Sonali Bendre: "ಆ ಹಾಡು ಹಿಟ್ ಆಗದೆಯಿದ್ದರೇ ಚಿತ್ರರಂಗವನ್ನೇ ಬಿಟ್ಟು ಬಿಡಬೇಕೆಂದು ನಿರ್ಧರಿಸಿದ್ದೆ": ಬಿ-ಟೌನ್‌ ನಟಿ ಹೀಗಂದಿದ್ಯೇಕೆ?

Sonali Bendre Song: ಬಾಲಿವುಡ್‌ ಖ್ಯಾತ ನಟಿ ಸೋನಾಲಿ ಬೇಂದ್ರೆ ಈಕೆ ಕಾಣಿಸಿಕೊಂಡ ಆ ಹಾಡೊಂದು ಹಿಟ್‌ ಆಗದೇ ಇದ್ದರೇ, ಚಿತ್ರರಂಗವನ್ನೇ ಬಿಟ್ಟು ಹೊಗುತ್ತಿದ್ದರಂತೆ. ಹಾಗಿದ್ರೇ ಆ ಹಾಡು ಯಾವುದು? ಈಕೆ ಈ ರೀತಿ ಮಾತನಾಡಿದ್ದಾದರೂ ಯಾಕೆ? ಇಲ್ಲಿದೆ ಸಂಪೂರ್ಣ ವಿವರ.

Written by - Zee Kannada News Desk | Last Updated : Apr 28, 2024, 10:20 AM IST
  • ಬಿ-ಟೌನ್‌ ಸುಂದರಿ ಸೋನಾಳಿ ಬೇಂದ್ರೆ 2013ರಲ್ಲಿ ಕೊನೆಯ ಬಾರಿಗೆ 'ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ ದೊಬಾರಾ' ಅನ್ನುವ ಚಿತ್ರದಲ್ಲಿ ಅಭಿನಯಿಸಿದರು.
  • ಹಾಗೆಯೇ ಈ ವೆಬ್‌ ಸೀರಿಸ್ ಪ್ರಚಾರದ ಭಾಗವಾಗಿ ಸಂದರ್ಶನವೊಂದರಲ್ಲಿ ಪಾಲ್ಗೊಂಡ ನಟಿ, ತಮ್ಮ ಸಿನಿಪಯಣ ಹಾಗೂ ವೈಯಕ್ತಿಕ ಜೀವನದ ಇಂಟ್ರೆಸ್ಟಿಂಗ್ ಸಂಗತಿಗಳ ಬಗ್ಗೆ ಹಂಚಿಕೊಂಡಿದ್ದಾರೆ.
  • ಅಂತಹ ಸಮಯದಲ್ಲಿ ಈಕೆ ಶೂಟಿಂಗ್ ಮುಗಿದ ತಕ್ಷಣ ಬಾಲಿವುಡ್ ಡ್ಯಾನ್ಸ್ ತರಬೇತಿ ತೆಗೆದುಕೊಳ್ಳುತ್ತಿದ್ದರು ಎಂಬುದನ್ನು ನೆನಪಿಸಿಕೊಂಡಿದ್ದಾರೆ.
Sonali Bendre: "ಆ ಹಾಡು ಹಿಟ್ ಆಗದೆಯಿದ್ದರೇ ಚಿತ್ರರಂಗವನ್ನೇ ಬಿಟ್ಟು ಬಿಡಬೇಕೆಂದು ನಿರ್ಧರಿಸಿದ್ದೆ": ಬಿ-ಟೌನ್‌ ನಟಿ ಹೀಗಂದಿದ್ಯೇಕೆ? title=

Sonali Bendre Talk About Her Song: ಬಾಲಿವುಡ್‌ನ ಜನಪ್ರಿಯ ನಟಿ ಸೋನಾಲಿ ಬೇಂದ್ರೆ ಇತ್ತೀಚೆಗೆ ಈಕೆಯ ಆ ಹಾಡೊಂದು ಹಿಟ್‌ ಆಗದೇಯಿದ್ದರೇ ಸಿನಿರಂಗವನ್ನೇ ಬಿಡುತ್ತಿದ್ದರಂತೆ. ಬಿ-ಟೌನ್‌ ಸುಂದರಿ ಸೋನಾಳಿ ಬೇಂದ್ರೆ 2013ರಲ್ಲಿ ಕೊನೆಯ ಬಾರಿಗೆ 'ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ ದೊಬಾರಾ' ಅನ್ನುವ ಚಿತ್ರದಲ್ಲಿ ಅಭಿನಯಿಸಿದರು. ತದನಂತರ ಈ ನಟಿ 'ಗಾಟ್ ಟ್ಯಾಲೆಂಟ್', 'ಇಂಡಿಯಾಸ್ ಬೆಸ್ಟ್ ಡ್ರಾಮಾಬಾಜ್' ಹಾಗೂ 'ಅಜೀಬ್ ದಸ್ತಾನ್ ಹೈ ಯೆ' ಇಂತಹ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡರು.

