ಸಿಂಪಲ್‌ ಸುನಿ ಹೊಸ ಸಿನಿಮಾ 'ಗತವೈಭವ'.. ಸಿನಿಪ್ರಿಯರ ಕುತೂಹಲ ಹೆಚ್ಚಿಸಿದ ಟೀಸರ್‌!

Gatavaibhava teaser: 'ಸಖತ್‌' ಸಿನಿಮಾ ಯಶಸ್ಸಿನ ಗುಂಗಲ್ಲಿರುವ ಸಿಂಪಲ್ ಸುನಿ (Simple Suni) ತಮ್ಮ ಹೊಸ ಪ್ರೊಜೆಕ್ಟ್‌ 'ಗತವೈಭವ' ದ ಟೀಸರ್‌ ರಿಲೀಸ್ ಮಾಡಿದ್ದಾರೆ.

Written by - Chetana Devarmani | Last Updated : Feb 28, 2022, 05:44 PM IST
  • 'ಸಖತ್‌' ಸಿನಿಮಾ ಯಶಸ್ಸಿನ ಗುಂಗಲ್ಲಿರುವ ಸಿಂಪಲ್ ಸುನಿ
  • ಸಿಂಪಲ್ ಸುನಿ ಹೊಸ ಪ್ರೊಜೆಕ್ಟ್‌ 'ಗತವೈಭವ' ದ ಟೀಸರ್‌ ರಿಲೀಸ್
  • ಟೀಸರ್‌ನಲ್ಲೇ ನಟ ಶರಣ್‌ ಅಭಿನಯದ 'ಅವತಾರ ಪುರುಷ' ಚಿತ್ರದ ಪ್ರಚಾರ
ಸಿಂಪಲ್‌ ಸುನಿ ಹೊಸ ಸಿನಿಮಾ 'ಗತವೈಭವ'.. ಸಿನಿಪ್ರಿಯರ ಕುತೂಹಲ ಹೆಚ್ಚಿಸಿದ ಟೀಸರ್‌!  title=
ಗತವೈಭವ

ಬೆಂಗಳೂರು: 'ಸಖತ್‌' ಸಿನಿಮಾ ಯಶಸ್ಸಿನ ಗುಂಗಲ್ಲಿರುವ ಸಿಂಪಲ್ ಸುನಿ (Simple Suni) ತಮ್ಮ ಹೊಸ ಪ್ರೊಜೆಕ್ಟ್‌ 'ಗತವೈಭವ' ದ ಟೀಸರ್‌ ರಿಲೀಸ್ ಮಾಡಿದ್ದಾರೆ. ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಿರ್ದೇಶಕರಲ್ಲಿ ಒಬ್ಬರು ಸಿಂಪಲ್‌ ಸುನಿ.

ಇದನ್ನೂ ಓದಿ: ಗುಪ್ತವಾಗಿ ಮದುವೆಯಾದರೇ ಸಲ್ಮಾನ್ ಖಾನ್? ಈ ಫೋಟೋ ಹೇಳುವುದಾದರೂ ಏನು ?

'ಗತವೈಭವ' (Gatavaibhava) ಸಿನಿಮಾ ಮೂಲಕ ಹೊಸ ನಟನನ್ನು ಚಂದನವನಕ್ಕೆ ಪರಿಚಯಿಸುತ್ತಿದ್ದಾರೆ. ಸುನಿ ನಿರ್ದೇಶನದಲ್ಲಿ ದುಷ್ಯಂತ್ (Dushyant) ನಟಿಸುತ್ತಿರುವ 'ಗತವೈಭವ' ಚಿತ್ರದ ಟೀಸರ್‌ ಸೋಮವಾರ (ಇಂದು) ಬಿಡುಗಡೆಯಾಗಿದೆ. 

ಟೀಸರ್‌ನಲ್ಲೇ ನಟ ಶರಣ್‌ (Sharan) ಅಭಿನಯದ 'ಅವತಾರ ಪುರುಷ' (Avatarapurusha) ಚಿತ್ರದ ಪ್ರಚಾರನ್ನೂ ಸುನಿ ಮಾಡಿದ್ದಾರೆ. ಫೆಬ್ರವರಿ 28 ರಂದು ಬೆಳಗ್ಗೆ 10.10 ನಿಮಿಷಕ್ಕೆ ಅಧಿಕೃತ ವಾಗಿ ಮಾಹಿತಿ ನೀಡಿದ್ದಾರೆ. ಇನ್ನೂ ಇದೇ ವೇಳೆ ಚಿತ್ರದ ನಾಯಕನ ಪಾತ್ರದ ಬಗ್ಗೆ ಒನ್ ಲೈನ್ ನಲ್ಲಿ ಪರಿಚಯಿಸಿದ್ದಾರೆ. 

ದುಷ್ಯಂತ್ ವಿಎಫ್ ಎಕ್ಸ್ ಕಲಾವಿದನಾಗಿ ನಟಿಸಲಿದ್ದಾರೆ. ಇಂಗ್ಲಿಷ್‌ನ 'ಆ್ಯರೋ' ಸರಣಿಯಲ್ಲಿನ ಸೂಪರ್‌ಹೀರೊನಂತೆ ಕೈಯಲ್ಲಿ ಬಿಲ್ಲು, ಬಾಣದೊಂದಿಗೆ ತಲೆಗೆ ಹುಡ್‌ ಧರಿಸಿ ದುಷ್ಯಂತ್‌ ತಮ್ಮ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರಕಥೆಯ ಬಗ್ಗೆ ಕುತೂಹಲ ಹೆಚ್ಚಿಸಿದೆ. ಗತವೈಭವ, ಸಂಪೂರ್ಣ ಪ್ರೇಮಕಥೆಯಾಗಿದೆ (Love story). ಸೈಂಟಿಫಿಕ್‌ ಥ್ರಿಲ್ಲರ್‌ ಮಾದರಿಯ ಕಥೆಯನ್ನು ಈ ಸಿನಿಮಾದಲ್ಲಿ ಹೇಳ ಹೊರಟಿದ್ದಾರೆ. 

ಇದನ್ನೂ ಓದಿ: Radhe Shyam: 'ರಾಧೆ ಶ್ಯಾಮ್' ಚಿತ್ರತಂಡ ಸೇರಿದ ಸೆಂಚುರಿ ಸ್ಟಾರ್ ಶಿವರಾಜಕುಮಾರ್

ಯುವ ನಟ ದುಷ್ಯಂತ್‌, 2018ರಿಂದ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲು ತಯಾರಿ ನಡೆಸುತ್ತಿದ್ದರು. ಅವರು ನಾಗತಿಹಳ್ಳಿ ಚಂದ್ರಶೇಖರ್ (Nagatihalli Chandrashekhar) ನೇತೃತ್ವದ ಟೆಂಟ್ ಸಿನಿಮಾ ಮತ್ತು ಪುಷ್ಕರ್ ಆ್ಯಕ್ಟಿಂಗ್ ಇನ್‌ಸ್ಟಿಟ್ಯೂಟ್‌ನಿಂದ ನಟನೆಯ ತರಬೇತಿ ಪಡೆದಿದ್ದಾರೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News