ಸದ್ಗುರು ಸಿದ್ಧಾರೂಢರ ದರ್ಶನ ಪಡೆದ ಶಿವಣ್ಣ : ಹುಬ್ಬಳ್ಳಿಯಲ್ಲಿ ʼವೇದʼ ಪ್ರೀ ರಿಲಿಸ್

ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಸಿನಿಮಾ ʼವೇದʼ ಪ್ರಚಾರದಲ್ಲಿ ಡಾ. ಶಿವರಾಜ್‌ ಕುಮಾರ್‌ ಅವರು ಬ್ಯುಸಿಯಾಗಿದ್ದಾರೆ. ಮೊನ್ನೆ ತಾನೆ ಮಂತ್ರಾಲಯಕ್ಕೆ ಭೇಟಿ ನೀಡಿ ಗುರು ರಾಘವೇಂದ್ರ ಸ್ವಾಮೀಯ ಆರ್ಶಿವಾದ ಪಡೆದಿದ್ದರು. ಇಂದು ಹುಬ್ಬಳ್ಳಿಗೆ ಬೇಟಿ ನೀಡಿದ ಶಿವಣ್ಣ ಗುರು ಸಿದ್ಧಾರೂಢರ ದರ್ಶನ ಪಡೆದರು. ಅಲ್ಲದೆ, ಹುಬ್ಬಳ್ಳಿ ಅಂದ್ರೆ ತಮಗೆ ಲಕ್ಕಿ ಪ್ಲೇಸ್‌ ಅಂತ ಹೇಳಿದರು.

Written by - Krishna N K | Last Updated : Dec 14, 2022, 05:35 PM IST
  • ʼವೇದʼ ಪ್ರಚಾರದಲ್ಲಿ ಡಾ. ಶಿವರಾಜ್‌ ಕುಮಾರ್‌ ಅವರು ಬ್ಯುಸಿ
  • ಹುಬ್ಬಳ್ಳಿಗೆ ಬೇಟಿ ನೀಡಿದ ಶಿವಣ್ಣ
  • ಸಿದ್ಧಾರೂಢರ ದರ್ಶನ ಪಡೆದ ಹ್ಯಾಟ್ರೀಕ್‌ ಹೀರೋ
ಸದ್ಗುರು ಸಿದ್ಧಾರೂಢರ ದರ್ಶನ ಪಡೆದ ಶಿವಣ್ಣ : ಹುಬ್ಬಳ್ಳಿಯಲ್ಲಿ ʼವೇದʼ ಪ್ರೀ ರಿಲಿಸ್ title=

ಹುಬ್ಬಳ್ಳಿ : ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಸಿನಿಮಾ ʼವೇದʼ ಪ್ರಚಾರದಲ್ಲಿ ಡಾ. ಶಿವರಾಜ್‌ ಕುಮಾರ್‌ ಅವರು ಬ್ಯುಸಿಯಾಗಿದ್ದಾರೆ. ಮೊನ್ನೆ ತಾನೆ ಮಂತ್ರಾಲಯಕ್ಕೆ ಭೇಟಿ ನೀಡಿ ಗುರು ರಾಘವೇಂದ್ರ ಸ್ವಾಮೀಯ ಆರ್ಶಿವಾದ ಪಡೆದಿದ್ದರು. ಇಂದು ಹುಬ್ಬಳ್ಳಿಗೆ ಬೇಟಿ ನೀಡಿದ ಶಿವಣ್ಣ ಗುರು ಸಿದ್ಧಾರೂಢರ ದರ್ಶನ ಪಡೆದರು. ಅಲ್ಲದೆ, ಹುಬ್ಬಳ್ಳಿ ಅಂದ್ರೆ ತಮಗೆ ಲಕ್ಕಿ ಪ್ಲೇಸ್‌ ಅಂತ ಹೇಳಿದರು.

