Shriya Saran: ‘ಕಬ್ಜ’ದಲ್ಲಿ ಮಹಾರಾಣಿಯಂತೆ ಕಂಗೊಳಿಸಿದ ಶ್ರಿಯಾ ಶರಣ್ ಕಾಸ್ಟ್ಯೂಮ್ ಹೇಗಿತ್ತು ಗೊತ್ತಾ?

‘ಕಬ್ಜ’ ಸಿನಿಮಾದಲ್ಲಿ ಪ್ರತಿಯೊಬ್ಬ ಕಲಾವಿದರು ಧರಿಸಿದ ಕಾಸ್ಟ್ಯೂಮ್​ಗಳ ಹಿಂದೆ ಒಂದೊಂದು ಕಥೆಯಿದೆ. ಅದರಲ್ಲೂ ನಾಯಕಿ ಶ್ರಿಯಾ ಶರಣ್ ಪಾತ್ರದ ವೈಭವಂತೂ ಕಣ್ಣು ಕುಕ್ಕುವಂತಿದೆ. ಈ ಹಿಂದಿನ ಸಿನಿಮಾಗಳಲ್ಲಿ ಪ್ರೇಕ್ಷಕರು ನೋಡಿದ ಶ್ರಿಯಾನೇ ಬೇರೆ, ‘ಕಬ್ಜ’ ಚಿತ್ರದಲ್ಲಿ ಕಾಣಿಸುವ ಶ್ರಿಯಾನೇ ಬೇರೆ ಅನ್ನೋವಷ್ಟರಮಟ್ಟಿಗೆ ಅವರ ಗೆಟಪ್​ ಬದಲಾಗಿದೆ. ‘ಕಬ್ಜ’ದಲ್ಲಿ ಅವರು ಧರಿಸಿದ ಪ್ರತಿ ಬಟ್ಟೆ, ಪ್ರತಿ ಆಭರಣ ಕೂಡ ವೆರಿ ವೆರಿ ಸ್ಪೆಷಲ್​!

Written by - YASHODHA POOJARI | Edited by - Puttaraj K Alur | Last Updated : Mar 19, 2023, 04:20 PM IST
  • ‘ಕಬ್ಜ’ದಲ್ಲಿ ಅದ್ದೂರಿ ಕಾಸ್ಟ್ಯೂಮ್‍ನಲ್ಲಿ ಮಹಾರಾಣಿಯಂತೆ ಕಂಗೊಳಿಸಿದ ಶ್ರಿಯಾ ಶರಣ್
  • ರೆಟ್ರೋ ಕಾಲದ ರಾಯಲ್​ ಫ್ಯಾಮಿಲಿಯ ಹೆಣ್ಣು ಮಗಳಾಗಿ ಮಿಂಚಿದ ಶ್ರಿಯಾ ಶರಣ್
  • ಆ ಕಲ್ಪನೆಗೆ ಜೀವ ಬರುವಂತೆ ಶ್ರಮಿಸಿರುವುದು ಕಾಸ್ಟ್ಯೂಮ್​ ಡಿಸೈನರ್​ ಸಿತಾರಾ
Shriya Saran: ‘ಕಬ್ಜ’ದಲ್ಲಿ ಮಹಾರಾಣಿಯಂತೆ ಕಂಗೊಳಿಸಿದ ಶ್ರಿಯಾ ಶರಣ್ ಕಾಸ್ಟ್ಯೂಮ್ ಹೇಗಿತ್ತು ಗೊತ್ತಾ? title=
‘ಕಬ್ಜ’ದಲ್ಲಿ ನಟಿ ಶ್ರಿಯಾ ಶರಣ್

