ಸಾರಾ ಜೊತೆಗಿನ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತನಾಡಿದ ಶುಭಮನ್ ಗಿಲ್!

Shubman Gill On Dating Sara Ali Khan: ಭಾರತೀಯ ಕ್ರಿಕೆಟಿಗ ಶುಭಮನ್ ಗಿಲ್ ಅವರು ತಮ್ಮ ಕ್ರೀಡೆಗಿಂತ ಹೆಚ್ಚಾಗಿ ನಟಿ ಸಾರಾ ಅಲಿ ಖಾನ್ ಅವರೊಂದಿಗೆ ಡೇಟಿಂಗ್ ವಿಚಾರವಾಗಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಸುದ್ದಿಯಲ್ಲಿದ್ದಾರೆ. ವಾಸ್ತವವಾಗಿ ಸಾರಾ ಅಲಿ ಖಾನ್ ಮತ್ತು ಶುಭಮನ್ ಗಿಲ್ ಅವರ ಸಂಬಂಧವು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ. ಇಬ್ಬರೂ ರಹಸ್ಯವಾಗಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳಿವೆ.   

Written by - Chetana Devarmani | Last Updated : Nov 15, 2022, 04:29 PM IST
  • ಭಾರತೀಯ ಕ್ರಿಕೆಟಿಗ ಶುಭಮನ್ ಗಿಲ್
  • ಬಾಲಿವುಡ್‌ ನಟಿ ಸಾರಾ ಅಲಿ ಖಾನ್
  • ಸಾರಾ ಜೊತೆಗಿನ ಸಂಬಂಧದ ಬಗ್ಗೆ ಮಾತನಾಡಿದ ಶುಭಮನ್!
ಸಾರಾ ಜೊತೆಗಿನ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತನಾಡಿದ ಶುಭಮನ್ ಗಿಲ್! title=
ಶುಭಮನ್

Shubman Gill On Dating Sara Ali Khan: ಭಾರತೀಯ ಕ್ರಿಕೆಟಿಗ ಶುಭಮನ್ ಗಿಲ್ ಅವರು ತಮ್ಮ ಕ್ರೀಡೆಗಿಂತ ಹೆಚ್ಚಾಗಿ ನಟಿ ಸಾರಾ ಅಲಿ ಖಾನ್ ಅವರೊಂದಿಗೆ ಡೇಟಿಂಗ್ ವಿಚಾರವಾಗಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಸುದ್ದಿಯಲ್ಲಿದ್ದಾರೆ. ವಾಸ್ತವವಾಗಿ ಸಾರಾ ಅಲಿ ಖಾನ್ ಮತ್ತು ಶುಭಮನ್ ಗಿಲ್ ಅವರ ಸಂಬಂಧವು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ. ಇಬ್ಬರೂ ರಹಸ್ಯವಾಗಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳಿವೆ. ಆದರೂ ಇಬ್ಬರೂ ಈ ಸಂಬಂಧದ ಬಗ್ಗೆ ಇನ್ನೂ ಬಹಿರಂಗವಾಗಿ ಮಾತನಾಡಿಲ್ಲ. ಕೆಲವು ತಿಂಗಳ ಹಿಂದೆ, ಶುಭಮನ್ ಮತ್ತು ಸಾರಾ ಅವರ ವಿಡಿಯೋ ವೈರಲ್ ಆಗಿತ್ತು, ಇದರಲ್ಲಿ ಇಬ್ಬರೂ ಒಟ್ಟಿಗೆ ಡಿನ್ನರ್ ಮಾಡುತ್ತಿರುವುದನ್ನು ಕಾಣಬಹುದು. ಹೀಗಿರುವಾಗ ಇದೀಗ ಸ್ವತಃ ಶುಭಮನ್ ಅವರೇ ಸಾರಾ ಜೊತೆಗಿನ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದು, ಅವರು ಹೇಳಿದ್ದೆಲ್ಲ ಬೆರಗು ಮೂಡಿಸಿದೆ. 

