'ಕಾಂತಾರ' ಲೀಲಾಗೆ 'ಕಾ' ಅಕ್ಷರ ಅದೃಷ್ಟವಂತೆ, 'ಕಾ' ಅಕ್ಷರದಲ್ಲೇ ಮತ್ತೊಂದು ಸಿನಿಮಾಗೆ ಸಪ್ತಮಿ ಗೌಡ ರೆಡಿ

 ಕಾಂತಾರ ನಂತ್ರ" ಕಾ " ಅಕ್ಷರದ ಚಿತ್ರಕ್ಕೆ ಮತ್ತೆ ಆಯ್ಕೆ ಯಾಗೋ ಮೂಲಕ ಸ್ಯಾಂಡಲ್ ವುಡ್ ನಲ್ಲಿ ದರ್ಬಾರ್ ಮಾಡೋ ಸೂಚನೆ ಕೊಟ್ಟಿದ್ದಾರೆ ಸಪ್ತಮಿ ಗೌಡ .

Written by - YASHODHA POOJARI | Last Updated : Nov 29, 2022, 12:08 PM IST
  • ಕಾಂತಾರದ ಸಿಂಗಾರ ಸಿರಿ ಕನ್ನಡ ಮಣ್ಣಿನ ಅಪ್ಪಟ ಪ್ರತಿಭೆ
  • ಮತ್ತೆ ಕಾ " ಅಕ್ಷರದ ಚಿತ್ರಕ್ಕೆ ಮತ್ತೆ ಆಯ್ಕೆ ಯಾಗಿರುವ ಸಪ್ತಮಿ
  • ಅಭಿಷೇಕ್ ಅಂಬರೀಶ್ ಜೊತೆ ನಾಯಕಿಯಾಗಿ ಮಿಂಚಲಿರುವ ಕಾಂತಾರ ಲೀಲಾ
'ಕಾಂತಾರ' ಲೀಲಾಗೆ 'ಕಾ' ಅಕ್ಷರ ಅದೃಷ್ಟವಂತೆ, 'ಕಾ' ಅಕ್ಷರದಲ್ಲೇ ಮತ್ತೊಂದು ಸಿನಿಮಾಗೆ ಸಪ್ತಮಿ ಗೌಡ ರೆಡಿ  title=

ಬೆಂಗಳೂರು : ಕಾಂತಾರದ ಸಿಂಗಾರ ಸಿರಿ ಕನ್ನಡ ಮಣ್ಣಿನ ಅಪ್ಪಟ ಪ್ರತಿಭೆ ಸಪ್ತಮಿ ಗೌಡ. ಸಿಂಗಾರ ಸಿರಿಯೇ ಹಾಡಿನ ಮೂಲಕ ಕನ್ನಡಿಗರ ಮನೆಮಗಳಾಗಿರುವ ಲೀಲಾಗೆ ಈಗ ಆಫರ್ ಗಳ ಮೇಲೆ ಆಫರ್. ಕನ್ನಡ ಸಿನಿಮಾಗಳಲ್ಲೇ ಮಿಂಚೋ ಕನಸು ಕಾಣ್ತಿರುವ ಸಪ್ತಮಿ ಕಾಂತಾರ ನಂತ್ರ" ಕಾ " ಅಕ್ಷರದ ಚಿತ್ರಕ್ಕೆ ಮತ್ತೆ ಆಯ್ಕೆ ಯಾಗೋ ಮೂಲಕ ಸ್ಯಾಂಡಲ್ ವುಡ್ ನಲ್ಲಿ ದರ್ಬಾರ್ ಮಾಡೋ ಸೂಚನೆ ಕೊಟ್ಟಿದ್ದಾರೆ.

ಸಪ್ತಮಿ ಗೌಡ ಅಂದ್ರೆ ಯಾರ್ ಅಂತಾರೆ ಅದ್ರೆ ಲೀಲಾ ಅಂದ್ರೆ ಪಡ್ಡೆ ಹೈಕ್ಳು ಲೀಲಾಜಾಲಾವಾಗಿ ಹೇಳ್ತಾರೆ ಕಾಂತಾರದ ಸಿಂಗಾರ ಸಿರಿ ಅಂತ. ಸಪ್ತಮಿ ಗೌಡ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ರು. ಆದ್ರೆ ಸಪ್ತಮಿಗೆ ನೇಮು ಫೇಮ್ , ಸಕ್ಸಸ್ ತಂದು ಕೊಟ್ಟಿದ್ದು ಮಾತ್ರ ರಿಷಬ್ ಶೆಟ್ಟಿ ನಿರ್ದೇಶನದ 500ಕೋಟಿ ಗಳಿಕೆಯ ಸಿನಿಮಾ ಕಾಂತಾರ.

ಇದನ್ನೂ ಓದಿ ಹಿಂಗಾ ಶಾಕ್ ಕೊಡೋದು ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ...?