ಬೆಂಗಳೂರು: ‘ಕಬ್ಜ’ ಸಿನಿಮಾದಲ್ಲಿ ಪ್ರತಿಯೊಬ್ಬ ಕಲಾವಿದರು ಧರಿಸಿದ ಕಾಸ್ಟ್ಯೂಮ್​ಗಳ ಹಿಂದೆ ಒಂದೊಂದು ಕಥೆಯಿದೆ. ಅದರಲ್ಲೂ ನಾಯಕಿ ಶ್ರಿಯಾ ಶರಣ್ ಪಾತ್ರದ ವೈಭವಂತೂ ಕಣ್ಣು ಕುಕ್ಕುವಂತಿದೆ. ಈ ಹಿಂದಿನ ಸಿನಿಮಾಗಳಲ್ಲಿ ಪ್ರೇಕ್ಷಕರು ನೋಡಿದ ಶ್ರಿಯಾನೇ ಬೇರೆ, ‘ಕಬ್ಜ’ ಚಿತ್ರದಲ್ಲಿ ಕಾಣಿಸುವ ಶ್ರಿಯಾನೇ ಬೇರೆ ಅನ್ನೋವಷ್ಟರಮಟ್ಟಿಗೆ ಅವರ ಗೆಟಪ್​ ಬದಲಾಗಿದೆ. ‘ಕಬ್ಜ’ದಲ್ಲಿ ಅವರು ಧರಿಸಿದ ಪ್ರತಿ ಬಟ್ಟೆ, ಪ್ರತಿ ಆಭರಣ ಕೂಡ ವೆರಿ ವೆರಿ ಸ್ಪೆಷಲ್​!

‘ಕಬ್ಜ’ ಚಿತ್ರದಿಂದ ಮೊದಲ ಬಾರಿ ಶ್ರಿಯಾ ಶರಣ್​ ಅವರ ಫಸ್ಟ್​ ಲುಕ್​ ಬಿಡುಗಡೆ ಆದಾಗ ಎಲ್ಲರ ಗಮನ ಸೆಳೆದಿದ್ದೇ ಅವರ ಕಾಸ್ಟ್ಯೂಮ್​. ಸಿಂಹಾಸನದ ಮೇಲೆ ಮಹಾರಾಣಿಯಂತೆ ಕುಳಿತ ಅವರನ್ನು ನೋಡೋಕೆ ಎರಡು ಕಣ್ಣು ಸಾಲದಾಯಿತು. ಇದು ರೆಟ್ರೋ ಕಾಲದ ರಾಯಲ್​ ಫ್ಯಾಮಿಲಿಯ ಹೆಣ್ಣು ಮಗಳ ಪಾತ್ರವೆಂದು ಜನರಿಗೆ ಗೊತ್ತಾಯ್ತು. ಅಂತಹ ರಾಯಲ್​ ಲುಕ್​ನ ಕಲ್ಪನೆ ಆರ್.ಚಂದ್ರು ಅವರದ್ದು. ಆ ಕಲ್ಪನೆಗೆ ಜೀವ ಬರುವಂತೆ ಶ್ರಮಿಸಿರುವುದು ಕಾಸ್ಟ್ಯೂಮ್​ ಡಿಸೈನರ್​ ಸಿತಾರಾ.

ಈಗಾಗಲೇ ಗೊತ್ತಿರುವಂತೆ ಇದು ರೆಟ್ರೋ ಕಾಲದ ಕಥೆ ಇರುವ ಸಿನಿಮಾ. ಎಲ್ಲಾ ಪಾತ್ರಗಳು ಕೂಡ ಹಾಗೆಯೇ ಕಾಣಬೇಕು. ಶ್ರಿಯಾ ಶರಣ್​ ಅವರ ಲುಕ್​ಗಾಗಿ ಕಾಸ್ಟ್ಯೂಮ್​ ಡಿಸೈನರ್​ ಸಿತಾರಾ ಅವರು ಸಾಕಷ್ಟು ರಿಸರ್ಚ್​ ನಡೆಸಿದ್ದರು. ತುಂಬಾ ಕಾಳಜಿ ವಹಿಸಿ, ಹಲವಾರು ದಿನ ಸಮಯ ತೆಗೆದುಕೊಂಡು ಆ ಪಾತ್ರಕ್ಕೆ ಬೇಕಾದ ಎಲ್ಲಾ ಕಾಸ್ಟ್ಯೂಮ್​ ರೆಡಿ ಮಾಡಿದ್ದರು. ಕಾಂಚಿವರಂ, ಮೈಸೂರು ಸಿಲ್ಕ್​, ಬನಾರಸಿ ಸೀರೆಗಳನ್ನು ತೆಗೆದುಕೊಂಡು ಅವುಗಳಿಗೆ ಹೊಸ ರೂಪ ನೀಡಿದ್ದರು. ಇಡೀ ದೇಶದಲ್ಲಿ ಸಿಗುವ ದಿ ಬೆಸ್ಟ್​ ಕ್ವಾಲಿಟಿಯ ಬಟ್ಟೆಗಳಿಂದ ಶ್ರಿಯಾರ ಕಾಸ್ಟ್ಯೂಮ್​ ಡಿಸೈನ್​ ಮಾಡಿದ್ರು. ಪ್ರತಿ ಲೆಹಂಗಾಗೆ 7-8 ದಿನಗಳ ಕಾಲ ಸಮಯ ತೆಗೆದುಕೊಂಡು ಕಸೂತಿ ಹಾಕಲಾಯಿತು.

