ಶಿವಣ್ಣ, ಉಪ್ಪಿ, ರಾಜ್ ಬಿಶೆಟ್ಟಿ- ಮೂವರು ಮಾಸ್ ನಾಯಕರುಗಳು ಒಂದಾದಾಗ...!

ಮೂವರು ಮಾಸ್ ನಾಯಕರಿಗೆ ಅರ್ಜುನ್ ಜನ್ಯ ಆಕ್ಷನ್ ಕಟ್  ಹೇಳೋ ಮೂಲಕ ಸ್ಯಾಂಡಲ್ವುಡ್ನಲ್ಲಿ ಭರ್ಜರಿ ಸೌಂಡ್ ಆಗೋದು ಫುಲ್ ಪಕ್ಕಾ ಆಗಿದೆ. ಈ ಸಿನಿಮಾಗೆ ಗಾಳಿಪಟ2 ಸಕ್ಸಸ್ ಖುಷಿಯಲ್ಲಿರೋ ರಮೇಶ್ ರೆಡ್ಡಿ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.

Written by - YASHODHA POOJARI | Edited by - Yashaswini V | Last Updated : Oct 20, 2022, 03:17 PM IST
  • ಇಡೀ ಚಿತ್ರರಂಗವೇ ತಿರುಗಿ ನೋಡೋ ಲೆವೆಲ್ಲಿಗೆ ನಮ್ಮ ಕನ್ನಡ ಇಂಡಸ್ಟ್ರಿ ಬೆಳೆದು ನಿಂತಿದೆ.
  • ಯಾವ ಸಿನಿಮಾ ಚಂದನವನದಲ್ಲಿ ರಿಲೀಸ್ ಆಗುತ್ತೆ ಅಂತ ಎಲ್ಲಾರು ಕಾದು ನೋಡೋ ಹಾಗೇ ಶೈನ್ ಆಗುತ್ತಿದೆ ನಮ್ಮ ಕನ್ನಡ ಮಣ್ಣಿನ ಸಿನಿಮಾಗಳು.
  • ಇದೀಗ ಒಂದೇ ಸಿನಿಮಾದಲ್ಲಿ ಶಿವಣ್ಣ, ಉಪೇಂದ್ರ, ರಾಜ್ ಬಿ ಶೆಟ್ಟಿ ಕಾಣಿಸಿಕೊಳ್ಳೋದ್ರಾ ಮೂಲಕ ಬಿಗ್ ಮ್ಯಾಜಿಕ್ ಆಗೋ ಮುನ್ಸೂಚನೆ ಸಿಕ್ಕಿದೆ
ಶಿವಣ್ಣ, ಉಪ್ಪಿ, ರಾಜ್ ಬಿಶೆಟ್ಟಿ- ಮೂವರು ಮಾಸ್ ನಾಯಕರುಗಳು ಒಂದಾದಾಗ...! title=
ಶಿವಣ್ಣ, ಉಪ್ಪಿ, ರಾಜ್ ಬಿಶೆಟ್ಟಿ- ಮೂವರು ಮಾಸ್ ನಾಯಕರುಗಳು ಒಂದಾದಾಗ...!

ಬೆಂಗಳೂರು: ಮಾಸ್‌ಗೆ ಎವರ್ ಗ್ರೀನ್ ಸಿಂಬಲ್ ಸೆಂಚುರಿ ಸ್ಟಾರ್  ಅಂದ್ರೆ ಅದು ಶಿವಣ್ಣ. ಮಾಸ್‌ಗೆ  ‘ಓಂ’ಕಾರ ಹಾಕಿದವರು ಅಂದ್ರೆ ಅದು ಉಪೇಂದ್ರ.  ಇಂದಿನ  ಯುವ ಪೀಳಿಗೆಯ ಮಾಸ್ ಐಕಾನ್ ಅಂದ್ರೆ ಅದು ರಾಜ್ ಬಿಶೆಟ್ಟಿ. ಒಂದೇ ಚಿತ್ರದಲ್ಲಿ ಈಗ ಈ ಮೂವರು ಮಾಸ್ ನಾಯಕರು ಕಾಣಿಸಿಕೊಂಡ್ರೆ ಆಗೋದು ಮಾತ್ರ ಇತಿಹಾಸ.

ಮೂವರು ಮಾಸ್ ನಾಯಕರಿಗೆ ಅರ್ಜುನ್ ಜನ್ಯ ಆಕ್ಷನ್ ಕಟ್  ಹೇಳೋ ಮೂಲಕ ಸ್ಯಾಂಡಲ್ವುಡ್ನಲ್ಲಿ ಭರ್ಜರಿ ಸೌಂಡ್ ಆಗೋದು ಫುಲ್ ಪಕ್ಕಾ ಆಗಿದೆ. ಈ ಸಿನಿಮಾಗೆ ಗಾಳಿಪಟ2 ಸಕ್ಸಸ್ ಖುಷಿಯಲ್ಲಿರೋ ರಮೇಶ್ ರೆಡ್ಡಿ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.

