ತಾಯಿಯಾಗಲಿದ್ದಾರಾ ನಟಿ ಸಮಂತಾ..? ಏನಿದು ಪೋಸ್ಟ್!!

‌Actress Samantha: ಸಮಂತಾ ಜೀವನ ತೆರೆದ ಪುಸ್ತಕ. ಅವರ ಸಿನಿಮಾ ವೃತ್ತಿಯಿಂದ ಹಿಡಿದು ವೈಯಕ್ತಿಕ ಬದುಕಿನವರೆಗೆ ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ನಟಿಯ ಕುರಿತಾದ ಶಾಕಿಂಗ್‌ ಸುದ್ದಿಯೊಂದು ಹರಿದಾಡುತ್ತಿದೆ..   

Written by - Savita M B | Last Updated : Jul 29, 2024, 03:44 PM IST
  • ಸಮಂತಾ ಕಳೆದ ಕೆಲವು ದಿನಗಳಿಂದ ಮೈಸಿಟಿಸ್ ನಿಂದ ಬಳಲುತ್ತಿದ್ದಾರೆ.
  • ಸಮಂತಾ ಇತ್ತೀಚೆಗೆ ಮಾಡಿದ ಪೋಸ್ಟ್ ಅಭಿಮಾನಿಗಳಿಗೆ ಶಾಕ್‌ ನೀಡಿದೆ
 ತಾಯಿಯಾಗಲಿದ್ದಾರಾ ನಟಿ ಸಮಂತಾ..? ಏನಿದು ಪೋಸ್ಟ್!!  title=

‌Actress Samantha Insta Post: ಸಮಂತಾ ಕಳೆದ ಕೆಲವು ದಿನಗಳಿಂದ ಮೈಸಿಟಿಸ್ ನಿಂದ ಬಳಲುತ್ತಿದ್ದಾರೆ. ಇದರೊಂದಿಗೆ ಸಿನಿಮಾದಿಂದ ಕೊಂಚ ದೂರ ಉಳಿದಿದ್ದರು... ಈಮಾಯ ಚೇಸಾವೆ ಚಿತ್ರದ ನಾಯಕಿಯಾಗಿ ಗುರುತಿಸಿಕೊಂಡಿದ್ದ ಸಮಂತಾ, ಮಹೇಶ್ ಬಾಬು ಜೊತೆಗಿನ ದೂಕುಡು ಚಿತ್ರದ ಮೂಲಕ ಸ್ಟಾರ್ ಹೀರೋಯಿನ್ ಸ್ಥಾನಮಾನ ಪಡೆದರು.

ಆ ನಂತರ ತೆಲುಗಿನಲ್ಲಿ ಟಾಪ್ ಹೀರೋಯಿನ್ ಆಗಿದ್ದ ಸಮಂತಾ ನಾಯಕ ನಾಗ ಚೈತನ್ಯ ಅವರನ್ನು ಪ್ರೀತಿಸಿ ಮದುವೆಯಾದರು. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಲ ವರ್ಷಗಳ ಬಳಿಕ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ದಂಪತಿ ವಿಚ್ಛೇದನ ಪಡೆದರು. 

ಸಮಂತಾ ಅವರೊಂದಿಗಿನ ವಿಚ್ಛೇದನದ ನಂತರ, ನಾಗ ಚೈತನ್ಯ ನಾಯಕಿ ಸೋಭಿತಾ ಧೂಳಿಪಾಲ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹುಟ್ಟಿಕೊಂಡವು. ಈ ಊಹಾಪೋಹಗಳಿಗೆ ಪುಷ್ಟಿ ನೀಡುವಂತೆ ಅವರಿಬ್ಬರೂ ಹಲವಾರು ಬಾರಿ ಒಟ್ಟಿಗೆ ಕಾಣಿಸಿಕೊಂಡರು ಮತ್ತು ಅವರು ಸಂಬಂಧದಲ್ಲಿದ್ದಾರೆ ಎಂದು ಎಲ್ಲರೂ ಫಿಕ್ಸ್‌ ಆಗಿದ್ದಾರೆ.. 

ಇದನ್ನೂ ಓದಿ-300 ಕ್ಕೂ ಹೆಚ್ಚು ಜನರ ಜೊತೆ ಅಫೇರ್‌..50 ನೇ ವಯಸ್ಸಿನಲ್ಲಿ ಸುಂದರ ಯುವತಿ ಜೊತೆ ಮೂರನೇ ಮದುವೆ..ಬಾಲಿವುಡ್‌ ಇಂಡಸ್ಟ್ರಿಯ ಸ್ಟಾರ್‌ ಈತ..ಯಾರು ಗೊತ್ತಾ..?

