Pathaan Movie Review : ಕಿಂಗ್‌ ಖಾನ್‌ ಆ್ಯಕ್ಷನ್‌ಗೆ ಪ್ರೇಕ್ಷಕ ಫಿದಾ.. ಹೇಗಿದೆ ʼಪಠಾಣ್‌ʼ..!

ಬಾಲಿವುಡ್‌ ಬಾದ್‌ ಶಾ ಶಾರುಖ್ ಖಾನ್ ನಟನೆಯ ಪಠಾಣ್ ಚಿತ್ರ ಇಂದು ರಿಲೀಸ್‌ ಆಗಿದೆ. ನಾಲ್ಕು ವರ್ಷಗಳ ಸುದೀರ್ಘ ವಿರಾಮದ ನಂತರ ಕಿಂಗ್‌ ಖಾನ್‌ ಕಮ್ ಬ್ಯಾಕ್ ಮಾಡಿದ್ದಾರೆ. ಬೇಷರಾಮ್ ರಂಗ್ ಮತ್ತು ಟ್ರೇಲರ್‌ಗೆ ಪ್ರೇಕ್ಷಕರಿಂದ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಲ್ಲದೆ, ಈ ಸಿನಿಮಾ ಸುತ್ತ ಸಾಕಷ್ಟು ವಿವಾದ ಕೇಳಿ ಬಂದಿದ್ದವು. ಇವೇಲ್ಲವನ್ನೂ ದಾಟಿ ಸಿನಿಮಾ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಹಾಗಿದ್ರೆ ʼಪಠಾಣ್‌ʼ ಹೇಗಿದೆ ಅಂತ ನೋಡೋಣ ಬನ್ನಿ.. 

Written by - Krishna N K | Last Updated : Jan 25, 2023, 05:29 PM IST
  • ಬಾಲಿವುಡ್‌ ಬಾದ್‌ ಶಾ ಶಾರುಖ್ ಖಾನ್ ನಟನೆಯ ಪಠಾಣ್ ಚಿತ್ರ ಇಂದು ರಿಲೀಸ್‌ ಆಗಿದೆ.
  • ನಾಲ್ಕು ವರ್ಷಗಳ ಸುದೀರ್ಘ ವಿರಾಮದ ನಂತರ ಕಿಂಗ್‌ ಖಾನ್‌ ಕಮ್ ಬ್ಯಾಕ್ ಮಾಡಿದ್ದಾರೆ.
  • ಸಿದ್ಧಾರ್ಥ್ ಆನಂದ್ ಆಕ್ಷನ್‌ ಥ್ರೀಲ್ಲರ್‌ ಸಿನಿಮಾ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.
Pathaan Movie Review : ಕಿಂಗ್‌ ಖಾನ್‌ ಆ್ಯಕ್ಷನ್‌ಗೆ ಪ್ರೇಕ್ಷಕ ಫಿದಾ.. ಹೇಗಿದೆ ʼಪಠಾಣ್‌ʼ..! title=

Pathaan Movie Review : ಬಾಲಿವುಡ್‌ ಬಾದ್‌ ಶಾ ಶಾರುಖ್ ಖಾನ್ ನಟನೆಯ ಪಠಾಣ್ ಚಿತ್ರ ಇಂದು ರಿಲೀಸ್‌ ಆಗಿದೆ. ನಾಲ್ಕು ವರ್ಷಗಳ ಸುದೀರ್ಘ ವಿರಾಮದ ನಂತರ ಕಿಂಗ್‌ ಖಾನ್‌ ಕಮ್ ಬ್ಯಾಕ್ ಮಾಡಿದ್ದಾರೆ. ಬೇಷರಾಮ್ ರಂಗ್ ಮತ್ತು ಟ್ರೇಲರ್‌ಗೆ ಪ್ರೇಕ್ಷಕರಿಂದ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಲ್ಲದೆ, ಈ ಸಿನಿಮಾ ಸುತ್ತ ಸಾಕಷ್ಟು ವಿವಾದ ಕೇಳಿ ಬಂದಿದ್ದವು. ಇವೇಲ್ಲವನ್ನೂ ದಾಟಿ ಸಿನಿಮಾ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಹಾಗಿದ್ರೆ ʼಪಠಾಣ್‌ʼ ಹೇಗಿದೆ ಅಂತ ನೋಡೋಣ ಬನ್ನಿ.. 