ಇದನ್ನೂ ಓದಿ: Kabzaa Collection: ಎರಡೇ ದಿನಕ್ಕೆ 100 ಕೋಟಿ ಕ್ಲಬ್‌ ಸೇರಿದ ‘ಕಬ್ಜʼ

ಇನ್ನು ಶ್ರಿಯಾ ಶರಣ್​ ಧರಿಸಿದ ಆಭರಣಗಳಂತೂ ಸಿಕ್ಕಾಪಟ್ಟೆ ದುಬಾರಿ ಮತ್ತು ಅಪರೂಪದ್ದು. ಪ್ಯೂರ್​ ಗೋಲ್ಡ್​ ಮತ್ತು ಡೈಮಂಡ್​ ಆಭರಣಗಳನ್ನ ಧರಿಸಿ ಶ್ರಿಯಾ ಆ್ಯಕ್ಟ್​ ಮಾಡಿದ್ದಾರೆ. 2 ಪ್ರತಿಷ್ಠಿತ ಜ್ಯೂವೆಲ್ಲರಿ ಬ್ರ್ಯಾಂಡ್​ಗಳ ಜೊತೆ ಕೈಜೋಡಿಸಿ ಅತ್ಯಾಕರ್ಷಕವಾದ ಆಭರಣಗಳನ್ನು ಸೆಲೆಕ್ಟ್​ ಮಾಡಲಾಯಿತು. ಇದನ್ನೆಲ್ಲ ಧರಿಸಿದ ಶ್ರಿಯಾ ಅವರು ಕ್ಯಾಮೆರಾ ಮುಂದೆ ಬಂದು ನಿಂತಾಗ ಥೇಟ್​ ಮಹಾರಾಣಿಯಂತೆ ಕಾಣಿಸಿದ್ದರು.

‘ನಮಾಮಿ ನಮಾಮಿ’ ಹಾಡು ರಿಲೀಸ್​ ಆದಾಗ ದೇವಲೋಕದ ಅಪ್ಸರೆಯೇ ಧರೆಗಿಳಿದು ಬಂದು ಕುಣಿಯುತ್ತಿರುವಂತೆ ಅನಿಸ್ತು. ಶ್ರಿಯಾ ಶರಣ್​ ಅವರು ಆ ರೀತಿ ಕಾಣೋಕೆ ಕಾರಣ ಆಗಿದ್ದೇ ಕಾಸ್ಟ್ಯೂಮ್​ ಡಿಸೈನ್​. ಹಾಡು ನೋಡಿದ ಹೆಣ್ಮಕ್ಕಳೆಲ್ಲ ಲೆಹಂಗಾ ಮತ್ತು ಆಭರಣದ ವೈಭವ ಕಂಡು ವಾವ್ಹ್​ ಎಂದಿದ್ದಾರೆ. ಆ ವಿಚಾರದಲ್ಲಿ ನಿರ್ದೇಶಕ ಆರ್​.ಚಂದ್ರು ಅವರ ವಿಷನ್​ ಚೆನ್ನಾಗಿ ಕೆಲಸ ಮಾಡಿದೆ.

