ಕೊರಗಜ್ಜ ಸಿನಿಮಾಗೆ ದಕ್ಷಿಣ ಭಾರತದ ಖ್ಯಾತ "ಗೋಪಿ ಸುಂದರ್" ಸಂಗೀತ

Koragajja movie: ಪ್ಯಾನ್ ಇಂಡಿಯಾ ಚಿತ್ರ "ಕೊರಗಜ್ಜ" ಸಿನಿಮಾಗೆ RRR, ಪುಷ್ಪ ಮೊದಲಾದ ಹಿಟ್ ಸಿನಿಮಾಗಳ ತಂತ್ರಜ್ಞರ ದಂಡು ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಸಿಕೊಂಡಿದೆ.  

Written by - Chetana Devarmani | Last Updated : Jan 7, 2024, 01:13 PM IST
  • ಪ್ಯಾನ್ ಇಂಡಿಯಾ ಚಿತ್ರ ಕೊರಗಜ್ಜ
  • ಕೊರಗಜ್ಜ ಸಿನಿಮಾಗೆ ಗೋಪಿ ಸುಂದರ್ ಸಂಗೀತ
  • ಸುಧೀರ್ ಅತ್ತಾವರ ನಿರ್ದೇಶನದ ಕೊರಗಜ್ಜ ಸಿನಿಮಾ
ಕೊರಗಜ್ಜ ಸಿನಿಮಾಗೆ ದಕ್ಷಿಣ ಭಾರತದ ಖ್ಯಾತ "ಗೋಪಿ ಸುಂದರ್" ಸಂಗೀತ title=

Koragajja movie: ಹಲವಾರು ಬಾರಿ ಮರು ಚಿತ್ರೀಕರಣ, ಮತ್ತೆ ಮತ್ತೆ ತಿದ್ದುಪಡಿಗಳು, ಹಲವಾರು ಬದಲಾವಣೆಗಳೊಂದಿಗೆ ಕ್ರೇಜ್ ಹುಟ್ಟುಹಾಕುತ್ತಿರುವ ಸುಧೀರ್ ಅತ್ತಾವರ ನಿರ್ದೇಶನದ ಕೊರಗಜ್ಜ ಸಿನಿಮಾದ ಸಂಗೀತವನ್ನೇ ಸಂಪೂರ್ಣವಾಗಿ ಬದಲಾಯಿಸಿ, ದಕ್ಷಿಣ ಭಾರತದ ಪ್ರಖ್ಯಾತ ಸಂಗೀತ ನಿರ್ದೇಶಕ "ಗೋಪಿ ಸುಂದರ್" ಈಗ ಸಿನಿಮಾಗೆ ಬ್ಯಾಗ್ರೌಂಡ್ ಸ್ಕೋರ್ ಜೊತೆ ಎಲ್ಲಾ ಹಾಡುಗಳನ್ನು ಮತ್ತೆ ಹೊಸದಾಗಿ ಕಂಪೋಜ್ ಮಾಡುತ್ತಿದ್ದಾರೆ.

ಬಹುಕೋಟಿ ವೆಚ್ಚದಲ್ಲಿ ತ್ರಿವಿಕ್ರಮ ಸಪಲ್ಯ ರವರು ತ್ರಿವಿಕ್ರಮ ಸಿನೆಮಾಸ್  ಮತ್ತು ಸಕ್ಸಸ್ ಫಿಲಂಸ್ ಬ್ಯಾನರ್ ನ ಅಡಿ ನಿರ್ಮಿಸುತ್ತಿರುವ ಪ್ಯಾನ್ ಇಂಡಿಯಾ ಚಿತ್ರ "ಕೊರಗಜ್ಜ" ಚಿತ್ರಕ್ಕೆ  RRR, ಪುಷ್ಪ ಮೊದಲಾದ ಹಿಟ್ ಸಿನಿಮಾಗಳ ತಂತ್ರಜ್ಞರ ದಂಡು ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಸಿಕೊಂಡಿದೆ.

ಇದನ್ನೂ ಓದಿ: ಬಿಗ್ ಬಾಸ್‌ನಿಂದ ನೇಮ್‌ ಫೇಮ್‌ ಬಂದಿಲ್ಲ.. ಮಾಜಿ ಮಹಿಳಾ ಸ್ಪರ್ಧಿ ಬಿಚ್ಚಿಟ್ಟ ಅಸಲಿ ಕತೆ! 

ಸುಮಾರು ಎಂಟು ನೂರು ವರ್ಷಗಳ ಹಿಂದಿನ ಕಥೆಯುಳ್ಳ ಈ ಸಿನಿಮಾದಲ್ಲಿ ಹಾಲಿವುಡ್- ಬಾಲಿವುಡ್ ಕಲಾವಿದರಾದ ಕಬೀರ್ ಬೇಡಿ, ಸಂದೀಪ್ ಸೋಪರ್ಕರ್, ಗಣೇಶ್ ಆಚಾರ್ಯ ಜೊತೆ ಶ್ರುತಿ, ಭವ್ಯ ಮೊದಲಾದವರು ಅಭಿನಯಿಸುತ್ತಿದ್ದಾರೆ. ಋತಿಕ ಎನ್ನುವ ಹೊಸ ಮುಖ ಕೊರಗಜ್ಜನ ತಾಯಿ ಕೊರೊಪೊಳು ಪಾತ್ರದ ಮುಖಾಂತರ ಕನ್ನಡ ಚಿತ್ರರಂಗಕ್ಕೆ ಪರಿಚಯ ವಾಗುತ್ತಿದ್ದಾರೆ.

ಉಳಿದಂತೆ  ಜೀತ್ ಜೊಸ್ಸಿ ಮತ್ತು ವಿದ್ಯಾಧರ್ ಶೆಟ್ಟಿ ಸಂಕಲನ, ಮನೋಜ್ ಪಿಳ್ಳೈ ಮತ್ತು ಪವನ್ ವಿ ಛಾಯಾಗ್ರಹಣ, ಸುಧೀರ್ ಅತ್ತಾವರ್ ಕಲಾ ನಿರ್ದೇಶನ, ಬಿಬಿನ್ ದೇವ್ ಸೌಂಡ್ ಡಿಸೈನಿಂಗ್  ಚಿತ್ರಕ್ಕಿದೆ. ಮಾರ್ಚ್ ಕೊನೆಗೆ ಸಿನಿಮಾ ಬಿಡುಗಡೆಗಾಗಿ ತಯಾರಿ ನಡೆದಿದೆ. 

ಇದನ್ನೂ ಓದಿ: ಒಟಿಟಿಗೆ ದಿಢೀರ್ ಎಂಟ್ರಿ ಕೊಟ್ಟ ಸಲ್ಮಾನ್‌ ಖಾನ್‌ ಟೈಗರ್ 3 ಸಿನಿಮಾ..! ಎಲ್ಲಿ.. ಯಾವಾಗ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News