ಬೆಂಗಳೂರು: ಬೆಂಗಳೂರಿಗೆ ಸನ್ನಿ ಲಿಯೋನ್ ಬರ್ತಾರಂತೆ ಅನ್ನೋ ಹಾಟ್ ಚರ್ಚೆ ಸಿಲಿಕಾನ್ ಸಿಟಿಯಲ್ಲಿ ಮತ್ತೆ ಕೇಳಿ ಬರ್ತಿದೆ. ಪೊಲೀಸರ ಅನುಮತಿ ಪಡೆದೇ ಸನ್ನಿಲಿಯೋನ್ ಸಿಲಿಕಾನ್ ಸಿಟಿಗೆ ಎಂಟ್ರಿ ಕೊಡ್ತಾರೆ ಅನ್ನೋದು ಮತ್ತೊಂದು ವಿಶೇಷ.
ಈ ಹಿಂದೆ ಕಾರಣಾಂತರಗಳಿಂದ ಸನ್ನಿಲಿಯೋನ್ ಕಾರ್ಯಕ್ರಮಕ್ಕೆ ನೋ ಎಂಟ್ರಿ ಅಂದಿದ್ದ ಬೆಂಗಳೂರು ಪೊಲೀಸರು ಈ ಬಾರಿ ಸನ್ನಿ ಲಿಯೋನ್ ಬೆಂಗಳೂರಿಗೆ ಬರೋದಕ್ಕೆ ಅಸ್ತು ಎಂದಿದ್ದಾರೆ. ಕೆಲವು ಷರತ್ತುಗಳ ಮೇಲೆ ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಪೊಲೀಸರು ಸನ್ನಿಲಿಯೋನ್ ಗೆ ಅನುಮತಿ ನೀಡಿದ್ದಾರೆ ಎನ್ನಲಾಗಿದೆ.
ನವೆಂಬರ್ 3ರಂದು 'ಫ್ಯೂಜನ್ ನೈಟ್' ಕಾರ್ಯಕ್ರಮದಲ್ಲಿ ಸನ್ನಿಲಿಯೋನ್ ಸ್ಟೇಪ್:
ಹೌದು, ನವೆಂಬರ್ 3ರಂದು ಬೆಂಗಳೂರಿನಲ್ಲಿ 'ಫ್ಯೂಜನ್ ನೈಟ್' ಎಂಬ ಭರ್ಜರಿ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಸನ್ನಿಲಿಯೋನ್ ಸ್ಟೇಪ್ ಹಾಕಲಿದ್ದಾರೆ.
ರಘು ದೀಕ್ಷಿತ್ ಹಾಗೂ ಸನ್ನಿಲಿಯೋನ್ ನಡೆಸಿಕೊಡುವ ಈ ಕಾರ್ಯಕ್ರಮ ನಾಗವಾರದ ಮಾನ್ಯತಾ ಟೆಕ್ ಪಾರ್ಕ್ ಬಳಿಯ ವೈಟ್ ಆರ್ಕೀಡ್ ನಲ್ಲಿ ನಡೆಯಲಿದೆ ಎನ್ನಲಾಗಿದೆ.
ಈ ಹಿಂದೆ ಹೊಸವರ್ಷಾಚರಣೆ ಕಾರ್ಯಕ್ರಮವೊಂದರಲ್ಲಿ ಸನ್ನಿ ಲಿಯೋನ್ ಭಾಗವಹಿಸಲಿದ್ದಾರೆ ಎಂದು ತಿಳಿಯುತ್ತಿದ್ದಂತೆಯೇ ರಾಜ್ಯದ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸುವ ಮೂಲಕ ವಿರೋಧ ವ್ಯಕ್ತಪಡಿಸಿದ್ದವು.
ಹೊಸ ವರ್ಷದ ಮುನ್ನಾದಿನದಂದು ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ನಲ್ಲಿ ಖಾಸಗಿ ಸಂಸ್ಥೆಯೊಂದು ಆಯೋಜಿಸಿದ್ದ `ಸನ್ನಿ ನೈಟ್' ಕಾರ್ಯಕ್ರಮಕ್ಕೆ ಬರುವುದಿಲ್ಲ. ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ನನಗೆ ಮತ್ತು ಪ್ರೇಕ್ಷಕರಿಗೆ ಪೊಲೀಸರು ರಕ್ಷಣೆ ನೀಡಲಾಗುವುದಿಲ್ಲ ಎಂದು ಹೇಳುತ್ತಿರುವ ಹಿನ್ನೆಲೆಯಲ್ಲಿ ನಾನು ಬೆಂಗಳೂರಿಗೆ ಭೇಟಿ ನೀಡುವುದಿಲ್ಲ. ನನ್ನ ರಕ್ಷಣೆಗಿಂತ ಜನರ ರಕ್ಷಣೆ ಮುಖ್ಯ ಎಂದು ಸನ್ನಿ ಹೇಳಿದ್ದರು.