Sreeleela: ಫುಲ್ ಫಾರ್ಮ್‌ನಲ್ಲಿರುವ ಶ್ರೀಲೀಲಾ.. ಸಿನಿಮಾದಿಂದ ದಿಢೀರ್ ಬ್ರೇಕ್?

Actress Sreeleela taking Break: ಬ್ಯಾಕ್ ಟು ಬ್ಯಾಕ್ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಶ್ರೀಲೀಲಾ ಎಂಬಿಬಿಎಸ್ ಓದುತ್ತಿರೋದು ಎಲ್ಲರಿಗೂ ಗೊತ್ತು.. ಸದ್ಯ ಇದೇ ಕಾರಣಕ್ಕೆ ಸಿನಿಮಾಗಳಿಂದ ಕೊಂಚ ಬ್ರೇಕ್‌ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ... 

Written by - Savita M B | Last Updated : Dec 19, 2023, 03:04 PM IST
  • ಅವಕಾಶಗಳನ್ನು ಬಿಟ್ಟುಕೊಡಲು ಬಯಸದೆ ಸಿನಿಮಾ ಮಾಡುತ್ತಿರುವ ಶ್ರೀಲೀಲಾ
  • ಆಫರ್ ಬರೋದೇ ತಡ.. ದೊಡ್ಡ ಹೀರೋ, ಸಣ್ಣ ಹೀರೋ ಎಂಬ ಬೇಧವಿಲ್ಲದೆ ನಾನ್ ಸ್ಟಾಪ್ ಶೂಟಿಂಗ್ ಮಾಡ್ತಿದ್ದಾರೆ.
  • ಶ್ರೀಲೀಲಾ ಸಿನಿಮಾಗಳಿಂದ ಕೊಂಚ ಬ್ರೇಕ್‌ ತೆಗೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ
Sreeleela: ಫುಲ್ ಫಾರ್ಮ್‌ನಲ್ಲಿರುವ ಶ್ರೀಲೀಲಾ.. ಸಿನಿಮಾದಿಂದ ದಿಢೀರ್ ಬ್ರೇಕ್?  title=

Actress Sreeleela: ಅವಕಾಶಗಳನ್ನು ಬಿಟ್ಟುಕೊಡಲು ಬಯಸದೆ ಸಿನಿಮಾ ಮಾಡುತ್ತಿರುವ ಶ್ರೀಲೀಲಾ.. ಆಫರ್ ಬರೋದೇ ತಡ.. ದೊಡ್ಡ ಹೀರೋ, ಸಣ್ಣ ಹೀರೋ ಎಂಬ ಬೇಧವಿಲ್ಲದೆ ನಾನ್ ಸ್ಟಾಪ್ ಶೂಟಿಂಗ್ ಮಾಡ್ತಿದ್ದಾರೆ. ಸದ್ಯ ಶ್ರೀಲೀಲಾ ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ವರ್ಷ ಸ್ಕಂದ, ಭಗವಂತ ಕೇಸರಿ, ಆದಿಕೇಶವ.. ಹೀಗೆ ಹಲವಾರು ಚಿತ್ರಗಳಿಂದ ಪ್ರೇಕ್ಷಕರ ಮುಂದೆ ಬಂದಿದ್ದ ಸುಂದರಿ..

ಶ್ರೀಲೀಲಾ ಬ್ಯಾಕ್ ಟು ಬ್ಯಾಕ್ ಶೂಟಿಂಗ್ ಮಾಡುತ್ತಿದ್ದಾರೆ. ಆದರೆ ನಟಿ ಒಂದು ಕಡೆ ಶೂಟಿಂಗ್ ಮಾಡುತ್ತಲೇ ಇನ್ನೊಂದು ಕಡೆ ಎಂಬಿಬಿಎಸ್ ಓದುತ್ತಿದ್ದಾರೆ.. ನಟನೆಯ ಒಲವಿನೊಂದಿಗೆ ವಿದ್ಯಾಭ್ಯಾಸವನ್ನೂ ಉಳಿಸಿಕೊಳ್ಳುತ್ತಿದ್ದಾರೆ...

ಇದನ್ನೂ ಓದಿ-ದಾವೂದ್ ಇಬ್ರಾಹಿಂ ಹುಚ್ಚನಂತೆ ಪ್ರೀತಿಸಿದ ಬಾಲಿವುಡ್ ನಟಿ ಮಂದಾಕಿನಿ ಈಗ ಏನು ಮಾಡುತ್ತಿದ್ದಾರೆ?

ಶೂಟಿಂಗ್ ಮಾಡುತ್ತಲೇ ಮೆಡಿಕಲ್ ಪುಸ್ತಕಗಳನ್ನು ಓದುತ್ತಿದ್ದ ಶ್ರೀಲೀಲಾ ಈಗ ಚಿತ್ರೀಕರಣಕ್ಕೆ ಬ್ರೇಕ್ ಕೊಟ್ಟಿದ್ದಾರೆ ಎಂದು ವರದಿಯಾಗಿದೆ. ಹೌದು ಮೆಡಿಕಲ್ ಸೆಮಿಸ್ಟರ್ ಪರೀಕ್ಷೆಗಳಿರುವ ಕಾರಣ ಕೆಲವು ದಿನಗಳ ಕಾಲ ಕಠಿಣ ತಯಾರಿ ನಡೆಸಿ ಪರೀಕ್ಷೆ ಬರೆಯಬೇಕು ಎಂಬ ಕಾರಣಕ್ಕೆ ಶ್ರೀಲೀಲಾ ಸಿನಿಮಾಗಳಿಂದ ಅಲ್ಪ ವಿರಾಮ ಘೋಷಿಸಿದ್ದಾರೆ ಎನ್ನಲಾಗಿದೆ.. 

ಈ ವರ್ಷ ಶ್ರೀಲೀಲಾ ಸಿನಿಮಾದ ಶೂಟಿಂಗ್, ರಿಲೀಸ್ ಮತ್ತು ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಕೈಯಲ್ಲಿ ಇನ್ನೂ ಕೆಲವು ಚಿತ್ರಗಳ ಚಿತ್ರೀಕರಣ ಬಾಕಿ ಇದೆ. ಅದಕ್ಕಾಗಿಯೇ ಶ್ರೀಲೀಲಾ ಪರೀಕ್ಷೆಗಾಗಿ ಸ್ವಲ್ಪ ಗ್ಯಾಪ್ ತೆಗೆದುಕೊಂಡು ಮುಂದಿನ ವರ್ಷ ಮತ್ತೆ ಫುಲ್ ಬ್ಯುಸಿಯಾಗಲು ಸಿದ್ಧರಾಗುತ್ತಾರೆ ಎನ್ನಲಾಗಿದೆ.. ಇನ್ನು ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಆಕ್ಟೀವ್‌ ಆಗಿರುವ ಶ್ರೀಲೀಲಾ ಆಗ್ಗಾಗೆ ಫೋಟೋಗಳನ್ನು ಶೇರ್‌ ಮಾಡಿಕೊಳ್ಳುವ ಮೂಲಕ ಸುದ್ದಿಯಲ್ಲಿರುತ್ತಾರೆ.. 

ಇದನ್ನೂ ಓದಿ-Dawood Ibrahim: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೀವನಾಧಾರಿತ ಬಾಲಿವುಡ್ ಸಿನಿಮಾಗಳಿವು!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News