ಆತ್ಮೀಯ ಸಂಬಂಧವನ್ನು ನೈಜವಾಗಿ ತೋರಿಸುವಲ್ಲಿ ಇಂಹತ ದೃಶ್ಯಗಳು ಅವಶ್ಯ-ತಮನ್ನಾ

Tamanna Bhatia : ವಿಜಯ್‌ ವರ್ಮಾ ಜೊತೆಗಿನ ರಿಲೇಷನ್‌ಶಿಪ್‌ ಬಗ್ಗೆ ಇತ್ತೀಚೆಗೆ ನಟಿ ತಮನ್ನಾ ಮಾತನಾಡಿದ್ದರು. ಇನ್ನು ಇವರ ನಟನೆಯ ʼಜಿ ಕರ್ದಾʼ ವೆಬ್‌ ಸೀರಿಸ್‌ ಸಖತ್‌ ಸದ್ದು ಮಾಡುತ್ತಿದೆ. ಇದರಲ್ಲಿ ತಮನ್ನಾ ಅವರ ಬೆಡ್‌ ‌ರೂಮ್‌ ದೃಶ್ಯಗಳು ಆನ್‌ಲೈನ್‌ನಲ್ಲಿ ಲೀಕ್‌ ಆಗಿ ವೈರಲ್‌ ಆಗುತ್ತಿವೆ.   

Written by - Savita M B | Last Updated : Jun 20, 2023, 03:03 PM IST
  • ತೆಲುಗು ಹಾಗೂ ತಮಿಳಿನಲ್ಲಿ ಸಖತ್‌ ಬೇಡಿಕೆಯಿರುವ ನಟಿ ತಮನ್ನಾ
  • ಸದ್ಯ ವಿಜಯ್‌ ವರ್ಮಾ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.
  • ಇದೀಗ ಹಸಿಬಿಸಿ ದೃಶ್ಯಗಳಿಗೆ ಒಪ್ಪಿಗೆ ನೀಡದ ಮಿಲ್ಕಿ ಬ್ಯೂಟಿ ಇದೀಗ ಎಲ್ಲರು ಹುಬ್ಬೇರಿಸುವಂತೆ ನಟಿಸಿದ್ದಾರೆ.
ಆತ್ಮೀಯ ಸಂಬಂಧವನ್ನು ನೈಜವಾಗಿ ತೋರಿಸುವಲ್ಲಿ ಇಂಹತ ದೃಶ್ಯಗಳು ಅವಶ್ಯ-ತಮನ್ನಾ title=

Jee Kardha : ತೆಲುಗು ಹಾಗೂ ತಮಿಳಿನಲ್ಲಿ ಸಖತ್‌ ಬೇಡಿಕೆಯಿರುವ ನಟಿ ತಮನ್ನಾ ಇವರು ಸದ್ಯ ವಿಜಯ್‌ ವರ್ಮಾ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಹಸಿಬಿಸಿ ದೃಶ್ಯಗಳಿಗೆ ಒಪ್ಪಿಗೆ ನೀಡದ ಮಿಲ್ಕಿ ಬ್ಯೂಟಿ ಇದೀಗ ಎಲ್ಲರು ಹುಬ್ಬೇರಿಸುವಂತೆ ನಟಿಸಿದ್ದಾರೆ. ಹೌದು ʼಜಿ ಕರ್ದಾʼ ವೆಬ್‌ ಸೀರಿಸ್‌ನಲ್ಲಿ ನಟಿ ತಮನ್ನಾ ಮೈಚಳಿ ಬಿಟ್ಟು ಬೆಡ್‌ ರೂಂ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಅರುಣಿಮಾ ಶರ್ಮಾ ಹಾಗೂ ಅದಾಜಾನಿಯಾ ನಿರ್ದೇಶನದ ʼಜೀ ಕರ್ದಾʼ ವೆಬ್‌ ಸೀರಿಸ್‌ನಲ್ಲಿ ತಮನ್ನಾ ನಾಯಕಿಯಾಗಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ಈ ಸೀರಿಸ್‌ ಅಮೇಜಾನ್‌ ಪ್ರೈಂನಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. ಈ ಸೀರಿಸ್‌ ಹೆಚ್ಚು ಚರ್ಚೆಗೊಳಗಾಗಿದೆ, ಕಾರಣ ತಮನ್ನಾ ಅವರ ಬೋಲ್ಡ್‌ ಸೀನ್ಸ್‌. ಇದರ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದ್ದು, ತಮನ್ನಾ ಈ ಹಿಂದೆ ಯಾವ ಸಿನಿಮಾದಲ್ಲಿಯೂ ಈ ರೀತಿಯಾಗಿ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಇದೇ ವಿಚಾರವಾಗಿ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. 

