ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್.. ಸಿನಿಮಾ ಲೋಕದ ಕನಸುಗಾರ.. ಇವರ ಹಾಗೇ ಕನಸು ಕಾಣಲು ಯಾರಿಂದಲೂ ಸಾಧ್ಯವೇ ಇಲ್ಲಬಿಡಿ. ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿ ಮನರಂಜಿಸಿದ ಅದ್ಭುತ ನಟ ಅಂದ್ರೆ ರವಿಮಾಮ. ಸಿನಿಮಾದಲ್ಲಿ ತಮ್ಮದೇ ಆದ ಒಂದು ಕಲ್ಪನಾ ಲೋಕವನ್ನೇ ಸೃಷ್ಟಿಸಿ ಮನಸ್ಸಿಗೆ ಹಿತವೆನಿಸುವಂತ ಹಾಡುಗಳನ್ನು ಕೊಟ್ಟ ರವಿಮಾಮ ಇತ್ತೀಚಿಗೆ ಯಾಕೋ ವೃತ್ತಿಜೀವನದಲ್ಲಿ ಸ್ವಲ್ಪ ನೊಂದಿದ್ದಾರೆ ಅನ್ನೋ ಮಾತು ಕೇಳಿಬರುತ್ತಿದೆ.
ತನ್ನ ಕಲ್ಪನೆಯ ಮತ್ತು ಕನಸಿನ ಸಿನಿಮಾಗಳನ್ನು ಅಭಿಮಾನಿಗಳು ಒಪ್ಪುತ್ತಿಲ್ಲ ಅನ್ನೋ ನೋವು ಸಹ ಕ್ರೇಜಿಸ್ಟಾರ್‍ಗೆ ಕಾಡುತ್ತಿದೆ ಅಂತಾ ಹೇಳಲಾಗುತ್ತಿದೆ. ಕನಸಿನ ಸಿನಿಮಾ ‘ರವಿ ಬೋಪಣ್ಣ’ ಹಿಟ್ ಆಗಲಿಲ್ಲ ಅನ್ನೋ ನೋವಿನಲ್ಲೇ ದೊಡ್ಡ ಮಗನ ಮದ್ವೆ ಮಾಡಿ ಮುಗಿಸಿ ಇದೀಗ ತಾವಿದ್ದ ಕನಸಿನ ಸೂರನ್ನು ಖಾಲಿ ಮಾಡಿದ್ದಾರೆ ಅನ್ನೋ ಮಾತುಗಳು ಗಾಂಧಿನಗರದಲ್ಲಿ ಕೇಳಿಬರುತ್ತಿವೆ.
ಇದನ್ನೂ ಓದಿ: Bigg Boss Kannada Season 9 : ಮೊದಲ ವಾರವೇ 12 ಮಂದಿ ನಾಮಿನೇಟ್.!
ಬಲ್ಲ ಮೂಲಗಳ ಪ್ರಕಾರ ಇತ್ತೀಚಿಗೆ ವೃತ್ತಿ ಜೀವನದಲ್ಲಿ ಆಗುತ್ತಿರೋ ಸೋಲುಗಳಿಗೆ ಮನೆಯ ವಾಸ್ತು ಸರಿಯಿಲ್ಲದಿರುವ ಕಾರಣಕ್ಕೆ ತಾವು ಇಷ್ಟಪಟ್ಟು ಕಟ್ಟಿಸಿದ್ದ ಮನೆಯನ್ನೇ ರವಿಚಂದ್ರನ್ ಖಾಲಿ ಮಾಡಿದ್ದಾರೆ ಅಂತಾ ಹೇಳಲಾಗುತ್ತಿದೆ.
