ನನ್ನ ಮಾಜಿ ಪತಿ ಸಲಿಂಗಕಾಮಿ.. ಕ್ಷಮಿಸಿ..! ವಿಡಿಯೋ ಬಿಡುಗಡೆ ಮಾಡಿ ಖ್ಯಾತ ಸಿಂಗರ್‌

Singer Suchitra : ಇತ್ತೀಚೆಗೆ, ಕೆಲವು ದಿನಗಳ ಹಿಂದೆ, ಸಿಂಗರ್‌ ಸುಚಿತ್ರಾ ತಮ್ಮ ಮಾಜಿ ಪತಿ, ನಟ ಮತ್ತು ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಕಾರ್ತಿಕ್ ಕುಮಾರ್ ಜೊತೆಗೆ ಅನೇಕ ಸ್ಟಾರ್‌ ನಟರ ಮೇಲೆ ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾಡಿದ್ದರು. ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ಮಾಜಿ ಪತಿ ಕಾರ್ತಿಕ್ ಕುಮಾರ್ ಮತ್ತು ನಟ ಧನುಷ್ ಹಾಗೂ ಬಾಲಿವುಡ್‌ನ ಬಾದ್ ಶಾ ಶಾರುಖ್ ಖಾನ್ ಸಲಿಂಗಕಾಮಿ ಎಂದು ಶಾಕಿಂಗ್‌ ಹೇಳಿಕೆ ನೀಡಿದ್ದರು. ಇದೀಗ ಈ ವಿಚಾರವಾಗಿ ಮತ್ತೆ ಗಾಯಕಿ ಮಾತನಾಡಿದ್ದಾರೆ..

Written by - Krishna N K | Last Updated : Aug 15, 2024, 06:44 PM IST
    • ಸಿಂಗರ್‌ ಸುಚಿತ್ರಾ ತಮ್ಮ ಮಾಜಿ ಪತಿ, ನಟ ಕಾರ್ತಿಕ್‌ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು.
    • ಕಾರ್ತಿಕ್ ಮತ್ತು ನಟ ಧನುಷ್ ಹಾಗೂ ಶಾರುಖ್ ಖಾನ್ ಸಲಿಂಗಕಾಮಿ ಅಂತ ಹೇಳಿದ್ದರು.
    • ಸುಚಿತ್ರಾ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಹಲವು ವರ್ಷಗಳಿಂದ ಸುದ್ದಿಯಲ್ಲಿದ್ದಾರೆ.
ನನ್ನ ಮಾಜಿ ಪತಿ ಸಲಿಂಗಕಾಮಿ.. ಕ್ಷಮಿಸಿ..! ವಿಡಿಯೋ ಬಿಡುಗಡೆ ಮಾಡಿ ಖ್ಯಾತ ಸಿಂಗರ್‌ title=

Singer Suchitra Actor Karthik Kumar : ಖ್ಯಾತ ಗಾಯಕಿ ಸುಚಿತ್ರಾ ಇತ್ತೀಚೆಗೆ ತಮ್ಮ ಶಾಕಿಂಗ್‌ ಹೇಳಿಕೆಗಳ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಸುದ್ದಿಯಾಗಿದ್ದರು. ಸುಚಿ ಲೀಕ್ ಆದ ನಂತರ ಸೈಲೆಂಟ್ ಆಗಿದ್ದ ಸುಚಿತ್ರಾ ಕೆಲ ದಿನಗಳ ಹಿಂದೆ ಮತ್ತೆ ಆ್ಯಕ್ಟಿವ್ ಆದರು. ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಹಲವು ವರ್ಷಗಳಿಂದ ಸುದ್ದಿಯಲ್ಲಿದ್ದಾರೆ. 