ಸಿದ್ಧಾರ್ಥ್ ಆನಂದ್ ಆಕ್ಷನ್‌ ಥ್ರೀಲ್ಲರ್‌ ಸಿನಿಮಾದ ನಾಯಕ ಪಠಾಣ್ (ಶಾರುಖ್ ಖಾನ್) ಒಬ್ಬ ಏಸ್ ಗೂಢಚಾರಿ. ಕಳೆದ ಒಂದೆರಡು ವರ್ಷಗಳಿಂದ ಕಾಣೆಯಾಗಿರುತ್ತಾನೆ. ಇದೇ ಸಮಯಕ್ಕೆ ಭಯೋತ್ಪಾದಕ ಜಿಮ್ (ಜಾನ್ ಅಬ್ರಹಾಂ) ಮೂಲತಃ ಭಾರತೀಯ ನಾಗಿರುತ್ತಾನೆ. ಅದ್ರೆ, ಕೆಲವು ಕಾರಣಗಳಿಂದ ಮಾತೃಭೂಮಿಯನ್ನೇ ನಾಶ ಮಾಡಲು ವಿರೋಧಿಕಗಳ ಜೊತೆ ಕೈ ಜೋಡಿಸಿರುತ್ತಾನೆ. ಮಾರಣಾಂತಿಕ ವೈರಸ್‌ನಿಂದ ಇಂಡಿಯಾವನ್ನು ಉಳಿಸುವ ಒಂದೇ ಒಂದು ಉದ್ದೇಶಕ್ಕಾಗಿ ಪಠಾಣ್‌ ಫೀಲ್ಡ್‌ಗೆ ರೀ ಎಂಟ್ಟಿ ಕೊಡ್ತಾನೆ. ನಿಗೂಢ ಪಾತ್ರದಲ್ಲಿ ರುಬಿನಾ (ದೀಪಿಕಾ ಪಡುಕೋಣೆ) ಅವರೊಂದಿಗೆ ಮಿಷನ್‌ನಲ್ಲಿ ಸೇರಿಕೊಳ್ಳುತ್ತಾರೆ.

ಇದನ್ನೂ ಓದಿ: Rolex Komal : ‘ರೋಲೆಕ್ಸ್ ಕೋಮಲ್’ ಗೆ   ಕರಾವಳಿ ಬೆಡಗಿ ಸೋನಾಲ್ ಮೊಂಟೆರೋ ಜೋಡಿ...!  

ಶಾರುಖ್ ಖಾನ್ ಎಂಟ್ರಿ ಸೂಪರ್‌, ಸ್ಟಂಟ್ ಕೊರಿಯೋಗ್ರಫಿ ಸಖತ್ತಾಗಿದೆ. ಹೆಪ್ಪುಗಟ್ಟಿದ ಸಮುದ್ರ, ರೈಲಿನಲ್ಲಿ ಚಿತ್ರೀಕರಿಸಿದ ಸಾಹಸ ದೃಶ್ಯಗಳು ಮೈನವಿರೇಳಿಸುವಂತಿದೆ. ಜಾನ್ ಅಬ್ರಹಾಂ ಖಳನಾಯಕನ ಪಾತ್ರದಲ್ಲಿ ಮಿಂಚಿದ್ದಾರೆ. ಶಾರುಖ್‌ ಅವರ ದೇಶಭಕ್ತಿ ಡೈಲಾಗ್‌ಗಳು ಚಿತ್ರದ ಹೈಲೆಟ್‌. ಗೂಢಾಚಾರಿ ದೀಪಿಕಾ ಪಡುಕೋಣೆ ಸೂಪರ್ ಹಾಟ್ ಕಾಣಿಸಿಕೊಂಡಿದ್ದಾರೆ. ಶಾರುಖ್ ಖಾನ್ ಮತ್ತು ದೀಪಿಕಾ ರೊಮ್ಯಾಂಟಿಕ್ ಸೀನ್‌ ತೆರೆ ಮೇಲೆ ನೋಡಿ ಬಾಯ್ತೆರೆದು ನೋಡುವಂತಿವೆ. ಒಟ್ಟಾರೆಯಾಗಿ ಸಿದ್ಧಾರ್ಥ್ ಆನಂದ್ ಖಾನ್‌ ಅಭಿಮಾನಿಗಳಿಗೆ ಬ್ಲಾಕ್ಬಸ್ಟರ್‌ ಸಿನಿಮಾ ನೀಡಿದ್ದಾರೆ.

ಆದರೆ, ಸಿನಿಮಾ ನೋಡುತ್ತಿದ್ದಂತೆ ಕಥೆ ಏನಪ್ಪಾ ಅಂತ ಇಸಿಯಾಗಿ ಗೋತ್ತಾಗುತ್ತದೆ. ಸ್ಕ್ರೀನ್‌ಪ್ಪೇ ಇದನ್ನು ಹೈಡ್‌ ಮಾಡುತ್ತದೆ. ಜೆಟ್ ಪ್ಯಾಕ್ ದೃಶ್ಯದ VFX ಸ್ವಲ್ಪ ಚೆನ್ನಾಗಿ ಮಾಡಬಹುದಿತ್ತು ಎನಿಸುತ್ತದೆ. ಪಠಾಣ್ ಭಾರತದಲ್ಲಿ ತಯಾರಾದ ಅತ್ಯುತ್ತಮ ಆಕ್ಷನ್ ಚಿತ್ರಗಳಲ್ಲಿ ಒಂದಾಗಿದೆ. ಶಾರುಖ್ ಖಾನ್ ಕಿಂಗ್‌ ಖಾನ್‌ ಎನ್ನುವದನ್ನು ಈ ಸಿನಿಮಾ ಮೂಲಕ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News