Coronavirus ಗಾಗಿ ಸಿಂಗರ್ ಆದ Shaarukh Khan, 'ಅಪ್ಪಾ ....! Enough' ಎಂದ ಅಬರಾಮ್

ಕೊರೊನಾ ವೈರಸ್ ಹಾಗೂ ಅದರಿಂದ ಪ್ರಭಾವಿತಕ್ಕೆ ಒಳಗಾದವರಿಗಾಗಿ ಖ್ಯಾತ ಬಾಲಿವುಡ್ ನಟ ಶಾರುಖ್ ಖಾನ್ ಹಾಡೊಂದನ್ನು ಹೇಳಿದ್ದಾರೆ. ಈ ಹಾಡಿನ ಶೀರ್ಷಿಕೆ ' ಸಬ್ ಠಿಕ್ ಹೋ ಜಾಯೇಗಾ'. ಈ ಹಾಡಿನಲ್ಲಿ ಶಾರುಕ್ ಪುತ್ರ ಅಬರಾಮ್ ಕೂಡ ಅವರ ಜೊತೆಗೆ ಡಾನ್ಸ್ ಮಾಡುತ್ತಿರುವುದನ್ನು ನೀವು ನೋಡಬಹುದಾಗಿದೆ. ಹಾಡಿನ ಕೊನೆಯಲ್ಲಿ ಅಬರಾಮ್, ಶಾರುಕ್ ಅವರಿಗೆ 'ಅಪ್ಪಾ ...! ಸಾಕು Enouth' ಎಂದು ಹೇಳಿದ್ದಾರೆ.

Last Updated : May 4, 2020, 02:50 PM IST
Coronavirus ಗಾಗಿ ಸಿಂಗರ್ ಆದ Shaarukh Khan, 'ಅಪ್ಪಾ ....! Enough' ಎಂದ ಅಬರಾಮ್ title=

ನವದೆಹಲಿ: ಕೊರೊನಾ ವೈರಸ್ ನಿಂದ ಪಾರಾಗಲು ಹಾಗೂ ಪ್ರಭಾವಿತರ ನೆರವು ಮಾಡಲು ಪ್ರತಿಯೊಬ್ಬರೂ ಕೂಡ ಮುಂದಕ್ಕೆ ಬರುತ್ತಿದ್ದಾರೆ. ಜನರು ತಮ್ಮ ಇಚ್ಛೆಗೆ ಅನುಗುಣವಾಗಿ ಹಾಗೂ ವಿವಿಧ ರೀತಿಯಲ್ಲಿ ಆರ್ಥಿಕ ನೆರವು ನೀಡುತ್ತಿದ್ದಾರೆ. ಇದರಲ್ಲಿ ಬಾಲಿವುಡ್ ಸೆಲಿಬ್ರಿಟಿ ಗಳೂ ಕೂಡ ಹಿಂದೆ ಬಿದ್ದಿಲ್ಲ. ಹಲವು ಬಾಲಿವುಡ್ ತಾರೆಯಲು ಕೊರೊನಾ ಪೀಡಿತರಿಗೆ ಧನಸಹಾಯ ನೀಡಿದ ಬಳಿಕ ಇದೀಗ ಪ್ರಭಾವಿತರ ನೆರವಿಗೆ ಹಣ ಸಂಗ್ರಹಣೆಯಲ್ಲಿ ತೊಡಗಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ಸಂಜೆ ಫೋರ್ ಇಂಡಿಯಾ ಹೆಸರಿನಡಿ ನಡೆದ ಕಾರ್ಯಕ್ರಮದಲ್ಲಿ ಹಲವು ಬಾಲಿವುಡ್ ಸೆಲಿಬ್ರಿಟಿಗಳು ಭಾಗವಹಿಸಿ ಹಣವನ್ನು ಸಂಗ್ರಹಿಸಿದ್ದಾರೆ. ಬಾಲಿವುಡ್ ನಲ್ಲಿ ಕಿಂಗ್ ಖಾನ್ ಎಂದೇ ಖ್ಯಾತ ಶಾರುಕ್ ಖಾನ್ ಕೂಡ ಈ ಕಾರ್ಯಕ್ರಮದಲ್ಲಿ ತಮ್ಮ ಸಪೋರ್ಟ್ ನೀಡಿದ್ದಾರೆ.

ಈ ಕಾರ್ಯಕ್ರಮಕ್ಕಾಗಿ ಶಾರುಖ್ ಹಾಡೊಂದನ್ನು ಹಾಡಿದ್ದಾರೆ. ಈ ಹಾಡಿನ ಶೀರ್ಷಿಕೆ 'ಸಬ್ಬ್ ಸಹಿ ಹೋ ಜಾಯೇಗಾ'. ಈ ಹಾಡಿನಲ್ಲಿ ಲಾಕ್ ಡೌನ್ ನಲ್ಲಿನ ಸ್ಥಿತಿಯ ಕುರಿತು ವಿಶ್ಲೇಷಿಸಲಾಗಿದೆ. ಈ ಹಾಡು ಹಲವರ ಪಾಲಿಗೆ ಭರವಸೆಯ ಒಂದು ಕಿರಣವಾಗಿದೆ. ಈ ವಿಡಿಯೋದಲ್ಲಿ ಶಾರುಕ್ ಅವರು ತಮ್ಮ ಪುತ್ರ ಅಬರಾಮ್ ಜೊತೆಗೆ ಡಾನ್ಸ್ ಕೂಡ ಮಾಡಿದ್ದಾರೆ. ಆದರೆ, ಹಾಡಿನ ಕೊನೆಯಲ್ಲಿ ಶಾರುಕ್ ಪುತ್ರ ತಮ್ಮ ತಂದೆಗೆ ಹಾಡನ್ನು ಹಾಡದಂತೆ ... ಹೇಳುತ್ತಾನೆ.

ಈ ವಿಡಿಯೋ ಅನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಗೆ ಹಂಚಿಕೊಂಡಿರುವ ಶಾರುಕ್ 'ಸಬ್ ಸಹಿ ಹೋ ಜಾಯೇಗಾ' ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ ಈ ಹಾಡಿಗೆ ಸಂಗೀತ, ಸಾಹಿತ್ಯ ಬರೆದ ಹಾಗೂ ಇಡೀ ರಾತ್ರಿ ಕೆಲಸ ಮಾಡಿರುವ ಐಫೋರ್ ಇಂಡಿಯಾ , ಬಾದಶಾಹ್ ಹಾಗೂ ಸಾಯಿನಿ ರಾಜ್ ಅವರಿಗೆ ನಾನು ಮನಃಪೂರ್ವಕ ಧನ್ಯವಾದ ಹೇಳುತ್ತೇನೆ. ಎಡಿಟರ್ ಸುನಿಲ್ ಗೂ ಕೂಡ ಧನ್ಯವಾದ ಎಂದು ಹೇಳಿದ್ದಾರೆ.
 

Trending News