವಜದಲ್ಲೂ ಕೇಸರಿʼ ಇದೆ ಎಂದ ಚೇತನ್‌..!

ಈಗಾಗಲೇ ಜೈಲರ್ ಸಿನಿಮಾ ಕನ್ನಡ ಮಲಯಾಳಂ, ತಮಿಳು ಇಂಡಸ್ಟ್ರಿಯ ಮೂವರು ಸ್ಟಾರ್‌ ನಟರನ್ನು ಒಳಗೊಂಡಿದೆ. ಇದೇ ಸಾಲಿನಲ್ಲಿ ಬಹು ಬೇಡಿಕೆಯ ನಟಿಯಾಗಿ ಮಿಂಚುತ್ತಿರುವ ತಮನ್ನಾ ಕೂಡ ಸೇರಿಕೊಂಡಿದ್ದಾರೆ. ಜೈಲರ್‌ ಸಿನಿಮಾವನ್ನು ಸನ್ ಪಿಕ್ಚರ್ಸ್ ಬಿಗ್‌ ಬಜೆಟ್‌ನಲ್ಲಿ ನಿರ್ಮಾಣ ಮಾಡುತ್ತಿದೆ. ಚಿತ್ರಕ್ಕೆ ಅನಿರುದ್ಧ್ ಸಂಗೀತ ಸಂಯೋಜನೆ ಇದೆ. ಇತ್ತೀಚೆಗೆ ಜೈಲರ್‌ ಟೀಸರ್ ಬಿಡುಗಡೆಯಾಗಿತ್ತು. ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ರಜಿನಿಕಾಂತ್ ನಟಿಸುತ್ತಿರುವುದಾಗಿ ಪರಿಚಯಿಸಲಾಗಿತ್ತು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News