Bollywood : ಸಾರಾ ಅಲಿಖಾನ್ ಇತ್ತೀಚೆಗೆ ಮಾದ್ಯಮದವರ ಜೊತೆ ಮಾತನಾಡುವಾಗ ಅವರು ಈ ಟ್ರೋಲ್ ಮತ್ತು ಟೀಕೆ ಮಾಡುವವರು ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ತಾವು ಎಲ್ಲ ಧರ್ಮದ ಪೂಜಾ ಸ್ಥಳಗಳಿಗೆ ಶ್ರದ್ಧೆ ಭಕ್ತಿಯಿಂದ ಹೋಗುವುದಾಗಿ ಹೇಳಿದ್ದಾರೆ. ನಟಿ ಸದ್ಯಕ್ಕೆ ʼಜರಾ ಹಟ್ಕೆ ಜರಾ ಬಚ್ಕೆʼ ಸಿನಿಮಾದಲ್ಲಿ ನಟಿಸಿದ್ದು, ಚಿತ್ರದ ಪ್ರಚಾರದಲ್ಲಿ ತೊಡಗಿರುವ ಅವರಿಗೆ ಟ್ರೋಲರ್ಸ್ ಕಾಟ ಎದುರಾಗಿದೆ. ಇದರ ಬಗ್ಗೆ ತಮ್ಮ ಅಭಿಪ್ರಾಯ ಏನು ಎಂಬುದನ್ನು ಸುದ್ದಿಗೋ಼ಷ್ಠಿಯಲ್ಲೇ ಸ್ಪಷ್ಟಪಡಿಸಿದ್ದಾರೆ.
"ನಾನು ನನ್ನ ಕೆಲಸವನ್ನು ಸರಿಯಾಗಿ ಮಾಡುತ್ತಿದ್ದೇನೆ ಅದನ್ನು ಗಂಭೀರವಾಗಿಯೂ ತೆಗೆದುಕೊಂಡಿದ್ದೇನೆ. ನಾನು ನಿಮಗಾಗಿ ಕೆಲಸ ಮಾಡುತ್ತೇನೆ. ನನ್ನ ಕೆಲಸ ನಿಮಗೆ ಇಷ್ಟವಾಗದಿದ್ದರೆ ನನಗೆ ಬೇಸರವಾಗುತ್ತದೆ. ನನ್ನ ವೈಯಕ್ತಿಕ ನಂಬಿಕೆಗಳು ನನಗೆ ಸಂಬಂಧಿಸಿದ್ದು, ನಾನು ಅಜ್ಮೇರ್ ಶರೀಫ್ ದರ್ಗಾಗೆ ಹೋಗುವಷ್ಟೇ ಶ್ರದ್ಧೆಯಿಂದ ಬಂಗ್ಲಾ ಸಾಹಿಬ್ ಗುರುದ್ವಾರಕ್ಕೆ ಹೋಗುತ್ತೇನೆ. ಅಷ್ಟೇ ಶ್ರದ್ಧೆಯಿಂದ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುತ್ತೇನೆ ಜೊತೆಗೆ ಮುಂದುವರೆಸುತ್ತೇನೆ ಕೂಡಾ. ಜನರು ಏನು ಬೇಕಾದರೂ ಹೇಳಲಿ ನನಗೆ ತೊಂದರೆ ಇಲ್ಲ. ನಮಗೆ ಆ ಕ್ಷೇತ್ರದ ಶಕ್ತಿ ಇಷ್ಟವಾಗಬೇಕು ನಾನು ಶಕ್ತಿಯನ್ನು ನಂಬಿದ್ದೇನೆ" ಎಂದು ಸಾರಾ ಅಲಿಖಾನ್ ಸ್ಪಷ್ಟವಾಗಿ ಹೇಳಿದ್ದಾರೆ.
#WATCH | Indore, Madhya Pradesh | When asked about internet trolling after her visit to Mahakal Temple in Ujjain, actress Sara Ali Khan says, "...I take my work very seriously. I work for people, for you. I would feel bad if you don't like my work but my personal beliefs are my… pic.twitter.com/ffXdurUCDY
— ANI (@ANI) May 31, 2023
ಇದನ್ನೂ ಓದಿ-Singer Nisha Upadhyaya: ಲೈವ್ ಶೋ ವೇಳೆ ಖ್ಯಾತ ಗಾಯಕಿ ಮೇಲೆ ಗುಂಡೇಟು!
ಮಹಾಕಾಳೇಶ್ವರ ದೇಗುಲಕ್ಕೆ ಭೇಟಿ ನೀಡಿದ ಸಾರಾ ಅಲಿ ಖಾನ್, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ನಟಿ ಸಾಂಪ್ರದಾಯಿಕ ಉಡುಗೆಯನ್ನು ಧರಿಸಿದ್ದರು. ಅವರು ಅಲ್ಲಿನ ಪುರೋಹಿತರ ಜೊತೆಗೆ ಮಾತನಾಡುವ ನವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಈ ವಿಚಾರವಾಗಿ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ ಕೆಲವರು ಟೀಕೆಗಳನ್ನು ವ್ಯಕ್ತಪಡಿದ್ದಾರೆ.
ಇದನ್ನೂ ಓದಿ-ಡಾ.ವಿಷ್ಣುವರ್ಧನ್ ಹೆಸರಿನಲ್ಲಿ ಮತ್ತೊಂದು ಏಷ್ಯಾ ಬುಕ್ - ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್!