Shruti Hassan: ಬಾಯ್ ಫ್ರೆಂಡ್ ಜೊತೆ ಬ್ರೇಕಪ್..ʼಆʼ ಸ್ಟಾರ್‌ ನಿರ್ದೇಶಕನೊಂದಿಗೆ ಶೃತಿ ಹಾಸನ್ ನ್ಯೂ ಅಫೇರ್? ‌

South Actress Shruti Hassan: ಗ್ಲೋಬಲ್‌ ಹಿರೋ ಕಮಲ್ ಹಾಸನ್ ಅವರ ಪುತ್ರಿಯಾಗಿ ಚಿತ್ರರಂಗಕ್ಕೆ ಪರಿಚಿತರಾಗಿರುವ ಶ್ರುತಿ ಹಾಸನ್ ಕಡಿಮೆ ಅವಧಿಯಲ್ಲಿ ಸ್ಟಾರ್ ಹೀರೋಯಿನ್ ಆಗಿ ಬೆಳೆದರು. ಅವರು ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ನಟಿಸಿ ಉತ್ತಮ ಜನಪ್ರಿಯತೆ ಗಳಿಸಿದರು. 

Written by - Savita M B | Last Updated : Apr 29, 2024, 11:17 AM IST
  • ನಟಿ ಶೃತಿ ಹಾಸನ್‌ ಇತ್ತೀಚೆಗೆ ಪ್ಯಾನ್‌ಇಂಡಿಯಾ ಸ್ಟಾರ್‌ ಪ್ರಭಾಸ್‌ ಅಭಿನಯದ ಸಲಾರ್‌ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿ ಮಿಂಚಿದ್ದರು..
  • ಈ ಸಿನಿಮಾ ಭರ್ಜರಿ ರೆಸ್ಪಾನ್ಸ್‌ ಕಂಡು ಬಾರೀ ಕಲೆಕ್ಷನ್‌ ಮಾಡಿತ್ತು..
Shruti Hassan: ಬಾಯ್ ಫ್ರೆಂಡ್ ಜೊತೆ ಬ್ರೇಕಪ್..ʼಆʼ ಸ್ಟಾರ್‌ ನಿರ್ದೇಶಕನೊಂದಿಗೆ ಶೃತಿ ಹಾಸನ್ ನ್ಯೂ ಅಫೇರ್? ‌  title=

Shruti Hassan: ನಟಿ ಶೃತಿ ಹಾಸನ್‌ ಇತ್ತೀಚೆಗೆ ಪ್ಯಾನ್‌ಇಂಡಿಯಾ ಸ್ಟಾರ್‌ ಪ್ರಭಾಸ್‌ ಅಭಿನಯದ ಸಲಾರ್‌ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿ ಮಿಂಚಿದ್ದರು.. ಈ ಸಿನಿಮಾ ಭರ್ಜರಿ ರೆಸ್ಪಾನ್ಸ್‌ ಕಂಡು ಬಾರೀ ಕಲೆಕ್ಷನ್‌ ಮಾಡಿತ್ತು.. ಹೀಗೆ ಬಹುಕಾಲ ಸ್ಟಾರ್ ಹೀರೋಯಿನ್ ಆಗಿ ಮುಂದುವರೆಯಬೇಕೆಂದುಕೊಂಡಿದ್ದ ಶ್ರುತಿ ಹಾಸನ್ ವೃತ್ತಿಜೀವನ ಹಳಿ ತಪ್ಪಿತ್ತು.. 

ಹೌದು ಶೃತಿ ವೈಯಕ್ತಿಕ ಜೀವನವೇ ಆಕೆಯ ಸಿನಿಮಾ ಕೆರಿಯರ್ ಅನ್ನು ಹಾಳು ಮಾಡಿತ್ತು. ನಟಿ ಶ್ರುತಿ ಹಾಸನ್ ಅವರು ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವಾಗ ಮೈಕೆಲ್ ಕೋಸಲೆ ಎಂಬ ವ್ಯಕ್ತಿಯೊಂದಿಗೆ ಡೇಟ್ ಮಾಡಿದರು. ಮದುವೆಗೂ ಮುನ್ನ ಇಬ್ಬರೂ ಸೇರಿ ಒಂದೇ ಮನೆಯಲ್ಲಿಯೇ ವಾಸಿಸುತ್ತಿದ್ದರು.. ಕೆಲವು ವರ್ಷಗಳ ಕಾಲ ಉತ್ತಮವಾಗಿ ಸಾಗಿದ ಅವರ ಸಂಬಂಧವು 2019 ರಲ್ಲಿ ಕೊನೆಗೊಂಡಿತು. ಭಿನ್ನಾಭಿಪ್ರಾಯದಿಂದ ಮೈಕೆಲ್ ಕೋಸಲೆ ಜೊತೆ ಶ್ರುತಿ ಹಾಸನ್ ಬ್ರೇಕ್ ಅಪ್ ಮಾಡಿಕೊಂಡರು.. 

