Shivarajkumar cried : ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಮ್ಮನಗಲಿ ಹತ್ರತ್ರ 16 ತಿಂಗಳುಗಳು ಉರುಳಿವೆ.. ಅದರೆ ಅಪ್ಪು ನೆನಪು ಮಾತ್ರ ಇನ್ನು ಜೀವಂತವಾಗಿದೆ. ಅಪ್ಪು ಅಂದ್ರೆ ಇಂದಿಗೂ ಅದೇಷ್ಟೆ ಹೃದಯಗಳು ಕರಗಿ ನೀರಾಗ್ತವೆ. ಅದೇ ರೀತಿ ಈಗ ಪ್ರೀತಿಯ ತಮ್ಮನ ನೆನೆದು ಶಿವಣ್ಣ ಕಣ್ಣೀರಾಕಿದ್ದಾರೆ. ಅಷ್ಟಕ್ಕೂ ಶಿವಣ್ಣ ಅಪ್ಪುನ ನೆನದು ಕಣ್ಣಿರಾಕಿದ್ದು ಎಲ್ಲಿ ಮತ್ತು ಯಾಕೇ ಅಂತೀರ ಈ ಸ್ಟೋರಿ ನೋಡಿ.
ಪುನೀತ್ ರಾಜ್ ಕುಮಾರ್ ದೊಡ್ಮನೆಯ ಕೊನೆಯ ಮಗ. ತಮ್ಮನಾದ್ರು ಮಗುವಿನಂತೆ ಅಪ್ಪುನ ಹಾರೈಕೆ ಮಾಡ್ತಿದ್ರು ಶಿವಣ್ಣ ಮತ್ತು ರಾಘಣ್ಣ. ಅಲ್ಲದೆ ಅಪ್ಪು ಅಕಾಲಿಕ ಮರಣ ಶಿವಣ್ಣ ಮತ್ತು ರಾಘಣ್ಣನಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಿದ್ದು ಇಂದಿಗೂ ಅಪ್ಪು ನೆನಪಲ್ಲೇ ದಿನ ದೂಡ್ತಿದ್ದಾರೆ. ಅಲ್ಲದೆ ಅಪ್ಪುಗೆ ಸಂಭದಿಸಿದ ವಿಡಿಯೋಗಳ ನೋಡಿದ್ರೆ ಇಂದಿಗೂ ಕಣ್ಣೀರಾಕ್ತಾರೆ ಶಿವಣ್ಣ, ರಾಘಣ್ಣ. ತಮ್ಮನ ಕಳೆದು ಕೊಂಡ ನೋವು ದೊಡ್ಮನೆ ಮಕ್ಕಳಿಗೆ ಇನ್ನು ಕಾಡ್ತಿದ್ದು, ಶಿವಣ್ಣ ವೇದ ಸಿನಿಮಾದ ಪ್ರಿ ರಿಲೀಸ್ ಇವೆಂಟ್ ನಲ್ಲಿ ಅಪ್ಪು ಜರ್ನಿ ನೋಡಿ ಶಿವಣ್ಣ ಮತ್ತೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಇದನ್ನೂ ಓದಿ: Sanvi Sudeep : ತಮ್ಮ ಕ್ರಶ್ ಮದುವೆಯಾಗಿದ್ದಕ್ಕೆ ಸುದೀಪ್ ಮಗಳು ಸಾನ್ವಿ ಬೇಸರ!?
ಅರೆ ಶಿವಣ್ಣನ ವೇದ ಸಿನಿಮಾ ರಿಲೀಸ್ ಆಗಿ 50 ದಿನಗಳಾಗ್ತ ಬಂತು ಈಗ ಯಾವ ಇವೇಂಟ್ ಅಂತೀರ. ಶಿವಣ್ಣನ 125 ನೇ ಚಿತ್ರ ಕನ್ನಡದಲ್ಲಿ ಸೂಪರ್ ಹಿಟ್ ಆಗಿದ್ದು ಈಗ ಈ ಚಿತ್ರವನ್ನು ತೆಲುಗಿಗೆ ಡಬ್ ಮಾಡಿದ್ದು, ಫೆ.9ಕ್ಕೆಅದ್ದೂರಿಯಾಗಿ ರಿಲೀಸ್ಆಗ್ತಿದೆ. ಈಹಿನ್ನೆಲೆಯಲ್ಲಿ ನಿನ್ನೆ ಹೈದರಾಬಾದ್ ನಲ್ಲಿ ವೇದ ಚಿತ್ರದ ಪ್ರೀ ರಿಲೀಸ್ ಇವೆಂಟ್ ಮಾಡಲಾಗಿತ್ತು. ಇನ್ನು ಈ ಕಲರ್ ಫುಲ್ ಕಾರ್ಯಕ್ರಮಕ್ಕೆ ಟಾಲಿವುಡ್ ಸ್ಟಾರ್ ಬಾಲಯ್ಯ ಮುಖ್ಯ ಅತಿಥಿಯಾಗಿ ಬಂದು ವೇದ ಚಿತ್ರಕ್ಕೆ ಸಾಥ್ ನೀಡಿದ್ರು..ಇನ್ನು ಈ ಕಾರ್ಯಕ್ರಮದಲ್ಲಿ ಶಿವಣ್ಣನಿಗೆ ಅಪ್ಪು ನೆನಪು ಕಾಡಿದ್ದು ಅಪ್ಪುನ ವಿಡಿಯೋ ನೋಡ್ಯಿದಂತೆ ಶಿವಣ್ಣ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
That Brothers Bond ❤️🙏