ಇದನ್ನೂ ಓದಿ : ಕತ್ರಿನಾ ಕೈಫ್ ನಿಜವಾಗಲೂ ಗರ್ಭಿಣಿಯೇ? ಇಲ್ಲಿದೆ ಅಸಲಿ ಸತ್ಯ!

ಇತ್ತೀಚೆಗೆ, ಕ್ರಿಕೆಟಿಗ ಶುಭಮನ್ ಗಿಲ್ ಪ್ರೀತಿ ಸಿಮೋಸ್ ಮತ್ತು ನೀತಿ ಸಿಮೋಸ್ ಅವರ ಟಾಕ್ ಶೋ ದಿಲ್ ದಿಯಾನ್ ಗಲ್ಲಾಗೆ ತೆರಳಿದರು. ಈ ಸಮಯದಲ್ಲಿ ಶುಭಮನ್ ಅವರಿಗೆ ಸಾರಾ ಜೊತೆಗಿನ ಸಂಬಂಧದ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳಲಾಯಿತು. ಈ ಸಮಯದಲ್ಲಿ ಬಾಲಿವುಡ್‌ನ ಫಿಟೆಸ್ಟ್ ಹೀರೋಯಿನ್ ಯಾರು ಎಂದು ಕಾರ್ಯಕ್ರಮದಲ್ಲಿ ಶುಭಮಾನ್ ಗಿಲ್ ಅವರನ್ನು ಕೇಳಲಾಯಿತು, ಅದಕ್ಕೆ ಕ್ರಿಕೆಟಿಗ ಸಾರಾ ಅಲಿ ಖಾನ್ ಎಂದು ಹೇಳಿದರು. ಇದಾದ ನಂತರ, ಗಿಲ್ ಮತ್ತು ಸಾರಾ ಡೇಟಿಂಗ್ ಮಾಡುತ್ತಿದ್ದೀರಾ ಎಂದು ಶುಬ್‌ಮನ್ ಅವರನ್ನು ಕೇಳಿದರು, ಅದಕ್ಕೆ ಅವರು, 'ಬಹುಶಃ...' ಎಂದು ಹೇಳಿದರು.

ಪ್ರೀತಿ ಸಿಮೋಸ್ ಮತ್ತು ನಿತಿ ಸಿಮೋಸ್ ನಂತರ ಕ್ರಿಕೆಟಿಗ ಶುಬ್‌ಮನ್ ಗಿಲ್‌ಗೆ ಸಂಪೂರ್ಣ ಸತ್ಯವನ್ನು ಹೇಳುವಂತೆ ಕೇಳಿದರು, ನಂತರ ಶುಭಮನ್ ತಮಾಷೆಯಾಗಿ, ಇರಬಹುದು ಅಥವಾ ಇಲ್ಲದಿರಬಹುದು ಎಂದರು. ಇಂತಹ ಪರಿಸ್ಥಿತಿಯಲ್ಲಿ ಶುಭಮನ್ ಅವರು ಸಾರಾ ಜೊತೆಗಿನ ಸಂಬಂಧವನ್ನು ಸನ್ನೆಗಳಲ್ಲಿ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ನಟಿ ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕು. ಸಾರಾ ಅಲಿ ಖಾನ್‌ಗಿಂತ ಮೊದಲು ಶುಭ್‌ಮಾನ್ ಗಿಲ್ ಅವರ ಹೆಸರು ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್‌ ಜೊತೆಗೆ ಕೇಳಿ ಬಂದಿತ್ತು. 

ಇದನ್ನೂ ಓದಿ : ನಿರ್ಮಾಣದ ಜೊತೆಗೆ ನಟನೆಗೂ ಧೋನಿ ಎಂಟ್ರಿ! ದಳಪತಿ ವಿಜಯ್ ಚಿತ್ರದಲ್ಲಿ ಕೂಲ್ ಕ್ಯಾಪ್ಟನ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News