ಸಿದ್ಧಾರ್ಥ್ ಮತ್ತು ಕಿಯಾರಾ ಮದುವೆ : ಫೆ.6ಕ್ಕೆ ಸಪ್ತಪದಿ ತುಳಿಯಲಿರುವ ಸ್ಟಾರ್‌ ಜೋಡಿ

ಬಾಲಿವುಡ್‌ ಸ್ಟಾರ್‌ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌. ಪರಸ್ಪರ ಡೇಟಿಂಗ್ ಮಾಡುತ್ತಿದ್ದ ಜೋಡಿ ಅಂತಿಮವಾಗಿ ಮದುವೆಯಾಗಲು ಒಪ್ಪಿಕೊಂಡಿದ್ದು, ಮುಂದಿನ ವರ್ಷ 2023 ಫೆಬ್ರವರಿಯಲ್ಲಿ ಸಿದ್ದು, ಕಿಯಾರಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ತಿಳಿದು ಬಂದಿದೆ. ಮುಂದಿನ ವರ್ಷ ಈ ಕ್ಯೂಟ್‌ ಜೋಡಿ ಅದ್ಧೂರಿಯಾಗಿ ವಿವಾಹವಾಗಲಿದ್ದಾರೆ ಎನ್ನಲಾಗಿದೆ.

Written by - Krishna N K | Last Updated : Dec 31, 2022, 12:00 PM IST
  • ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌
  • ಡೇಟಿಂಗ್ ಮಾಡುತ್ತಿದ್ದ ಜೋಡಿ ಅಂತಿಮವಾಗಿ ಮದುವೆಯಾಗಲು ಸಿದ್ದರಾಗಿದ್ದಾರೆ
  • ಮುಂದಿನ ವರ್ಷ ಫೆಬ್ರವರಿಯಲ್ಲಿ ಸಿದ್ದು, ಕಿಯಾರಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ
ಸಿದ್ಧಾರ್ಥ್ ಮತ್ತು ಕಿಯಾರಾ ಮದುವೆ : ಫೆ.6ಕ್ಕೆ ಸಪ್ತಪದಿ ತುಳಿಯಲಿರುವ ಸ್ಟಾರ್‌ ಜೋಡಿ title=

Sidharth Malhotra Kiara Advani : ಬಾಲಿವುಡ್‌ ಸ್ಟಾರ್‌ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌. ಪರಸ್ಪರ ಡೇಟಿಂಗ್ ಮಾಡುತ್ತಿದ್ದ ಜೋಡಿ ಅಂತಿಮವಾಗಿ ಮದುವೆಯಾಗಲು ಒಪ್ಪಿಕೊಂಡಿದ್ದು, ಮುಂದಿನ ವರ್ಷ 2023 ಫೆಬ್ರವರಿಯಲ್ಲಿ ಸಿದ್ದು, ಕಿಯಾರಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ತಿಳಿದು ಬಂದಿದೆ. ಮುಂದಿನ ವರ್ಷ ಈ ಕ್ಯೂಟ್‌ ಜೋಡಿ ಅದ್ಧೂರಿಯಾಗಿ ವಿವಾಹವಾಗಲಿದ್ದಾರೆ ಎನ್ನಲಾಗಿದೆ.

ಗಾಸಿಫ್‌ ಗುಂಗಲ್ಲಿದ್ದ ಸಿದ್ದು, ಕಿಯಾರಾ ಅಡ್ವಾಣಿ ಫ್ಯಾನ್ಸ್‌ ಸದ್ಯ ಡೀಪ್‌ ಶಾಕ್‌ಗೆ ಒಳಗಾಗಿದ್ದಾರೆ. ಇಷ್ಟು ದಿನ ಇಬ್ಬರ ಲವ್‌ ಮ್ಯಾಟರ್‌ ಜಸ್ಟ್‌ ರೂಮ್ಸ್‌ ಅಂತ ತಿಳಿದುಕೊಂಡಿದ್ದ ಅವರ ಅಭಿಮಾನಿಗಳಿಗೆ ಕ್ಯೂಟ್‌ ಜೋಡಿ ಶಾಕ್‌ ನೀಡಿದೆ. ಖಾಸಗಿ ಸುದ್ದಿವಾಹಿನಿಯ ವರದಿಯಂತೆ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಫೆಬ್ರವರಿ ಮೊದಲ ವಾರದಲ್ಲಿ ಸಪ್ತಪದಿ ತುಳಿಯಲಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: BBK 9 Finale: ಫಿನಾಲೆವರೆಗೂ ಬಂದ ದಿವ್ಯಾ ಉರುಡುಗ ಎಡವಿದ್ದೆಲ್ಲಿ?