ಬೆಂಗಳೂರಿನ ರಾಜಾಜಿನಗರದ ರಾಜಕುಮಾರ್ ರಸ್ತೆಯಲ್ಲಿರೋ ಮನೆಯನ್ನು ಖಾಲಿ ಮಾಡಿ ಬೇರೆಡೆ ಇಡೀ ಕುಟುಂಬ ತೆರಳಿದೆ ಅಂತಾ ಹೇಳಲಾಗುತ್ತಿದೆ. ಸಿನಿಮಾನೇ ನನ್ನ ಉಸಿರು ಅಂತಾ ಬದುಕುತ್ತಿರೋ ಕ್ರೇಜಿಸ್ಟಾರ್‍ಗೆ ಅಭಿಮಾನಿಗಳು ಆಸರೆಯಾಗಬೇಕು. ತಾವು ಇಷ್ಟಪಟ್ಟು ಮಾಡೋ ಸಿನಿಮಾಗಳನ್ನು ಅಭಿಮಾನಿಗಳು ನೋಡಿದ್ರೆ ಅದಕ್ಕಿಂತ ಖುಷಿ ರವಿಮಾಮನಿಗೆ ಬೇರೇ ಇಲ್ಲ ಅಂದ್ರೆ ತಪ್ಪಿಲ್ಲ. ಅಭಿಮಾನಿಗಳು ಯಾಕೆ ತನ್ನ ಸಿನಿಮಾಗಳನ್ನು ಒಪ್ಪುತ್ತಿಲ್ಲ ಅನ್ನೋ ನೋವು ಸದಾ ರವಿಚಂದ್ರನ್ ಅವರಿಗೆ ಕಾಡುತ್ತಿದೆ.
ಇದನ್ನೂ ಓದಿ: Salaar Leaked Scene : ಸಲಾರ್ ಸೆಟ್‌ನಿಂದ ವಿಡಿಯೋ ಲೀಕ್! ಪ್ರಭಾಸ್ ಮಾಸ್ ಲುಕ್ ಹೀಗಿದೆ..
ಸಿನಿಮಾಗಾಗಿ ಬದುಕಿರೋ ಕ್ರೇಜಿಸ್ಟಾರ್ ರವಿಚಂದ್ರನ್ ಮೊಗದಲ್ಲಿ ಮೊದಲಿನ ಮಂದಹಾಸವಿಲ್ಲ. ಸತತ ಸೋಲುಗಳಿಂದ ಕಂಗೆಟ್ಟಿರು ಕ್ರೇಜಿಸ್ಟಾರ್ ಇದೀಗ ತಮ್ಮ ತಾಯಿಗೂ ಇಷ್ಟವಾಗಿದ್ದ ಸೂರನ್ನು ಬಿಟ್ಟು ತೆರಳಿದ್ದಾರೆ. ತಾಯಿಯ ಆಸೆಯಂತೆ ತಮ್ಮ ಕೊನೆಗಾಲದವರೆಗೂ ಅದೇ ಮನೆಯಲ್ಲಿ ಕಳೆದರು. ತಮ್ಮಿಬ್ಬರ ಮಕ್ಕಳ ಮದುವೆಯನ್ನು ಸಹ ಇದೇ ಮನೆಯಲ್ಲಿ ಮಾಡಿ ಮುಗಿಸಿದ್ದರು. ಆತ್ಮೀಯರ ಸಲಹೆಯಂತೆ ಇದೀಗ ಮನೆ ಶಿಫ್ಟ್ ಮಾಡಿದ್ದಾರೆಂತೆ. ರವಿಮಾಮನ ಸಿನಿಮಾಗಳನ್ನು ಅಭಿಮಾನಿಗಳು ಹೆಚ್ಚು ಹೆಚ್ಚು ನೋಡಬೇಕಿದೆ. ಇನ್ನಾದ್ರೂ ಆ ದೇವರು ಮೊದಲಿನಂತೆ ಕ್ರೇಜಿಸ್ಟಾರ್ ಸಿನಿಮಾಗಳು ಯಶ ಕಾಣುವಂತೆ ಆಶೀರ್ವಾದ ಮಾಡಲಿ ಅನ್ನೋ ಆಶಯ ನಮ್ಮದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.