ಇದನ್ನೂ ಓದಿ-ಆದಿಪುರುಷ್‌ದಲ್ಲಿ ಯಶ್ ರಾಧಿಕಾ..ಹೇಗಿದೆ ನೋಡಿ ಸ್ಯಾಂಡಲ್‌ವುಡ್ ರಾಮ ಸೀತೆ ಜೋಡಿ..

ಈ ʼಜೀ ಕರ್ದಾʼ ವೆಬ್‌ ಸೀರಿಸ್‌ ತನ್ನ ಮೊದಲ ಟ್ರೈಲರ್‌ನಿಂದಲೇ ಸಾಕಷ್ಟು ಕುತೂಹಲ ಮೂಡಿಸಿತ್ತು. ಇದೀಗ ಸಖತ್‌ ರೆಸ್ಪಾನ್ಸ್‌ ಕೂಡ ಸಿಗುತ್ತಿದೆ.  ಇನ್ನು ಬೋಲ್ಡ್‌ ಸೀನ್‌ಗಳಲ್ಲಿ ಮೈಚಳಿ ಬಿಟ್ಟು ನಟಿಸಿರುವ ತಮನ್ನಾ ಸಂದರ್ಶನವೊಂದರಲ್ಲಿ ಮಾತನಾಡಿದ್ದು, "ಇಂತಹ ದೃಶ್ಯಗಳು ಕಥೆಗೆ ಅವಶ್ಯವಾಗಿರುತ್ತವೆ. ಒಂದು ಉತ್ತಮ ಆತ್ಮೀಯ ಸಂಬಂಧವನ್ನು ನೈಜವಾಗಿ ತೋರಿಸಬೇಕೆಂದರೆ ಈ ರೀತಿಯ ದೃಶ್ಯಗಳು ಮುಖ್ಯವಾಗಿರುತ್ತವೆ. ಇದೇ ಕಾರಣದಿಂದಾಗಿ ಇಂತಹ ದೃಶ್ಯಗಳನ್ನು ಮಾಡಲು ನಾನು ಒಪ್ಪಿಕೊಂಡೆ. ಯಾರು ಏನೇ  ಹೇಳಲಿ, ಜನರು ಇಷ್ಟಪಡಲಿ ಅಥವಾ ಒಪ್ಪಿಕೊಳ್ಳದಿರಲಿ ಅದನ್ನು ಕಥೆಯ ಭಾಗವಾಗಿ ಇಂತಹ ದೃಶ್ಯಗಳನ್ನು ತೋರಿಸಲಾಗುತ್ತದೆ. ಜೀವನದಲ್ಲಿ ಇಬ್ಬರು ಒಬ್ಬರನ್ನೊಬ್ಬರು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಇಂತಹ ದೃಶ್ಯಗಳು ಅವಶ್ಯವಾಗಿರುತ್ತವೆ. 

ಇನ್ನೂ ತಮನ್ನಾ ಅವರ ಈ ಹೇಳಿಕೆ ಸಖತ್‌ ವೈರಲ್‌ ಆಗುತ್ತಿದ್ದು, ಶೀಘ್ರದಲ್ಲಿಯೇ ಮತ್ತೊಂದು ಬೋಲ್ಡ್‌ ಸೀರಿಸ್‌ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ ಎನ್ನಲಾಗುತ್ತಿದೆ. 

ಇದನ್ನೂ ಓದಿ- ಲೈಂಗಿಕ ಕಿರುಕುಳ ಆರೋಪ.. ಖ್ಯಾತ ಧಾರಾವಾಹಿ ನಿರ್ಮಾಪಕನ ವಿರುದ್ಧ FIR

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News