ಇದನ್ನೂ ಓದಿ- Kantara Bhutakola: ನಟ ಚೇತನ್​ಗೆ ರಿಯಲ್ ಸ್ಟಾರ್ ಉಪೇಂದ್ರ ಖಡಕ್ ರಿಯಾಕ್ಷನ್

ಇಡೀ ಚಿತ್ರರಂಗವೇ ತಿರುಗಿ ನೋಡೋ ಲೆವೆಲ್ಲಿಗೆ ನಮ್ಮ ಕನ್ನಡ ಇಂಡಸ್ಟ್ರಿ ಬೆಳೆದು ನಿಂತಿದೆ. ಯಾವ ಸಿನಿಮಾ ಚಂದನವನದಲ್ಲಿ ರಿಲೀಸ್ ಆಗುತ್ತೆ ಅಂತ ಎಲ್ಲಾರು ಕಾದು ನೋಡೋ ಹಾಗೇ ಶೈನ್ ಆಗುತ್ತಿದೆ ನಮ್ಮ ಕನ್ನಡ ಮಣ್ಣಿನ ಸಿನಿಮಾಗಳು. ಇದೀಗ ಒಂದೇ ಸಿನಿಮಾದಲ್ಲಿ ಶಿವಣ್ಣ, ಉಪೇಂದ್ರ, ರಾಜ್ ಬಿ ಶೆಟ್ಟಿ ಕಾಣಿಸಿಕೊಳ್ಳೋದ್ರಾ ಮೂಲಕ ಬಿಗ್ ಮ್ಯಾಜಿಕ್ ಆಗೋ ಮುನ್ಸೂಚನೆ ಈಗಾಗಲೇ ಸಿಕ್ಕಿದ್ದಾಗಿದೆ. ಈ ವಿಷ್ಯ ಕೇಳಿದ ಅಭಿಮಾನಿಗಳು ಮಾತ್ರ ಸಖತ್ ಖುಷಿಪಟ್ಟಿದ್ದಾರೆ. 

"45" ಸಿನಿಮಾದ ಕಥೆ ಹೆಂಗಿರ್ಬೋದು, ಈ ಮೂವರು ಸ್ಟಾರ್ ಗಳಿಗೆ ನಾಯಕಿಯರು ಯಾರು..?  ಯಾರಿಲ್ಲಿ ವಿಲನ್ ಹೀಗೆ ನಾನಾ ಪ್ರಶ್ನೆಗಳು ಅಭಿಮಾನಿಗಳ  ಮನದಲ್ಲಿ ಮೂಡಿವೆ. ಅರ್ಜುನ್ ಜನ್ಯ ಡೈರೆಕ್ಟರ್ ಆಗಿ ಹೇಗೆ ಕಮಾಲ್ ಮಾಡಬೋದು ಸ್ವಾಮಿ ಅನ್ನೋದು ಇನ್ನಷ್ಟು ಕುತೂಹಲ ಹೆಚ್ಚಿಸಿದೆ. 

ಇದನ್ನೂ ಓದಿ- ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ಆರಂಭ - ಈ ಬಾರಿಯೂ ಸಿಗಲಿದೆ ಭರಪೂರ ಮನರಂಜನೆ

ಶಿವಣ್ಣ, ಉಪೇಂದ್ರ "45" ಸಿನಿಮಾದಲ್ಲಿ ಒಂದಾಗಿ ಸಿನಿಮಾ ಮಾಡ್ತಾರೆ ಅನ್ನೋದು ಕೋಟಿ ಕೋಟಿ ಅಭಿಮಾನಿಗಳಿಗೆ ತಿಳಿದಿತ್ತು. ಒಂದು ಮೊಟ್ಟೆಯ ಕಥೆ ಸಿನಿಮಾ ಮೂಲಕ ಚಂದನವನದಲ್ಲಿ ಬಹುಬೇಡಿಕೆಯ ನಟ ಅಂದ್ರೆ ಅದು ರಾಜ್ ಬಿ ಶೆಟ್ಟಿ. ಇವ್ರು ಕೂಡ ಇದೀಗ ಸಿನಿಮಾದಲ್ಲಿ ಮೇನ್ ರೋಲ್ ಮಾಡ್ತಾ ಇರೋದ್ರಿಂದ  ಇದು ನಿಜಕ್ಕೂ ಹಿಸ್ಟರಿ ಕ್ರಿಯೇಟ್ ಮಾಡುತ್ತೆ ಅನ್ನೋದು ಗಾಂಧಿನಗರದಲ್ಲಿ ಕೇಳಿ ಬರುತ್ತಿರೋ ಭರ್ಜರಿ ಟಾಕ್.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News