Car Accident: ದಕ್ಷಿಣ ಭಾರತದ ಖ್ಯಾತ ನಟಿ ಕಾರು ಅಪಘಾತ: ಗಂಭೀರ ಗಾಯ, ಆಸ್ಪತ್ರೆಯಲ್ಲಿ ಚಿಕಿತ್ಸೆ

Rambha Car Accident: ರಂಭಾ ಅವರು ತಮ್ಮ ಹಾನಿಗೊಳಗಾದ ಕಾರಿನ ಫೋಟೋಗಳನ್ನು ಪೋಸ್ಟ್ ಮಾಡಿದ್ದು, ಹೀಗೆ ಬರೆದುಕೊಂಡಿದ್ದಾರೆ. " ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಹೋಗುವ ಮಾರ್ಗದಲ್ಲಿ ನಮ್ಮ ಕಾರಿಗೆ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಸಣ್ಣ ಪುಟ್ಟ ಗಾಯಗಳೊಂದಿಗೆ ನಾವೆಲ್ಲರೂ ಸುರಕ್ಷಿತವಾಗಿದ್ದೇವೆ.

Written by - Bhavishya Shetty | Last Updated : Nov 1, 2022, 12:58 PM IST
    • ದಕ್ಷಿಣ ಭಾರತದ ಖ್ಯಾತ ನಟಿ ರಂಭಾ ಅವರ ಕಾರು ಅಪಘಾತ
    • ರಂಭ ಸಿನಿಮಾ ರಂಗವನ್ನು ತೊರೆದು ವಿದೇಶದಲ್ಲಿ ವಾಸಿಸುತ್ತಿದ್ದಾರೆ
    • ಹಾನಿಗೊಳಗಾದ ಕಾರಿನ ಫೋಟೋಗಳನ್ನು ಪೋಸ್ಟ್ ಮಾಡಿದ ರಂಭಾ
Car Accident: ದಕ್ಷಿಣ ಭಾರತದ ಖ್ಯಾತ ನಟಿ ಕಾರು ಅಪಘಾತ: ಗಂಭೀರ ಗಾಯ, ಆಸ್ಪತ್ರೆಯಲ್ಲಿ ಚಿಕಿತ್ಸೆ title=
Rambha

Rambha Car Accident: ದಕ್ಷಿಣ ಭಾರತದ ಖ್ಯಾತ ನಟಿ ರಂಭಾ ಅವರ ಕಾರು ಅಪಘಾತವಾಗಿದ್ದು, ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಉದ್ಯಮಿ ಇಂದ್ರನ್ ಪದ್ಮನಾಭನ್ ಅವರ ಜೊತೆ ವಿವಾಹವಾದ ರಂಭ ಸಿನಿಮಾ ರಂಗವನ್ನು ತೊರೆದು ವಿದೇಶದಲ್ಲಿ ವಾಸಿಸುತ್ತಿದ್ದಾರೆ.

ಇದನ್ನೂ ಓದಿ: Kantara vs Ram Setu : ರಾಮ ಸೇತು ಎದುರು ಕಾಂತಾರ ಶೋ ಸಂಖ್ಯೆ ಹೆಚ್ಚಳ, ಮತ್ತೆ ಮುಗ್ಗರಿಸಿದ ಅಕ್ಷಯ್ ಕುಮಾರ್

ರಂಭಾ ಅವರು ತಮ್ಮ ಹಾನಿಗೊಳಗಾದ ಕಾರಿನ ಫೋಟೋಗಳನ್ನು ಪೋಸ್ಟ್ ಮಾಡಿದ್ದು, ಹೀಗೆ ಬರೆದುಕೊಂಡಿದ್ದಾರೆ. " ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಹೋಗುವ ಮಾರ್ಗದಲ್ಲಿ ನಮ್ಮ ಕಾರಿಗೆ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಸಣ್ಣ ಪುಟ್ಟ ಗಾಯಗಳೊಂದಿಗೆ ನಾವೆಲ್ಲರೂ ಸುರಕ್ಷಿತವಾಗಿದ್ದೇವೆ. ನನ್ನ ಪುಟ್ಟ ಸಾಶಾ ಇನ್ನೂ ಆಸ್ಪತ್ರೆಯಲ್ಲಿ ಕೆಟ್ಟ ದಿನಗಳು ಕೆಟ್ಟ ಸಮಯ ಅನುಭವಿಸುತ್ತಿದ್ದಾಳೆ. ದಯವಿಟ್ಟು ನಮಗಾಗಿ ಪ್ರಾರ್ಥಿಸಿ ನಿಮ್ಮ ಪ್ರಾರ್ಥನೆಗಳು ಬಹಳಷ್ಟು ಮುಖ್ಯ” ಎಂದು ನಟಿಯ ಮಗಳು ಸಶಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ.

Ouw car was hit by another car at an intersection wayback from picking kids from school! "Me with kids and my nanny" All of us are safe with minor injuries 😔my little Sasha is still in the hospital 😞 bad days bad time 😪😰please pray for us 🙏 your prayers means a lot 🙏🙏 pic.twitter.com/BqgrNjfdpi
— Rambha Indrakumar (@Rambha_indran) November 1, 2022

 

 

ಇದನ್ನೂ ಓದಿ: Bride Video: ವಿವಾಹ ಬಿಳ್ಕೊಡುಗೆ ಬಳಿಕ ತಾಳ್ಮೆ ಕಳೆದುಕೊಂಡ ವಧು, ಕಾರಿನಲ್ಲಿಯೇ ವರನಿಗೆ...!

ರಂಬಾ 90ರ ದಶಕದ ಕೊನೆಯಲ್ಲಿ ಮತ್ತು ಹೊಸ ಸಹಸ್ರಮಾನದ ಸಮಯದಲ್ಲಿ ತಮಿಳು ಮತ್ತು ತೆಲುಗು ಚಲನಚಿತ್ರೋದ್ಯಮದ ಪ್ರಮುಖ ನಟಿಯಾಗಿದ್ದರು. ಅವರು ದಕ್ಷಿಣದ ಎಲ್ಲಾ ಸೂಪರ್‌ಸ್ಟಾರ್‌ಗಳ ಜೊತೆ ನಟಿಸಿದ್ದಾರೆ. ತಮಿಳಿನಲ್ಲಿ ಕಮಲ್, ರಜಿನಿ, ಕಾರ್ತಿಕ್, ಪ್ರಭು, ಸತ್ಯರಾಜ್, ವಿಜಯಕಾಂತ್, ಅಜಿತ್ ಮತ್ತು ವಿಜಯ್ ಅವರೊಂದಿಗೆ ಜೋಡಿಯಾಗಿದ್ದಾರೆ. ಇನ್ನು ಸ್ಯಾಂಡಲ್ ವುಡ್ ನಲ್ಲಿ ರವಿಚಂದ್ರನ್ ಜೊತೆಯೂ ಅಭಿನಯಿಸಿದ್ದರು

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News