ಸೋನಾಲಿ ಬೇಂದ್ರೆ 2018ರಲ್ಲಿ ಕ್ಯಾನ್ಸರ್‌ಗೆ ತುತ್ತಾಗಿದ್ದು, ಕೆಲ ದಿನಗಳ ಕಾಲ ನ್ಯೂಯಾರ್ಕ್‌ನಲ್ಲಿ ಚಿಕಿತ್ಸೆ ಪಡೆದು ಅದರಿಂದ ಚೇತರಿಸಿಕೊಂಡಿದ್ದಾರೆ. ಇದೀಗ ಈ ನಟಿ ಮತ್ತೆ ಕಿರುತೆರೆಗೆ ಮರಳಿದ್ದು, 'ದಿ ಬ್ರೋಕನ್ ನ್ಯೂಸ್ - 2́ ವೆಬ್ ಸೀರಿಸ್‌ನಲ್ಲಿ ಬಣ್ಣ ಹಚ್ಚಿದ್ದಾರೆ. ಹಾಗೆಯೇ ಈ ವೆಬ್‌ ಸೀರಿಸ್ ಪ್ರಚಾರದ ಭಾಗವಾಗಿ ಸಂದರ್ಶನವೊಂದರಲ್ಲಿ ಪಾಲ್ಗೊಂಡ ನಟಿ, ತಮ್ಮ ಸಿನಿಪಯಣ ಹಾಗೂ ವೈಯಕ್ತಿಕ ಜೀವನದ ಇಂಟ್ರೆಸ್ಟಿಂಗ್ ಸಂಗತಿಗಳ ಬಗ್ಗೆ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಆರ್ ಚಂದ್ರು ನಿರ್ಮಾಣದ ಡಾರ್ಲಿಂಗ್ ಕೃಷ್ಣ ನಟನೆಯ ʻಫಾದರ್ʼ ಚಿತ್ರಕ್ಕೆ ಶಿವರಾಜಕುಮಾರ್ ಚಾಲನೆ

ನಟಿ ಸೋನಾಲಿ ಬೇಂದ್ರೆ 1995 ಮಣಿರತ್ನಂ ನಿರ್ದೇಶನ 'ಬಾಂಬೆ' ಸಿನಿಮಾದ ಸ್ಪೆಷಲ್ ಸಾಂಗ್‌ವೊಂದರಲ್ಲಿ ಹೆಜ್ಜೆ ಹಾಕಿದ್ದರು. ಈ ನಟಿ 'ಹಮ್ಮಾ ಹಮ್ಮಾ' ಹಾಡಿನಲ್ಲಿ ರಾಜು ಸುಂದರಂ ಮಾಸ್ಟರ್ ಜೊತೆಗೆ ಬಿಂದಾಸ್ ಡ್ಯಾನ್ಸ್ ಮಾಡಿ ರಂಗೇರಿಸಿದ್ದರು. ಈ ನಟಿ ಚಿತ್ರರಂಗದಲ್ಲಿ ತನ್ನ ಡ್ಯಾನ್ಸ್ ಬಗ್ಗೆ ಸಾಕಷ್ಟು ಟೀಕೆಗಳು ಎದುರಾಗುತ್ತಿತ್ತು. ಅಂತಹ ಸಮಯದಲ್ಲಿ ಈಕೆ ಶೂಟಿಂಗ್ ಮುಗಿದ ತಕ್ಷಣ ಬಾಲಿವುಡ್ ಡ್ಯಾನ್ಸ್ ತರಬೇತಿ ತೆಗೆದುಕೊಳ್ಳುತ್ತಿದ್ದರು ಎಂಬುದನ್ನು ನೆನಪಿಸಿಕೊಂಡಿದ್ದಾರೆ.

