ಶಾರುಖ್ ಜೊತೆ ನಟಿಸಿದ ಈ ನಟಿಗೆ ಪಾರ್ಶ್ವವಾಯು, ಹೊಸ ಚಿತ್ರದ ಬಗ್ಗೆಯೇ ಕನವರಿಸುತ್ತಿರುವ ನಟಿ

ಪಾರ್ಶ್ವವಾಯುಗೆ ತುತ್ತಾಗಿರುವ ನಟಿ  ಶಿಖಾ ಮಲ್ಹೊತ್ರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಿ. 10ರಂದು ಭಾರೀ ಪ್ರಮಾಣದ ಸ್ಟ್ರೋಕ್ ಗೆ ಒಳಗಾಗಿರುವ ಶಿಖಾ ತನ್ನ ಹೊಸ ಚಿತ್ರದ ಬಗ್ಗೆ ಕನವರಿಸುತ್ತಿದ್ದಾರೆ.

Last Updated : Dec 22, 2020, 07:09 PM IST
  • ಪಾರ್ಶ್ವವಾಯುಗೆ ತುತ್ತಾದ ನಟಿ ಶಿಖಾ ಮಲ್ಹೋತ್ರಾ
  • ಯಾವಾಗ ಮೊದಲಿನಂತಾಗುತ್ತೇನೋ ಎಂದು ನೋವು ತೋಡಿಕೊಂಡ ನಟಿ
  • ತನ್ನ ಹೊಸ ಚಿತ್ರದ ಬಗ್ಗೆ ಕನವರಿಸುತ್ತಿರುವ ಶಿಖಾ
ಶಾರುಖ್ ಜೊತೆ ನಟಿಸಿದ ಈ ನಟಿಗೆ ಪಾರ್ಶ್ವವಾಯು, ಹೊಸ ಚಿತ್ರದ ಬಗ್ಗೆಯೇ ಕನವರಿಸುತ್ತಿರುವ ನಟಿ  title=
file photoe

ನವದೆಹಲಿ : ನಟಿ ಶಿಖಾ ಮಲ್ಹೋತ್ರಾ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಟ್ರೋಕ್ ನಟಿಯ ದೇಹದ ಬಲಭಾಗದ ಮೇಲೆ ಭಾರೀ ಪರಿಣಾಮ ಬೀರಿದ್ದು, ಎದ್ದು ಓಡಾಡುವುದು ಸಾಧ್ಯವಾಗುತ್ತಿಲ್ಲ. ಶಿಖಾ ಮಲ್ಹೋತ್ರಾ ಅವರನ್ನು ಮುಂಬಯಿಯ ಕೂಪರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

 

ಇದನ್ನೂ ಓದಿ: https://zeenews.india.com/kannada/entertainment/rakul-preet-singh-has-tested-positive-for-covid-19-37715

ತನ್ನ ಆರೋಗ್ಯದ ಬಗ್ಗೆ  ಹೇಳಿಕೊಂಡಿರುವ ಶಿಖಾ ಮಲ್ಹೋತ್ರಾ (Shikha malhothra), ತಾನು ಚೇತರಿಸಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ ಚೇತರಿಕೆ  ಬಹಳ ನಿಧಾನವಾಗಿದ್ದು, ತಾನು ಯಾವಾಗ ಮೊದಲಿನಂತೆ ಎದ್ದು ಓಡಾಡುತ್ತೇನೆ ಎಂದು ಗೊತ್ತಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.  ಜೀವನದ ಅತ್ಯಂತ ಕಷ್ಟಕರ ಸನ್ನಿವೇಶವನ್ನು ಎದುರಿಸುತ್ತಿದ್ದು, ತನ್ನ ಜೊತೆ ನಿಲ್ಲುವಂತೆ ಕೋರಿದ್ದಾರೆ. ಅಲ್ಲದೆ ತನ್ನ ಸಿನಿಮಾ (cinema) ಜೀವನದ ಬಗ್ಗೆಯೂ ಅತಿಯಾಗಿ ಚಿಂತಿಸುತ್ತಿರುವ ಶಿಖಾ ತನ್ನನ್ನು ಬೆಂಬಲಿಸುವಂತೆ ಪ್ರೇಕ್ಷಕರಲ್ಲಿ ವಿನಂತಿಸಿದ್ದಾರೆ. ಶಾರೀರಿಕವಾಗಿ ಅಸಹಾಯಕಳಾಗಿದ್ದರೂ ತನ್ನ ಹೊಸ ಚಿತ್ರ ಕಾಂಚಲಿ (kanchali) ಬಗ್ಗೆ ಯೋಚಿಸುತ್ತಿದ್ದರೆ ಬಹಳ ಸಂತೋಷವಾಗುತ್ತಿದೆ ಎನ್ನುತಾರೆ.

 

ಇದನ್ನೂ ಓದಿ: https://zeenews.india.com/kannada/entertainment/gurushishyaru-first-look-released-37702

ಶಿಖಾ ಡಿ.10ರಂದು ಪಾರ್ಶ್ವವಾಯುಗೆ (paralysis) ತುತ್ತಾಗಿದ್ದು ಅವರನ್ನು ತಕ್ಷಣವೇ ಕೋಕಿಲಾಬೆನ್ ಆಸ್ಪತ್ರೆಗೆ (Kokila ben hospital) ದಾಖಲಿಸಲಾಗಿತ್ತು. ನಂತರ ಅಲ್ಲಿಂದ ಕೆಇಎಂ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಶಿಖಾ ಆಸ್ಪತ್ರೆಯಿಂದ ತನ್ನ ತಾಯಿಗೆ ತನ್ನ ಫೋಟೋವೊಂದನ್ನು ಶೇರ್ ಮಾಡಿದ್ದಾರೆ.

 

 

ಶಿಖಾ, ಶಾರುಖ್ ಖಾನ್ (Sharukh khan) ಅಭಿನಯದ ಫ್ಯಾನ್ (Fan) ಚಿತ್ರದಲ್ಲಿ ನಟಿಸಿದ್ದಾರೆ. ಇನ್ನು ಶಿಖಾ ಇತ್ತೀಚೆಗೆ ರಾಜಸ್ಥಾನಿ ಚಿತ್ರ ಕಾಂಚಲಿಯಲ್ಲಿ (Kanchali) ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Trending News