ಶರಣ್ ಅಭಿನಯದ ಬಹು ನಿರೀಕ್ಷಿತ ʻಛೂ ಮಂತರ್ʼ ರಿಲೀಸ್‌ ಡೇಟ್‌ ಫಿಕ್ಸ್‌

Choo Mantar Movie: ಇದೊಂದು ಹಾರರ್ ಚಿತ್ರವಾಗಿದ್ದು, ಈ ಹಿಂದೆ ಬಂದಿರುವ ಹಾರಾರ್ ಚಿತ್ರಗಳಿಗಿಂತ ಸ್ವಲ್ಪ ವಿಭಿನ್ನವಾಗಿದೆ. ಮೇಕಿಂಗ್ ನೋಡಿದಾಗ ಹಾಲಿವುಡ್ ಚಿತ್ರಗಳನ್ನು ನೋಡಿದ ಹಾಗೆ ಭಾಸವಾಗುತ್ತದೆ. 

Written by - YASHODHA POOJARI | Last Updated : Mar 2, 2024, 12:25 PM IST
  • ಶರಣ್ ನಟನೆಯ ಛೂ ಮಂತರ್ ಸಿನಿಮಾ
  • ʻಕರ್ವʼ ಖ್ಯಾತಿಯ ನವನೀತ್ ನಿರ್ದೇಶನದ ಸಿನಿಮಾ
  • ಛೂ ಮಂತರ್ ಸಿನಿಮಾ ಬಿಡುಗಡೆ ದಿನಾಂಕ ನಿಗದಿ
ಶರಣ್ ಅಭಿನಯದ ಬಹು ನಿರೀಕ್ಷಿತ  ʻಛೂ ಮಂತರ್ʼ ರಿಲೀಸ್‌ ಡೇಟ್‌ ಫಿಕ್ಸ್‌  title=

Choo Mantar Movie release date: ತರುಣ್ ಸ್ಟುಡಿಯೋಸ್ ಲಾಂಛನದಲ್ಲಿ ಮಾನಸ ತರುಣ್ ಹಾಗೂ ತರುಣ್ ಶಿವಪ್ಪ ನಿರ್ಮಿಸಿರುವ,  "ಕರ್ವ" ಖ್ಯಾತಿಯ ನವನೀತ್ ನಿರ್ದೇಶಿಸಿರುವ ಹಾಗೂ ತಮ್ಮ ಅಮೋಘ ಅಭಿನಯದ ಮೂಲಕ ಜನಮನ ಗೆದ್ದಿರುವ ನಟ ಶರಣ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ "ಛೂ‌ ಮಂತರ್" ಚಿತ್ರ ಇದೇ ಏಪ್ರಿಲ್ 5 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ  ಟೀಸರ್ ಮೂಲಕ ಮನೆಮಾತಾಗಿರುವ "ಛೂ ಮಂತರ್" ಚಿತ್ರದ ಟ್ರೇಲರ್ ಸಹ ಸದ್ಯದಲ್ಲೇ ಬಿಡುಗಡೆಯಾಗಲಿದೆ. 

ಇದನ್ನೂ ಓದಿ: ಲೋಕಸಭೆ ಅಖಾಡಕ್ಕೆ ಅಕ್ಷಯ್ ಕುಮಾರ್? ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಬಾಲಿವುಡ್‌ ಸ್ಟಾರ್? 

ಇದೊಂದು ಹಾರರ್ ಚಿತ್ರವಾಗಿದ್ದು, ಈ ಹಿಂದೆ ಬಂದಿರುವ ಹಾರಾರ್ ಚಿತ್ರಗಳಿಗಿಂತ ಸ್ವಲ್ಪ ವಿಭಿನ್ನವಾಗಿದೆ. ಮೇಕಿಂಗ್ ನೋಡಿದಾಗ ಹಾಲಿವುಡ್ ಚಿತ್ರಗಳನ್ನು ನೋಡಿದ ಹಾಗೆ ಭಾಸವಾಗುತ್ತದೆ. ಶರಣ್ ಅವರ ಪಾತ್ರ ಕೂಡ ಈ ಹಿಂದಿನ ಚಿತ್ರಗಳಿಗಿಂತ ಬೇರೆ ರೀತಿಯಲ್ಲಿಯೇ ಇದೆ. 

"ಉಪಾಧ್ಯಕ್ಷ"ನಾಗಿ ಯಶಸ್ಸು ಕಂಡಿರುವ ಚಿಕ್ಕಣ್ಣ ಕೂಡ ಈ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ. ಮತ್ತೊಮ್ಮೆ " ಅಧ್ಯಕ್ಷ" ಹಾಗೂ "ಉಪಾಧ್ಯಕ್ಷ"ರ ಸಮ್ಮಿಲನ ಈ ಚಿತ್ರದಲ್ಲಾಗಿದೆ. ಮೇಘನಾ ಗಾಂವ್ಕರ್, ಅದಿತಿ ಪ್ರಭುದೇವ,  ಪ್ರಭು ಮುಂಡ್ಕರ್ ಮುಖ್ಯಭೂಮಿಕೆಯಲ್ಲಿದ್ದಾರೆ.

ಇದನ್ನೂ ಓದಿ: Sreeleela: ಮದುವೆಯಾಗದೇ ಇಬ್ಬರು ಮಕ್ಕಳ ತಾಯಿಯಾದ ನಟಿ ಶ್ರೀಲೀಲಾ.!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News