ಕಾಲಿವುಡ್ ಸಿಂಗಂಗೆ ಕರೋನಾ ಪಾಸಿಟಿವ್..! ಅಭಿಮಾನಿಗಳಿಂದ ಹರಿದು ಬಂತು ಹಾರೈಕೆ

 ಕಾಲಿವುಡ್  ಸೂಪರ್ ಸ್ಟಾರ್, ತಮಿಳು ಚಿತ್ರರಂಗದ ಸಿಂಗಂ ನಟ ಸೂರ್ಯನಿಗೆ  ಕರೋನಾ ಸೋಂಕು ತಗಲಿರುವುದು ದೃಢ ಪಟ್ಟಿದೆ.

Written by - Ranjitha R K | Last Updated : Feb 8, 2021, 11:20 AM IST
  • ತಮಿಳು ಚಿತ್ರ ರಂಗದ ಸಿಂಗಂಗೆ ಕರೋನಾ ಪಾಸಿಟಿವ್
  • ಟ್ವೀಟರ್ ನಲ್ಲಿ ಖಚಿತ ಪಡಿಸಿದ ಸೂಪರ್ ಸ್ಟಾರ್ ಸೂರ್ಯ
  • ಸೂರ್ಯ ಚೇತರಿಕೆಗೆ ಹಾರೈಸುತ್ತಿದ್ದಾರೆ ಅಭಿಮಾನಿಗಳು
ಕಾಲಿವುಡ್ ಸಿಂಗಂಗೆ ಕರೋನಾ ಪಾಸಿಟಿವ್..! ಅಭಿಮಾನಿಗಳಿಂದ ಹರಿದು ಬಂತು ಹಾರೈಕೆ title=
ತಮಿಳು ಚಿತ್ರ ರಂಗದ ಸಿಂಗಂಗೆ ಕರೋನಾ ಪಾಸಿಟಿವ್ (file photo)

ಚೆನ್ನೈ : ಕಾಲಿವುಡ್ (Kollywood) ಸೂಪರ್ ಸ್ಟಾರ್, ತಮಿಳು ಚಿತ್ರರಂಗದ ಸಿಂಗಂ ನಟ ಸೂರ್ಯನಿಗೆ (Tamil Actor Surya) ಕರೋನಾ ಸೋಂಕು ತಗಲಿರುವುದು ದೃಢ ಪಟ್ಟಿದೆ. ಸೂರ್ಯ ತನ್ನ ಟ್ವಿಟರ್ ಖಾತೆಯಲ್ಲಿ ಕರೋನಾ (Corona) ತಗಲಿರುವ ಸಂಗತಿಯನ್ನು ಬರೆದುಕೊಂಡಿದ್ದಾರೆ. 

ಸೂರ್ಯ ಟ್ವಿಟರಿನಲ್ಲಿ ಏನಿದೆ..?
``ನನಗೆ ಕರೋನಾ ವೈರಸ್ (Corona virus) ಅಂಟಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಜೀವನ ಇನ್ನೂ ಸಹಜ ಸ್ಥಿತಿಗೆ ಬಂದಿಲ್ಲ. ಆರೋಗ್ಯದ (Health) ಕಡೆಗೂ ಗಮನ ನೀಡಬೇಕು. ನನಗೆ ಆರೈಕೆ ನೀಡುತ್ತಿರುವ ಡಾಕ್ಟರುಗಳಿಗೆ ಥ್ಯಾಂಕ್ಸ್'' ಎಂದು ಸೂರ್ಯ ಬರೆದುಕೊಂಡಿದ್ದಾರೆ. 

ಇದನ್ನೂ ಓದಿ : Shamika Kumaraswamy: ರಾಧಿಕಾ ಕುಮಾರಸ್ವಾಮಿ ಮಗಳು 'ಶಮಿಕಾ' ಫಿಲಂ ಇಂಡಸ್ಟ್ರಿಗೆ ಬರುವುದಕ್ಕೆ ರೆಡೀನಾ..!?

ಹಾರೈಕೆಗಳ ಮಹಾಪೂರ.!
ಸಿಂಗಂ ಸೂರ್ಯನಿಗೆ (Surya) ಕರೋನಾ (Covid 19) ಆವರಿಸಿರುವ ಸಂಗಂತಿ ಕೇಳಿ ಅವರ ಅಭಿಮಾನಿಗಳಿಗೆ ಶಾಕ್ ಆಗಿದೆ. ಅಭಿಮಾನಿಗಳ ಹಾರೈಕೆ ಹರಿದು ಬರುತಿದ್ದು, ಬೇಗ ಗುಣಮುಖರಾಗುವಂತೆ ಹಾರೈಸುತ್ತಿದ್ದಾರೆ. 

ಸೂರ್ಯ ನಿಕಟವರ್ತಿ ರಾಜಶೇಖರ್ ಪಾಂಡಿಯನ್ (Rajsekar Pandian) ಸೂರ್ಯ ಆರೋಗ್ಯದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಟ್ವೀಟ್ (tweet) ಮಾಡಿರುವ ಪಾಂಡಿಯನ್ `` ಸಹೋದರು ಮತ್ತುಸಹೋದರಿಯರು ಚಿಂತೆ ಮಾಡಬೇಕಾದ ಅಗತ್ಯ ಇಲ್ಲ. ಅಣ್ಣ ಚೆನ್ನಾಗಿದ್ದಾರೆ.'' ಎಂದು ಹೇಳಿಕೊಂಡಿದ್ದಾರೆ. 
ಸೂರ್ಯ ಕಳೆದ ನವೆಂಬರಿನಲ್ಲಿ ಸೂರಾರಿಪೊಟ್ರು (Soorarai Pottru) ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅದು ನವೆಂಬರಿನಲ್ಲಿ ಅಮೆಝಾನ್ ಪ್ರೈಮ್ ವಿಡಿಯೋದಲ್ಲಿ (Amazon Prime Video)  ರಿಲೀಸ್ ಆಗಿತ್ತು.

ಇದನ್ನೂ ಓದಿ : ಕುತೂಹಲ ಹೆಚ್ಚಿಸಿದ ದೃಶ್ಯಂ 2 ಟೀಸರ್, ಕುಟುಂಬವನ್ನು ಮತ್ತೆ ಕಾಡಿದೆ ಮರ್ಡರ್..! 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News