ಸಂದರ್ಶನದಲ್ಲಿ ಸೋನಾಳಿ ಬೇಂದ್ರೆ, "ಆಗ ನಾನು 5 ಸಿನಿಮಾಗಳಲ್ಲಿ ನಟಿಸಿದ್ದೆ. ಅದೇ ಸಮಯದಲ್ಲಿ 'ಹಮ್ಮಾ ಹಮ್ಮಾ' ಸಾಂಗ್‌ ಅವಕಾಶ ಸಿಕ್ಕಿತ್ತು. ಆ ಹಾಡಿಗೆ ಪ್ರಭುದೇವ ಕೊರಿಯೋಗ್ರಾಫರ್, ಸಹೋದರ ರಾಜು ಸುಂದರಂ ಜೊತೆ ಕುಣಿಯಬೇಕು ಎಂದರು. ಪ್ರಭುದೇವ ಕೊರಿಯೋಗ್ರಫರ್ ಆಗಿದ್ದರಿಂದ ಬಹಳ ಕಷ್ಟಪಟ್ಟು ಡ್ಯಾನ್ಸ್ ಮಾಡಿದೆ. ಒಂದು ವೇಳೆ ಆ ಹಾಡು ಹಿಟ್ ಆಗದೇ ಇದ್ದರೆ ಚಿತ್ರರಂಗವನ್ನೇ ಬಿಟ್ಟು ಬಿಡಬೇಕು ಎಂದು ನಿರ್ಧರಿಸಿದ್ದೆ" ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:ಲೆಜೆಂಡರಿ ಸ್ಟುಡಿಯೋದಿಂದ ಜಪಾನ್ ನಲ್ಲಿ ತೆರೆಕಾಣಲಿದೆ "777ಚಾರ್ಲಿ" : ರಿಲೀಸ್ ಡೇಟ್ ಯಾವಾಗ ಗೊತ್ತಾ? 

ಸೋನಾಲಿ ಡ್ಯಾನ್ಸ್‌ ಕೋರಿಯೋಘ್ರಾಫಿ ಬಗ್ಗೆ ಮಾತನಾಡುತ್ತಾ, "ಆ ಹಾಡಿನಲ್ಲಿ ಮಣಿ ಸರ್ ಲಾಂಗ್‌ ಶಾಟ್ಸ್‌ ಜಾಸ್ತಿ ಇಟ್ಟಿದ್ದರು. ಹಾಗಾಗಿ ಬಹುತೇಕ ಎಲ್ಲವೂ ಒಂದೇ ಟೇಕ್‌ನಲ್ಲಿ ಮುಗಿದಿತ್ತು. ಆಗ ಸೆಟ್‌ನಲ್ಲಿ ಪ್ರಭುದೇವ ತಂದೆ ಸುಂದರಂ ಮಾಸ್ಟರ್ ಸಹ ಇರುತ್ತಿದ್ದರು. ನನ್ನ ಡ್ಯಾನ್ಸ್ ನೋಡಿ ಅವರು ಚೆನ್ನಾಗಿ ಡ್ಯಾನ್ಸ್ ಮಾಡ್ದೆ ಎಂದು 100 ರೂ. ಕೊಟ್ಟಿದ್ದರು. ಅಂತಹ ದೊಡ್ಡ ವ್ಯಕ್ತಿ ಮೆಚ್ಚಿಕೊಂಡ ಮೇಲೆ ಬೇರೆ ಯಾವುದೇ ಸರ್ಟಿಫಿಕೇಟ್ ಬೇಡ ಎಂದುಕೊಂಡೆ. ಅಲ್ಲಿಂದ ಮುಂದೆ ಇಂಡಸ್ಟ್ರಿಯಲ್ಲಿ ಉಳಿಯುವ ಧೈರ್ಯ ಬಂತು. ಅದಕ್ಕೆ ನನಗೆ ಆ ಹಾಡು ಬಹಳ ವಿಶೇಷ" ಎಂದಿದ್ದಾರೆ. ಈ ನಟಿ ಕನ್ನಡದ 'ಪ್ರೀತ್ಸೆ' ಚಿತ್ರದಲ್ಲಿ ಉಪೇಂದ್ರ ಮತ್ತು  ಶಿವರಾಜ್‌ಕುಮಾರ್ ಜೊತೆಗೂ ಅಭಿನಯಿಸಿ ಮಿಂಚಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News