Video: ಮಗನಿಗೆ ಜೀವ ಬೆದರಿಕೆ ಇತ್ತು ಎಂದ Sushant Singh Rajput ತಂದೆ

ಸುಶಾಂತ್ ಅವರ ತಂದೆ ಕೆ.ಕೆ.ಸಿಂಗ್ ಅವರು ವೀಡಿಯೊ ಸಂದೇಶವೊಂದನ್ನು ಬಿಡುಗಡೆ ಮಾಡಿದ್ದಾರೆ, ತಮ್ಮ ಸಂದೇಶದಲ್ಲಿ ಅವರು, 'ಫೆಬ್ರವರಿ 25 ರಂದು ನನ್ನ ಮಗನ ಪ್ರಾಣಕ್ಕೆ ಅಪಾಯವಿದೆ ಎಂದು ನಾನು ಬಾಂದ್ರಾ ಪೊಲೀಸರಿಗೆ ಎಚ್ಚರಿಕೆ ನೀಡಿದ್ದೇನೆ, ಜೂನ್ 14 ರಂದು ನನ್ನ ಮಗ ತೀರಿಕೊಂಡಾಗ, ಫೆಬ್ರವರಿ 25 ರಂದು ಹೆಸರಿಸಲಾದ ಜನರ ವಿರುದ್ಧ ಕ್ರಮ ಕೈಗೊಳ್ಳಲು ನಾನು ಕೇಳಿದ್ದೇನೆ. ಆದರೆ, 40 ದಿನಗಳ ಬಳಿಕವೂ ಕೂಡ ಈ ಪ್ರಕರಣದಲ್ಲಿ ಮುಂಬೈ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ  ಎಂದು ಅವರು ಆರೋಪಿಸಿದ್ದಾರೆ.

Last Updated : Aug 3, 2020, 10:06 PM IST
Video: ಮಗನಿಗೆ ಜೀವ ಬೆದರಿಕೆ ಇತ್ತು ಎಂದ Sushant Singh Rajput ತಂದೆ title=

ನವದೆಹಲಿ: ಸುಶಾಂತ್ ಸಿಂಗ್ ರಾಜ್ಪುತ್ (Sushant Singh Rajput) ಆತ್ಮಹತ್ಯೆ ಪ್ರಕರಣದಲ್ಲಿ ದಿನ ಕಳೆದಂತೆ ಹೊಸ ಹೊಸ ಮಾಹಿತಿಗಳು ಪ್ರಕಟವಾಗುತ್ತಲೇ ಇವೆ. ಇದೀಗ ಈ ಪ್ರಕರಣದಲ್ಲಿ ಇದೇ ಮೊದಲ ಬಾರಿಗೆ ವಿಡಿಯೋ ಸಂದೇಶ ಜಾರಿಗೊಳಿಸಿರುವ ಸುಶಾಂತ್ ಸಿಂಗ್ ರಾಜ್ಪುತ್ ಅವರ ತಂದೆ ಮುಂಬೈ ಪೊಲೀಸರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

ಸುಶಾಂತ್ ಅವರ ತಂದೆ ಕೆ.ಕೆ.ಸಿಂಗ್ ಅವರು ವೀಡಿಯೊ ಸಂದೇಶವೊಂದನ್ನು ಬಿಡುಗಡೆ ಮಾಡಿದ್ದಾರೆ, ತಮ್ಮ ಸಂದೇಶದಲ್ಲಿ ಅವರು, 'ಫೆಬ್ರವರಿ 25 ರಂದು ನನ್ನ ಮಗನ ಪ್ರಾಣಕ್ಕೆ ಅಪಾಯವಿದೆ ಎಂದು ನಾನು ಬಾಂದ್ರಾ ಪೊಲೀಸರಿಗೆ ಎಚ್ಚರಿಕೆ ನೀಡಿದ್ದೇನೆ, ಜೂನ್ 14 ರಂದು ನನ್ನ ಮಗ ತೀರಿಕೊಂಡಾಗ, ಫೆಬ್ರವರಿ 25 ರಂದು ಹೆಸರಿಸಲಾದ ಜನರ ವಿರುದ್ಧ ಕ್ರಮ ಕೈಗೊಳ್ಳಲು ನಾನು ಕೇಳಿದ್ದೇನೆ. ಆದರೆ, 40 ದಿನಗಳ ಬಳಿಕವೂ ಕೂಡ ಈ ಪ್ರಕರಣದಲ್ಲಿ ಮುಂಬೈ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ  ಎಂದು ಅವರು ಆರೋಪಿಸಿದ್ದಾರೆ.