ವೇದ ಸಿನೆಮಾ ಪ್ರೀ ರಿಲಿಸ್ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಶಿವಣ್ಣ, ವೇದ ಸಿನೆಮಾದಲ್ಲಿ ಎಂಟರ್ಟೇನ್ಮೆಂಟ್ ಜೊತೆಗೆ ಒಳ್ಳೆಯ ಸಂದೇಶ ಇದೆ. ವೇದ ಎಂದರೆ ಗ್ರಂಥ. ಈ ವೇದದಲ್ಲಿ ಪ್ರೀತಿ, ಬಾಳು, ಸಂತೋಷ ಹಾಗೂ ನಂಬಿಕೆ ಎನ್ನುವುದು ಇದೆ ಎಂದು ಹೇಳಿದರು. ಅಲ್ಲದೆ, ಕನ್ನಡ ಸಿನಿಮಾಗಳು ಪಾನ್ ಇಂಡಿಯಾ ಮೂವಿಗಳಾಗುತ್ತಿರುವುದು ಸಂತೋಷದ ವಿಷಯ ಎಂದು ಕಾಂತಾರ, ಕೆಜಿಎಫ್‌ ಸಕಸ್ಸ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ಓದಿ: Deepika padukone : ದೀಪಿಕಾ ʼಕೇಸರಿ ಬಿಕಿನಿʼ ಮೇಲೆ ನೆಟ್ಟಿಗರ ಕಣ್ಣು.. ʼಪಠಾಣ್‌ ಬಾಯ್ಕಾಟ್‌ʼ ಘೋಷಣೆ

ಅಲ್ಲದೆ, ಕಾಂತಾರಾ ಹಾಗೂ ಕೆಜಿಎಫ್ ಇಷ್ಟೊಂದು ಹಿಟ್ ಆಗುತ್ತವೆ ಎಂದು ಯಾರೂ ಅನ್ಕೊಂಡಿರಲಿಲ್ಲ. ಆ ರೀತಿ ಸ್ವಲ್ಪ ಡಿಫ್ರೆಂಟಾಗಿ ಸಿನೆಮಾ ಮಾಡಬೇಕು ಅಂದಾಗ್ಲೇ ಜನರಿಗೆ ಇಷ್ಟವಾಗುತ್ತದೆ ಅಂತ ಕಂಟೆಂಟ್ ಬಹಳ ಮುಖ್ಯ ಎಂದರು. ಅಲ್ಲದೆ, ನ್ಯಾಷುನಲ್‌ ಕ್ರಷ್‌ ರಷ್ಮಿಕಾ ಮಂದಣ್ಣಗೆ ಕನ್ನಡ ಸಿನೆಮಾದಲ್ಲಿ ಬ್ಯಾನ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಶಿವಣ್ಣ, ಅದು ನನಗೆ ಗೊತ್ತಿಲ್ಲ, ಸಿನೆಮಾ ಓಡುವ ಬಗ್ಗೆ ಮಾತ್ರ ನಾನು ನೊಡ್ತೇನೆ. ಬೇರೆ ವಿಷಯ ಬಗ್ಗೆ ಮಾತನಾಡಲ್ಲ ಎಂದರು.

ವೇದ ಸಿನಿಮಾದ ಬಗ್ಗೆ ಮಾತು ಮುಂದುವರೆಸಿದ ಅವರು, ಸದ್ಯ ತೆಲುಗು, ತಮಿಳಿಗೆ ವೇದ ಡಬ್ ಮಾಡಿದ್ದೇವೆ. ಡಬ್ಬಿಂಗ್‌ಗೆ ಈಗ ನಮ್ಮ ವಿರೋಧವಿಲ್ಲ, ಡಬ್ಬಿಂಗ್‌ನಿಂದ ನಮಗೆ ಲಾಭವಿದೆ. ಸದ್ಯಕ್ಕೆ ಕನ್ನಡ ಚಿತ್ರಗಳ ಬೆಳವಣಿಗೆಗೆ ಡಬ್ಬಿಂಗ್ ಪೂರಕವಾಗಿದೆ ಅಂತ ಹೇಳಿದರು. ಮಹದಾಯಿ ಕುರಿತು ಪ್ರತಿಕ್ರಿಯೆ ನೀಡಿ, ಮಹದಾಯಿಗೆ ನಮ್ಮ ಬೆಂಬಲ ಯಾವತ್ತೂ ಇರುತ್ತೆ, ಈ ಯೋಜನೆಯನ್ನು ಈಗಿರುವ ವ್ಯವಸ್ಥೆ, ಸರ್ಕಾರ ಜಾರಿಗೆ ತರಬೇಕು, ಸರ್ಕಾರ ಆದಷ್ಟು ಬೇಗ ಯೋಜನೆ ಜಾರಿ ಮಾಡಲಿ ಅನ್ನೋದು ನಮ್ಮ ಆಶಯ ಅಂತ ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News