Balayya Babai : Naa Thammudu ShivarajKumar 👏✨
Shivanna : Jai Balayya ✊🚩
Appu Boss Always With Us Shivanna 😓😭#ShivaRajKumar #NBK #NandamuriBalakrishna pic.twitter.com/afO0fv1pyi— Madhu Yuva Tarak ✊🚩 (@MadhPRKBOSSCult) February 8, 2023
ವೇದ ಚಿತ್ರದ ಪ್ರೀ ರಿಲೀಸ್ ಇವೆಂಟ್ ನಲ್ಲಿ ಪವರ್ ಸ್ಟಾರ್ಗೆ ನಮನ ಸಲ್ಲಿಸೋ ಸಲುವಾಗಿ ವಿಶೇಷವಾದ ವಿಟಿ ಪ್ಲೇ ಮಾಡಿದ್ದು, ಈ ವೇಳೆ ಶಿವಣ್ಣ ಅಪ್ಪುನ ನೋಡಿ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಈ ವೇಳೆ ಶಿವಣ್ಣನ ಪಕ್ಕದಲ್ಲೇ ಕೂತಿದ್ದ ಬಾಲಯ್ಯಹಾಗೂ ಗೀತ ಶಿವರಾಜ್ ಕುಮಾರ್ ಶಿವಣ್ಣನ ಸಂತೈಸಿದ್ರು. ತಮ್ಮನ ನೆನೆದು ಶಿವಣ್ಣ ಕಣ್ಣೀರಿಟ್ಟಿದ್ದಾರೆ. ಇನ್ನು ಈ ದೃಶ್ಯ ಕಲ್ಲು ಹೃದಯವೂ ಕರಗೊವಂತಿದ್ದು, ಯಾವ ಶತ್ರುವಿಗೂ ಇಂತ ಶಿಕ್ಷೆ ಬೇಡ ಅಂತ ಪರಮಾತ್ಮನಲ್ಲಿ ಪ್ರಾರ್ಥಿಸ್ತಿದ್ದಾರೆ ದೊಡ್ಮನೆ ಅಭಿಮಾನಿ ದೇವರುಗಳು.
ಇನ್ನು ಶಿವಣ್ಣ ತಮ್ಮನ ನೆನದು ಕಣ್ಣೀರಾಕಿರೋದು ಇದೇ ಮೊದಲೇನಲ್ಲ. ಜೇಮ್ಸ್ ಚಿತ್ರ ರಿಲೀಸ್ ಆದ ವೇಳೆ ಸಿನಿಮಾನೋಡಿ ಶಿವಣ್ಣ ಅತ್ತಿದ್ರು. ಅಲ್ಲದೆ ಸಾಕಷ್ಟು ವೇದಿಕೆಯಲ್ಲಿ ಶಿವಣ್ಣ ಅಪ್ಪು ನೆನೆದು ಭಾವುಕರಾಗಿದ್ರು. ಮೀಗ ಅದೇ ರೀತಿ ತೆಲುಗು ವೇದ ಚಿತ್ರದ ಪ್ರೀ ರಿಲೀಸ್ ಇವೆಂಟ್ನಲ್ಲಿ ತಮ್ಮನ ನೆನೆದಿದ್ದಾರೆ. ಜೊತೆಗೆ ಕಣ್ಣೀರನ್ನು ಹಾಕಿ ಅಪ್ಪು ನೆನಪಿನಲ್ಲೇ ವೇದಿಕೆ ಮೇಲೆ ಮಾತನಾಡಿದ್ದಾರೆ.. ಜೊತೆಗೆ ಅಲ್ಲು ಅರ್ಜುನ್ ಹಾಗೂ ಜೂ ಎನ್ ಟಿಅರ್ ಅಪ್ಪುರೀತಿ ಡ್ಯಾನ್ಸ್ ಮಾಡ್ತಾರೆ. ಅದರಲ್ಲೂ ಅಲ್ಲು ಅರ್ಜುನ್ ಡ್ಯಾನ್ಸ್ ನೋಡಿದ್ರೆ ಅಪ್ಪು ಡ್ಯಾನ್ಸ್ ನೋಡಿದಂತೆ ಆಗುತ್ತೆ ಎಂದು ಅಪ್ಪು ನೆನಪು ಗಳ ಮೆಲುಕುಹಾಕಿದ್ದಾರೆ ಶಿವಣ್ಣ.
ಇನ್ನು ಶಿವರಾಜ್ ಕುಮಾರ್ ಅಭಿನಯದ ವೇದ ಚಿತ್ರ ತೆಲುಗು ಭಾಷೆಯಲ್ಲಿ ಶಿವ ವೇದ ಹೆಸರಿನಲ್ಲಿ ರಿಲೀಸ್ ಆಗುತ್ತಿದೆ. ಫೆಬ್ರವರಿ-09 ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿದೆ. ಕನ್ನಡದಲ್ಲಿ ಈಗಾಗಲೇ ಜನಮೆಚ್ಚುಗೆ ಗಳಿಸಿ 50 ದಿನಗಳತ್ತ ಮುನ್ನುಗ್ಗುತ್ತಿರುವ ವೇದ ತೆಲುಗು ನಾಡಲ್ಲಿ ಯಾವ ರೀತಿ ಮೋಡಿ ಮಾಡುತ್ತೆ ಕಾದು ನೋಡಬೇಕು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.