"ಇದಾದ ಬಳಿಕ ನಾನು ನಂತರ ಪಾಟ್ನಾಕ್ಕೆ ಮರಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದೆ. ಪಾಟ್ನಾ ಪೊಲೀಸರು ತಕ್ಷಣ ಕಾರ್ಯಪ್ರವೃತ್ತಗಾಗಿದ್ದಾರೆ ಆದರೆ, ಅಪರಾಧಿಗಳು ಇದೀಗ ತಪ್ಪಿಸಿಕೊಳ್ಳುತ್ತಿದ್ದಾರೆ. ಪಟ್ನಾ ಪೊಲೀಸರ ನೆರವು ಮಾಡಬೇಕಾಗಿರುವುದು ಇದೀಗ ನಮ್ಮ ಕರ್ತವ್ಯವಾಗಿದೆ" ಎಂದು ಅವರು ಹೇಳಿದ್ದಾರೆ.

ಅತ್ತ ಈ ಬಗ್ಗೆ ತನಿಖೆ ನಡೆಸಲು ಬಿಹಾರ ಸರ್ಕಾರ ಮತ್ತು ಮಹಾರಾಷ್ಟ್ರ ಸರ್ಕಾರಗಳ ನಡುವೆ ಜಟಾಪಟಿ ಮುಂದುವರೆದಿದೆ. ಈ ಬಗ್ಗೆ ತನಿಖೆ ನಡೆಸಲು ಬಿಹಾರದಿಂದ ಮುಂಬೈಗೆ ಆಗಮಿಸಿರುವ IPS ಅಧಿಕಾರಿಯನ್ನು Quarantine ಮಾಡಿದ ಬಳಿಕ ವಿಷಯ ಇನ್ನಷ್ಟು ಬಿಗಡಾಯಿಸಿದೆ. ಈ ಕುರಿತು ಬಿಹಾರ ಪೊಲೀಸ್ ಬಿಎಂಸಿ ಆಯುಕ್ತರಿಗೆ ಪ್ರತಿಭಟನಾ ಪತ್ರ ಕಳುಹಿಸಲಿದ್ದಾರೆ ಎಂದು ಬಿಹಾರ ಡಿಜಿಪಿ ಗುಪ್ತೇಶ್ವರ ಪಾಂಡೆ ತಿಳಿಸಿದ್ದಾರೆ. ಈ ಪ್ರತಿಭಟನಾ ಪತ್ರವನ್ನು ಐಜಿ ಪಾಟ್ನಾಕ್ಕೆ ಕಳುಹಿಸಲಾಗುವುದು. ಕೇಂದ್ರ ಸರ್ಕಾರದ Quarantine ಮಾರ್ಗಸೂಚಿಗಳನ್ನು ನಾವು ಓದಿದ್ದೇವೆ ಎಂದು ಅವರು ಹೇಳಿದ್ದಾರೆ. ಅವುಗಳ ಪ್ರಕಾರ, ನಮ್ಮ ಅಧಿಕಾರಿ ಎಲ್ಲಿಯೂ ನಿಯಮಗಳನ್ನು ಉಲ್ಲಂಘಿಸಿಲ್ಲ. ನಮ್ಮ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಮ್ಮ ಅಧಿಕಾರಿಯನ್ನು  Quarantine ಮಾಡಿದ ಬಳಿಕ ನಮ್ಮ ತನಿಖೆಯಲ್ಲಿ ಅಡೆತಡೆ ಉಂಟಾಗಿದೆ. ನಾವು ಸುಪ್ರೀಂಕೋರ್ಟ್ ತೀರ್ಪುಗಾಗಿ ಕಾಯುತ್ತಿದ್ದೇವೆ ಎಂದು ಪಾಂಡೆ ಹೇಳಿದ್ದಾರೆ. 'ನಮ್ಮ ಇತರೆ 4 ಅಧಿಕಾರಿಗಳನ್ನು ಸಹ Quarantine ಮಾಡಲು ಶೋಧ ನಡೆಸಲಾಗುತ್ತಿದೆ. ಮುಂಬೈ ಪೊಲೀಸರು ಪಾಟ್ನಾ ಪೊಲೀಸರ ಲೋಕೇಶನ್ ಗಾಗಿ ಮಾಹಿತಿ ಕೋರಿದ್ದಾರೆ ಎಂದು ಅವರು ಹೇಳಿದ್ದಾರೆ.

ಮತ್ತೊಂದೆಡೆ, ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದಲ್ಲಿ ಮುಂಬೈ ಪೊಲೀಸ್ ಆಯುಕ್ತ ಪರಂಬೀರ್ ಸಿಂಗ್ ಸೋಮವಾರ ಬಿಹಾರ ಪೊಲೀಸರಿಗೆ ತನಿಖೆ ನಡೆಸುವ ಹಕ್ಕಿಲ್ಲ ಎಂದು ಹೇಳಿದ್ದಾರೆ. ನಮ್ಮ ತನಿಖೆ ಸರಿಯಾದ ದಿಕ್ಕಿನಲ್ಲಿದೆ ಎಂದು ಸಿಂಗ್ ಹೇಳಿದ್ದಾರೆ. ಅವರು ತಮ್ಮ ಪತ್ರಿಕಾಗೋಷ್ಠಿಯಲ್ಲಿ ಸುಶಾಂತ್ ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದ ಹಲವಾರು ಗಂಭೀರ  ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ. 

Trending News