ಕಾಂತಾರ ನಂತ್ರ ಸಪ್ತಮಿಗೆ ಅವಕಾಶ ಅನ್ನೋದು ಅಕಾಶದಷ್ಟೇ ವಿಸ್ತಾರವಾಗಿ ಕೈಬೀಸಿ ಕರೆದಿತ್ತು. ಆದರೆ ಎಚ್ಚರಿಕಯೆ ಹೆಜ್ಜೆ  ಇಡುತ್ತಿರುವ ಸಪ್ತಮಿ  ಬೇರೆ ಭಾಷೆಗಳ ಸಿನಿಮಾಗಳ ಆಫರ್ ಇದ್ದರೂ ನನಗೆ ಕನ್ನಡ ಸಿನಿಮಾ ಫಸ್ಟ್ ಅಂತ ಕನ್ನಡ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಡುವ ಮೂಲಕ ಮೂರನೇ ಚಿತ್ರಕ್ಕೆ ಸಹಿ ಹಾಕಿದ್ದಾರೆ. 

ಹೌದು ಕಾಂತಾರದ ದೊಡ್ಡ ಗೆಲುವಿನ ನಂತ್ರ ಸಪ್ತಮಿ ಯಾವ ಸಿನಿಮಾ ಮಾಡ್ತಾರೆ ಅನ್ನೋ ಕುತೂಹಲಕ್ಕೆ ಈಗ ಬ್ರೇಕ್ ಬಿದ್ದಿದೆ. ಕಾಂತಾರ ನಂತ್ರ ಮತ್ತೆ "ಕಾ". ಅಕ್ಷರದಿಂದ ಶುರುವಾಗುವ " ಕಾಳಿ" ಚಿತ್ರದಲ್ಲಿ  ಸಪ್ತಮಿ ಗೌಡ ನಾಯಕಿಯಾಗಿ ಕಾಣಿಸಲಿದ್ದಾರೆ. ಈ ಮೂಲಕ ಸಪ್ತಮಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ನಿನ್ನೆಯಷ್ಟೇ ಕಾಳಿ ಚಿತ್ರದ ಮುಹೂರ್ತವಾಗಿದ್ದು ತನ್ನ ಮೂರನೇ ಚಿತ್ರದಲ್ಲಿ ಅಭಿಷೇಕ್ ಅಂಬರೀಶ್ ಜೊತೆ ನಾಯಕಿಯಾಗಿ ಸ್ಕ್ರೀನ್ ಶೇರ್ ಮಾಡಲಿದ್ದಾರೆ. ವಿಶೇಷ ಅಂದ್ರೆ ಕಾಳಿ ಚಿತ್ರ ಸಪ್ತಮಿಗೌಡ ಹಾಗೂ ಅಭಿ ಇಬ್ಬರಿಗೂ ಮೂರನೇ ಸಿನಿಮಾವಾಗಿದೆ.

ಇದನ್ನೂ ಓದಿ : ಶ್ರೀ ಬಂಡಿ ಮಂಕಾಳಮ್ಮ ದೇವಸ್ಥಾನದಲ್ಲಿ ನಡೀತು 'ಕಾಳಿ' ಚಿತ್ರದ ಮುಹೂರ್ತ

 ಹೊಂಬಾಳೆಯ ಸೂಪರ್ ಸಿನಿಮಾ ಕಾಂತಾರ ನಾಯಕಿಗೂ ಅದೃಷ್ಟ ಕೊಡುತ್ತ ಅಂತ ಗೆಸ್ ಮಾಡಿದ್ದ ಮಂದಿಯೇ ಹೆಚ್ಚು . ಕಾಂತಾರ ದೈವ ಕನಕಪುರ ಸುಂದರಿ ಜೊತೆಗಿದ್ದು ಸಾಲು ಸಾಲು ಅವಕಾಶಗಳು ಬರುತ್ತಿವೆ. ಕಾಳಿ ನಂತರ ಇನ್ನು ಮೂರ್ನಾಲ್ಕು ಚಿತ್ರಗಳಿಗೆ ಸಪ್ತಮಿ ಗೌಡ ಕಮಿಟ್ ಆಗಿದ್ದು, ಆದಷ್ಟು ಬೇಗ ಆ ಚಿತ್ರಗಳ ಅಪ್ಡೇಟ್ ಕೊಡಲು ಸಪ್ತಮಿ ತೆರೆ ಮರೆಯಲ್ಲೆ ಸಜ್ಜಾಗಿದ್ದಾರೆ‌.ಅದೇನೇ ಇರಲಿ ಕಾಂತಾರ ಗೆಲುವಿನ ನಂತರ ಕನ್ನಡದ ಸಿನಿಮಾಗಳತ್ತ ತಮ್ಮ ಒಲವು ತೋರುವ ಮೂಲಕ ಕನ್ನಡಿಗರ ಹೃದಯದಲ್ಲಿ ವಾಸ ಹಾಗೂ ಅವಕಾಶ ಎರಡನ್ನು ಗಿಟ್ಟಿಸಿದ್ದಾರೆ ಅಂತಿದ್ದಾರೆ ಸಿನಿಮಾ ಮಂದಿ.
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News