ಇದನ್ನೂ ಓದಿ-ಅನುಷ್ಕಾ, ದೀಪಿಕಾಗೆ ಕಾಫಿ ಆರ್ಡರ್ ಮಾಡುತ್ತಿದ್ದ ಈಕೆ ಇಂದು ಬಾಲಿವುಡ್ ನ ಸ್ಟಾರ್ ನಟಿ!ಅದೃಷ್ಟ ಬದಲಿಸಿದ್ದು ಆ ಒಂದು ಫೋನ್ ಕಾಲ್

ಅದರ ನಂತರ ಶೃತಿ ಹಾಸನ್ ಮತ್ತೊಮ್ಮೆ ಡೂಡಲ್ ಕಲಾವಿದ ಶಾಂತನು ಹಜಾರಿಕಾ ಅವರನ್ನು ಪ್ರೀತಿಸುತ್ತಿದ್ದರು. ಇಬ್ಬರೂ ಮುಂಬೈನಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು.. ನಟಿ ಬಾಯ್ ಫ್ರೆಂಡ್ ಜೊತೆಗಿನ ಫೋಟೋಗಳು ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಆಗ್ಗಾಗೆ ಹಂಚಿಕೊಳ್ಳುತ್ತಿದ್ದರು.. ಆದರೆ ಇತ್ತೀಚೆಗಷ್ಟೇ ಶೃತಿ ಹಾಸನ್ ತನ್ನ ಬಾಯ್ ಫ್ರೆಂಡ್ ಜೊತೆ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಕೆಲವು ಭಿನ್ನಾಭಿಪ್ರಾಯಗಳಿಂದಾಗಿ ಶ್ರುತಿ ಹಾಸನ್ ತನ್ನ ಬಾಯ್ ಫ್ರೆಂಡ್ ನಿಂದ ದೂರ ಉಳಿದಿದ್ದು...ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಅನ್ ಫಾಲೋ ಮಾಡಿಕೊಂಡು, ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.. 

ಆದರೆ ಈ ನಡುವೆ ಶೃತಿ ಹಾಸನ್ ಬ್ರೇಕಪ್ ಆಗಲು ನಿರ್ದೇಶಕರೊಬ್ಬರು ಕಾರಣ ಎನ್ನಲಾಗಿದೆ.. ಹೌದು ಶ್ರುತಿ ಹಾಸನ್ ಇತ್ತೀಚೆಗೆ ತಮಿಳು ನಿರ್ದೇಶಕ ಲೋಕೇಶ್ ಕನಕರಾಜ್ ಜೊತೆ ವಿಡಿಯೋ ಸಾಂಗ್ ನಲ್ಲಿ ನಟಿಸಿದ್ದರು. ಅಂದಿನಿಂದ ಶ್ರುತಿ ಹಾಸನ್ ಮತ್ತು ಶಾಂತನು ಹಜಾರಿ ನಡುವೆ ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡಿದ್ದು, ಈ ಕಾರಣದಿಂದಲೇ ಇವರಿಬ್ಬರು ಬೇರೆಯಾಗಿದ್ದಾರೆ ಎಂಬ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ-Haripriya - Vasishta: ಐಷಾರಾಮಿ ಕಾರು ಖರೀದಿಸಿದ ಸಿಂಹಪ್ರಿಯಾ ದಂಪತಿ: ಇದರ ಬೆಲೆ ಹಾಗೂ ವಿಶೇಷತೆಗಳೇನು ಗೊತ್ತೇ??

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News