 ಮತ್ತೊಂದೆಡೆ, ಸಮಂತಾ ಒಂಟಿಯಾಗಿ ಉಳಿದಿದ್ದಾರೆ. ಎರಡನೇ ಮದುವೆಯಾಗಿ ಜೀವನದಲ್ಲಿ ಸುಖವಾಗಿರುವಂತೆ ಆಕೆಯ ಪೋಷಕರು ಸಮಂತಾ ಮೇಲೆ ಒತ್ತಡ ಹೇರುತ್ತಿದ್ದರೂ ಆಕೆ ಇದಕ್ಕೆ ಒಪ್ಪುತ್ತಿಲ್ಲ. ಒಂದು ಸಲ ಮದುವೆಯಾಗಿ ಮೋಸ ಹೋದೆ.. ಮತ್ತೆ ಇಂತಹ ತಪ್ಪು ಆಗಲು ಬಿಡುವುದಿಲ್ಲ ಎಂದು ಸಮಂತಾ ಮನೆಯವರಿಗೆ ಹೇಳುತ್ತಿದ್ದಾರೆ. ಇನ್ನು ಮುಂದೆ ಏಕಾಂಗಿ ಜೀವನ ನಡೆಸಲು ಸಮಂತಾ ಹೆಚ್ಚು ಒಲವು ತೋರಿದ್ದಾರೆ. ಈ ನಡುವೆ ಸಮಂತಾ ಇತ್ತೀಚೆಗೆ ಮಾಡಿದ ಪೋಸ್ಟ್ ಅಭಿಮಾನಿಗಳ ಹೃದಯವನ್ನು ಸ್ತಬ್ಧಗೊಳಿಸಿದೆ. 

ಸಮಂತಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಇತ್ತೀಚಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕಾರಿನಲ್ಲಿ ಕುಳಿತಾಗ ಕೈಯಲ್ಲಿ ಏನನ್ನೋ ಹಿಡಿದು ಪೋಸ್ಟ್‌ ಮಾಡಿದ್ದಾರೆ.. ಇದು ನಿಜವಾಗಿಯೂ ಪ್ರೆಗ್ನೆನ್ಸಿ ಕಿಟ್‌ನಂತೆ ಕಾಣುತ್ತಿದ್ದು, ಇದರೊಂದಿಗೆ ಸಮಂತಾ ಗರ್ಭಿಣಿಯಾಗಿದ್ದಾರಾ ಎನ್ನುವ ಪ್ರಶ್ನೆಯೊಂದು ಅಭಿಮಾನಿಗಳಲ್ಲಿ ಮೂಡಿದೆ.. 

ವಾಸ್ತವವಾಗಿ ನಟಿ ಸಮಂತಾ 01/08 FIND HONEY ಎಂದು ಬರೆಯಲಾದ ಟ್ಯಾಗ್‌ನ್ನು ಕೈಯಲ್ಲಿ ಹಿಡಿದು ಪೋಸ್‌ ಕೊಟ್ಟಿದ್ದಾರೆ.. ಅಲ್ಲದೇ ಇದು ಯಾವುದೇ ಪ್ರೆಗ್ನೆನ್ಸಿ ಕಿಟ್‌ ಅಲ್ಲ ಎಂದು ಅಭಿಮಾನಿಗಳು ಕೂಲ್‌ ಆಗಿದ್ದಾರೆ..ಸಮಂತಾ ಪೋಸ್ಟ್ ಗೆ ಕೆಲವರು ಸ್ಯಾಮ್ ಗರ್ಭಿಣಿ ಎಂದು ಶಾಕ್ ಆಗಿದ್ದಾರೆ ಎಂದು ಪ್ರತಿಕ್ರಿಯಿಸುತ್ತಿದ್ದರೆ, ಇನ್ನು ಕೆಲವರು ಹೌದು ಗರ್ಭಿಣಿ ಕಿಟ್ ನಂತೆ ಇದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಸದ್ಯ ಸಮಂತಾ ಶೇರ್ ಮಾಡಿರುವ ಈ ಪೋಸ್ಟ್ ವೈರಲ್ ಆಗುತ್ತಿದೆ.

 ಇದನ್ನೂ ಓದಿ-ಬಲು ವಿಭಿನ್ನವಾಗಿದೆ ತರುಣ್ - ಸೋನಾಲ್ ವೆಡ್ಡಿಂಗ್ ಕಾರ್ಡ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News