Gowli Release Date : ಬೆಳ್ಳಿತೆರೆ ಮೇಲೆ ಅಬ್ಬರಿಸಲು ʻಗೌಳಿʼ ರೆಡಿ.! ರಿಲೀಸ್‌ ಡೇಟ್‌ ಅನೌನ್ಸ್‌

Gowli Release Date : ಶ್ರೀನಗರ ಕಿಟ್ಟಿಯವರ ಖದರ್‌ ನೋಡಲು ಅವರ ಅಭಿಮಾನಿಗಳು ಬಹುದಿನಗಳಿಂದ ಕಾಯುತ್ತಿದ್ದರು. ಇದೀಗ ಫ್ಯಾನ್ಸ್‌ ಕುತೂಹಲಕ್ಕೆ ತೆರೆ ಬಿದ್ದಿದೆ. ಸೂರ ನಿರ್ದೇಶನದ ಈ ಸಿನಿಮಾವನ್ನು ರಘು ಸಿಂಗಂ ನಿರ್ಮಾಣ ಮಾಡಿದ್ದಾರೆ. 

Written by - Chetana Devarmani | Last Updated : Feb 10, 2023, 12:55 PM IST
  • ಬೆಳ್ಳಿತೆರೆ ಮೇಲೆ ಅಬ್ಬರಿಸಲು ʻಗೌಳಿʼ ರೆಡಿ
  • ಶ್ರೀನಗರ ಕಿಟ್ಟಿ ಅಭಿನಯದ ಬಹುನಿರೀಕ್ಷಿತ ಸಿನಿಮಾ
  • ಈ ಬಗ್ಗೆ ಬಿಗ್‌ ಅಪ್‌ಡೇಟ್‌ ನೀಡಿದ ಗೌಳಿ ಚಿತ್ರತಂಡ
Gowli Release Date : ಬೆಳ್ಳಿತೆರೆ ಮೇಲೆ ಅಬ್ಬರಿಸಲು ʻಗೌಳಿʼ ರೆಡಿ.! ರಿಲೀಸ್‌ ಡೇಟ್‌ ಅನೌನ್ಸ್‌  title=
Gowli

Gowli Release Date : ಲಾಂಗ್‌ ಬ್ರೇಕ್‌ ಬಳಿಕ ಮತ್ತೆ ಬೆಳ್ಳಿತೆರೆ ಮೇಲೆ ಅಬ್ಬರಿಸಲು ಶ್ರೀನಗರ ಕಿಟ್ಟಿ ರೆಡಿಯಾಗಿದ್ದಾರೆ. ಶ್ರೀನಗರ ಕಿಟ್ಟಿಯವರ ಖದರ್‌ ನೋಡಲು ಅವರ ಅಭಿಮಾನಿಗಳು ಬಹುದಿನಗಳಿಂದ ಕಾಯುತ್ತಿದ್ದರು. ಇದೀಗ ಫ್ಯಾನ್ಸ್‌ ಕುತೂಹಲಕ್ಕೆ ತೆರೆ ಬಿದ್ದಿದೆ. ಬಹುನಿರೀಕ್ಷಿತ ಸಿನಿಮಾ ಗೌಳಿ ರಿಲೀಸ್‌ ರೆಡಿಯಾಗಿದೆ. ಗೌಳಿ ತಂಡ ಈ ಬಗ್ಗೆ ಬಿಗ್‌ ಅಪ್‌ಡೇಟ್‌ ನೀಡಿದೆ. 