‘ಕಬ್ಜ’ ಚಿತ್ರದಲ್ಲಿ ಯಾವ ಪಾತ್ರ ಹೇಗೆ ಕಾಣಬೇಕು ಎಂಬುದರ ಸ್ಪಷ್ಟ ಕಲ್ಪನೆ ಆರ್​.ಚಂದ್ರು ಅವರಿಗಿತ್ತು. ಆ ಕಲ್ಪನೆಗೆ ಅನುಗುಣವಾಗಿ ಇಡೀ ತಂಡದಿಂದ ಕೆಲಸ ಮಾಡಿಸುವ ಚಾಕಚಕ್ಯತೆ ಕೂಡ ಅವರಿಗಿದೆ. ಆ ಕಾರಣದಿಂದಲೇ ಕಾಸ್ಟ್ಯೂಮ್​ ಡಿಸೈನ್​ ಟೀಮ್​ನವರು ಇಷ್ಟು ಅದ್ಭುತವಾಗಿ ರಿಸಲ್ಟ್​ ನೀಡಿದ್ರು. ಇಡೀ ಸಿನಿಮಾದಲ್ಲಿ ಶ್ರಿಯಾ ಶರಣ್​ ಅವರು ಈ ರೀತಿಯ ಹಲವು ಕಾಸ್ಟ್ಯೂಮ್​ ಧರಿಸಿದ್ದಾರೆ. ದೊಡ್ಡ ಪರದೆಯಲ್ಲಿ ಅವರನ್ನು ನೋಡೋದೇ ಒಂದು ಸಂಭ್ರಮ. ಇನ್ನು ನವಾಮಿ ಹಾಡು ಹೆಚ್ಚಾಗಿ ಮಹಿಳಾ ಪ್ರೇಕ್ಷಕರನ್ನು ಸೆಳೆದಿದ್ದು, ಮೊದಲ ದಿನವೇ ಮಹಿಳಾ ಪ್ರೇಕ್ಷಕರು ಚಿತ್ರಮಂದಿರದತ್ತ ಬರ್ತಿದ್ದಾರೆ ಅಂದ್ರೆ ಅದರಲ್ಲಿ ನವಾಮಿ ಹಾಡಿನ ಕೊಡುಗೆ ಕೂಡ ಸಾಕಷ್ಟಿದೆ...

ಇದನ್ನೂ ಓದಿ: Kabzaa : 50 ದೇಶ, 5 ಭಾಷೆ, 4000 ಸ್ಕ್ರೀನ್! ವಿಶ್ವದ ಮೂಲೆ‌ ಮೂಲೆಯಲ್ಲೂ ಕಬ್ಜ

ಥಿಯೇಟರ್‍ನಲ್ಲಿ ಕೂತ ಪ್ರೇಕ್ಷಕ ತಾನು 2023ರಲ್ಲಿ ಇದೀನಿ ಅನ್ನೋದನ್ನೇ ಮರೆತುಬಿಡ್ತಾನೆ. 1945ರ ನಂತರದ ಲೋಕ ಕಣ್ಣೆದುರು ಬರುತ್ತೆ. ಆ ರೀತಿ ಫೀಲ್​ ನೀಡೋಕೆ ಕಾಸ್ಟ್ಯೂಮ್​ಗಳು ಸಹ ಮುಖ್ಯ ಕಾರಣ ಆಗ್ತಾವೆ. ‘ರೆಟ್ರೋ ಸಿನಿಮಾ ಮಾಡಿದ್ರೆ ಹಿಂಗ್​ ಮಾಡ್ಬೇಕಪ್ಪಾ’ ಅನ್ನೋ ಹಾಗೆ ‘ಕಬ್ಜ’ ಚಿತ್ರ ಒಂದು ಸ್ಟ್ಯಾಂಡರ್ಡ್​ ಸೆಟ್​ ಮಾಡಿದೆ ಅಂದ್ರೆ ಅದು ಅತಿಶಯೋಕ್ತಿ ಅಲ್ವೇ ಅಲ್ಲ..

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News