ಈ ಹಿಂದೆಯೂ ಸುಚಿಲೀಕ್ಸ್ ಹೆಸರಿನಲ್ಲಿ ಚಿತ್ರರಂಗದ ನಟರ ವೈಯಕ್ತಿಕ ವಿಷಯಗಳ ಬಗ್ಗೆ ಸಂವೇದನಾಶೀಲ ಆರೋಪಗಳನ್ನು ಮಾಡಿದ್ದರು. ಇತ್ತೀಚೆಗೆ, ಕೆಲವು ದಿನಗಳ ಹಿಂದೆ, ಅವರು ತಮ್ಮ ಮಾಜಿ ಪತಿ, ನಟ ಮತ್ತು ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಕಾರ್ತಿಕ್ ಕುಮಾರ್ ಜೊತೆಗೆ ಅನೇಕ ಸ್ಟಾರ್‌ ನಟರ ಮೇಲೆ ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾಡಿದ್ದರು. ಅಲ್ಲದೆ, ಇದಕ್ಕೆ ವಿರೋಧ ವ್ಯಕ್ತ ಪಡಿಸಿದ್ದ ಕಾರ್ತಿಕ್ ಸುಚಿತ್ರಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. 

ಇದನ್ನೂ ಓದಿ:ಸಹೋದರಿಯ ಪತಿಯೊಂದಿಗೆ ರೊಮ್ಯಾನ್ಸ್..‌ ರಾಷ್ಟ್ರ ಪ್ರಶಸ್ತಿ ವಿಜೇತೆ.. ಈ ಖ್ಯಾತ ನಟಿಯ ಬಾಳಲ್ಲಿ ನಡೆದಿತ್ತು ʼಆʼ ಘೋರ ದುರಂತ!

ಇದೀಗ ಗಾಯಕಿ ಸುಚಿತ್ರಾ ತನ್ನ ಮಾಜಿ ಪತಿಗೆ ಕ್ಷಮೆಯಾಚಿಸಿದ್ದಾರೆ. ಜೊತೆಗೆ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಅವರನ್ನು ಗೇ ಎಂದು ಕರೆದಿದ್ದಕ್ಕೆ ಕ್ಷಮಿಸಿ.. ಅವರ ವೃತ್ತಿಯನ್ನು ಹಾಳು ಮಾಡುವ ಉದ್ದೇಶ ನನಗಿಲ್ಲ. ಅದಕ್ಕೇ ನಾನು ಕ್ಷಮೆ ಕೇಳುತ್ತಿದ್ದೇನೆ.. ಕಾರ್ತಿಕ್ ದೂರಿನಿಂದಾಗಿ ಪೊಲೀಸರಿಂದ ನನಗೆ ಆಗಾಗ ಕರೆಗಳು ಬರುತ್ತಿವೆ. ಹೀಗಾಗಿ ತನ್ನ ಹೇಳಿಕೆಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸುತ್ತಿದ್ದೇನೆ ಎಂದು ಹೇಳಿದ್ದಾರೆ. 

ಅಲ್ಲದೆ, ತನ್ನ ಮಾಜಿ ಪತಿ ಕಾರ್ತಿಕ್‌ಗೆ ಕ್ಷಮೆಯಾಚಿಸಿದ ವಿಡಿಯೋ ಇಮೇಲ್ ಮಾಡುವುದಾಗಿ ಹೇಳಿದ್ದಾರೆ ಸುಚಿತ್ರಾ. ಅಲ್ಲದೆ, ಇನ್ನು ಮುಂದೆ ಆತನ ವೃತ್ತಿಗೆ ಯಾವುದೇ ತೊಂದರೆ ನೀಡುವುದಿಲ್ಲ ಎಂದಿದ್ದಾರೆ, ಎಲ್ಲವನ್ನು ಬಿಟ್ಟು ಮಾನಸಿಕವಾಗಿ ಶಾಂತವಾಗಿರಲು ಬಯಸುತ್ತೇನೆ ಎಂದಿದ್ದು, ಸದ್ಯ ಸುಚಿತ್ರಾ ಕಾಮೆಂಟ್‌ಗಳು ವೈರಲ್ ಆಗುತ್ತಿವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News