ಈ ಸಿನಿಮಾದಲ್ಲಿ ಶ್ರೀನಗರ ಕಿಟ್ಟಿ ವಿಭಿನ್ನ ಗೆಟಪ್ ನಲ್ಲಿ ಕಾಣಿಸುತ್ತಿದ್ದಾರೆ. 'ಗೌಳಿ' ಇದೀಗ ಗಾಂಧಿನಗರದಲ್ಲಿ ಹೊಸ ಅಲೆ ಎಬ್ಬಿಸುತ್ತಿರುವ ಸಿನಿಮಾ. ಹಲವು ದಿನಗಳ ನಂತರ ಈ ಸಿನಿಮಾದ ಮೂಲಕ ಕಂಬ್ಯಾಕ್ ಆಗುತ್ತಿದ್ದಾರೆ. ವಿಭಿನ್ನ ಗೆಟಪ್ ನಲ್ಲಿ ಕಾಣಿಸಲಿರುವ ಶ್ರೀನಗರ ಕಿಟ್ಟಿಗೆ ಈ ಸಿನಿಮಾದಲ್ಲಿ ನಾಯಕಿಯಾಗಿ ಪಾವನಗೌಡ ಅಭಿನಯಿಸಿದ್ದಾರೆ. ಸೂರ ನಿರ್ದೇಶನದ ಈ ಸಿನಿಮಾವನ್ನು ರಘು ಸಿಂಗಂ ನಿರ್ಮಾಣ ಮಾಡಿದ್ದಾರೆ. 

ಇದನ್ನೂ ಓದಿ : ಕುತೂಹಲ ಹೊತ್ತ ‘ಮೇರಿ’ ಟ್ರೇಲರ್ ರಿಲೀಸ್ : ಫೆಬ್ರವರಿ 24ಕ್ಕೆ ತೆರೆಗೆ ಬರಲಿದೆ ಸಿನಿಮಾ

ಉದ್ದನೆ ಗಡ್ಡ, ರಗಡ್ ಲುಕ್‌ನಲ್ಲಿ ಶ್ರೀನಗರ ಗೌಳಿ ಸಿನಿಮಾದಲ್ಲಿ ಕಾಣಿಸಲಿದ್ದಾರೆ. ನೈಜ ಘಟನೆ ಕಥಾ ಹಂದರ ಹೊಂದಿರುವ ಗೌಳಿ ಚಿತ್ರದ ರಿಲೀಸ್‌ ಡೇಟ್‌ ಅನೌನ್ಸ್‌ ಆಗಿದೆ. ಇದೇ ಫೆಬ್ರವರಿ 24 ರಂದು ಗೌಳಿ ಸಿನಿಮಾ ಬೆಳ್ಳಿತೆರೆಗೆ ಅಪ್ಪಳಿಸಲಿದೆ. ಶ್ರೀನರ ಕಿಟ್ಟಿ ಅವರ ರಗಡ್‌ ಲುಕ್‌ ಜೊತೆ ಪಾವನ ಗೌಡ ಅವರ ಬ್ಯೂಟಿ ಸಿನಿ ಪ್ರೇಕ್ಷಕರ ಮನ ಗೆಲ್ಲುವುದು ಪಕ್ಕಾ ಅಂತಿದ್ದಾರೆ. 

 

 

ಈ ಸಿನಿಮಾದಲ್ಲಿ ಮುಖ್ಯ ಭೂಮಿಕೆಯಲ್ಲಿ ರಂಗಾಯಣ ರಘು, ಶರತ್ ಲೋಹಿತಾಶ್ವ ಅಭಿನಯಿಸಿದ್ದಾರೆ. ಸೂರ ಅವರ ನಿರ್ದೇಶನವಿದ್ದು, ಸಂದೀಪ್ ವಲ್ಲುರಿ ಛಾಯಾಗ್ರಹಣವಿದೆ. ರಘು ಸಿಂಗಂರವರ ಸೋಹನ್ ಫಿಲ್ಮ್ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಿದ್ದು ಫೆಬ್ರವರಿ 24 ರಂದು ರಿಲೀಸ್‌ ಆಗಲಿದೆ. 

ಇದನ್ನೂ ಓದಿ : Kiara Pregnant : ಮದುವೆಗೆ ಮುನ್ನವೇ ಕಿಯಾರಾ ಅಡ್ವಾಣಿ ಗರ್ಭಿಣಿ.!?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News