ಹೌದು, ಸಿದ್ ಮತ್ತು ಕಿಯಾರಾ 6ನೇ ಫೆಬ್ರವರಿ 2023 ರಂದು ಮದುವೆಯಾಗಲಿದ್ದಾರೆ. ಇಬ್ಬರ ಮದುವೆ ವಿಚಾರ ಇಂಟರ್‌ನೆಟ್‌ನಲ್ಲಿ ಸೆನ್ಸೆಷನ್ ಕ್ರಿಯೇಟ್‌ ಮಾಡುತ್ತಿದೆ. ಅಲದೆ, ಈ ವಿಚಾರವಾಗಿ ಸೋಷಿಯಲ್‌ ಮೀಡಿಯಾದಲ್ಲಿ ನೆಟ್ಟಿಗರು ವ್ಯಾಪಕವಾಗಿ ಚರ್ಚಿಸುತ್ತಿದ್ದಾರೆ. ಅದ್ಧೂರಿ ವೇದಿಕೆಯಲ್ಲಿ ಈ ಸ್ಟಾರ್‌ ಜೋಡಿ ಮದುವೆ ಕಾರ್ಯಕ್ರಮಗಳು ನಡೆಯಲಿವೆ. ಮೆಹೆಂದಿ, ಹಲ್ದಿ ಮತ್ತು ವಿವಾಹ ಪೂರ್ವ ಕಾರ್ಯಕ್ರಮಗಳು ಫೆಬ್ರವರಿ 4 ಮತ್ತು ಫೆಬ್ರವರಿ 5 ರಂದು ನಡೆಯಲಿದ್ದು, 6ರಂದು ವಿವಾಹ ಮಹೋತ್ಸವ ನಡೆಯಲಿದೆ.

ತಮ್ಮ ಗೆಳೆಯರಾದ ಕತ್ರಿನಾ ಕೈಫ್-ವಿಕ್ಕಿ ಕೌಶಲ್, ಪ್ರಿಯಾಂಕಾ ಚೋಪ್ರಾ-ನಿಕ್ ಜೋನಾಸ್, ಅನುಷ್ಕಾ ಶರ್ಮಾ-ವಿರಾಟ್ ಕೊಹ್ಲಿ ಮತ್ತು ದೀಪಿಕಾ ಪಡುಕೋಣೆ-ರಣ್ವೀರ್ ಸಿಂಗ್ ಅವರಂತೆಯೇ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಕೂಡ ರಾಯಲ್ ವೆಡ್ಡಿಂಗ್ ನಡೆಸಲಿದ್ದಾರೆ. ಕೋಟೆಯೊಂದರಲ್ಲಿ ರಾಜಮನೆತನದ ಶೈಲಿಯಲ್ಲಿ ಮದುವೆ ನಡೆಯಲಿದೆ. ಪೋರ್ಟಲ್ ಒಂದರ ವರದಿ ಪ್ರಕಾರ ಸಿದ್ಧಾರ್ಥ್ ಮತ್ತು ಕಿಯಾರಾ ಜೈಸಲ್ಮೇರ್ ಪ್ಯಾಲೇಸ್ ಹೋಟೆಲ್‌ನಲ್ಲಿ ವಿವಾಹವಾಗಲಿದ್ದಾರೆ ಎಂದು ತಿಳಿದು ಬಂದಿದೆ. ಫೆಬ್ರುವರಿ 3ರಿಂದಲೇ ಭದ್ರತೆ ವ್ಯವಸ್ಥೆ ಮಾಡಲಾಗುವುದು ಎಂಬುವುದಾಗಿ ತಿಳಿದು ಬಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News